ಔರಂಗಾಬಾದ್​:ಕೊವಿಡ್​-19 ನಿರ್ಬಂಧದ ನಡುವೆಯೂ ಪ್ರಾರ್ಥನೆಗಾಗಿ ಮಸೀದಿಗೆ ತೆರಳುತ್ತಿದ್ದ ಎಐಎಂಐಎಂ ಸಂಸದ ಇಮ್ತಿಯಾಜ್​ ಜಲೀಲ್​ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಹಾರಾಷ್ಟ್ರದಲ್ಲಿ ಕೊವಿಡ್​-19 ಪ್ರಮಾಣ ಹೆಚ್ಚಿರುವುದರಿಂದ ಧಾರ್ಮಿಕ ಸ್ಥಳಗಳನ್ನೂ ಇನ್ನೂ ತೆರೆದಿಲ್ಲ. ಹೀಗಿರುವಾಗಲೂ ಈ ಸಂಸದ ಮಸೀದಿಗೆ ಹೊರಟಿದ್ದರು.
ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳು, ಪ್ರಾರ್ಥನಾ ಕೇಂದ್ರಗಳ ಬಾಗಿಲನ್ನು ತೆರೆಯಲು ಸರ್ಕಾರ ಮುಂದಾಗದಿದ್ದರೆ, ನಾನು ಖಂಡಿತ ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಕಳೆದವಾರ ಜಲೀಲ್​ ಹೇಳಿದ್ದರು.
ಅದರಂತೆಯೇ ಇಂದು ಶಹಗಂಜ್​ ಮಸೀದಿಗೆ ತೆರಳುತ್ತಿರುವಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ನಂತರ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸ್​ ಮೂಲಗಳು ಮಾಹಿತಿ ನೀಡಿವೆ.ಇಷ್ಟಾದರೂ ಜಲೀಲ್​ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ. ಶೀಘ್ರವೇ ಮಸೀದಿಗಳನ್ನು ತೆರೆಯುವ ನಿರ್ಧಾರ ಮಾಡದಿದ್ದರೆ ರಾಜ್ಯಾದ್ಯಂತ ಇದೇ ನಡೆಯುತ್ತದೆ. ಎಲ್ಲರೂ ಮಸೀದಿಗಳಿಗೆ ಹೋಗುತ್ತಾರೆ ಎಂದೂ ಹೇಳಿದ್ದಾರೆ.ಇದನ್ನೂ ಓದಿ:ಹುಟ್ಟಿದ ದಿನವೇ ಆತ್ಮಹತ್ಯೆ ಮಾಡಿಕೊಂಡ ಯುವತಿ; ಅದಕ್ಕೂ ಮೊದಲು ನಡೆದಿತ್ತು ಅಕ್ಕನೊಂದಿಗೆ ಜಗಳ
ಮಂಗಳವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಜಲೀಲ್​, ಪ್ರಸಿದ್ಧ ಖಡ್ಕೇಶ್ವರ್​ ದೇವಸ್ಥಾನಕ್ಕೂ ನಾನು ಹೋಗುತ್ತೇನೆ. ಶೀಘ್ರವೇ ಭಕ್ತರ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು ಎಂದು ದೇಗುಲ ಆಡಳಿತಕ್ಕೆ ಜ್ಞಾಪನ ಪತ್ರ ನೀಡುತ್ತೇನೆ ಎಂದಿದ್ದರು. ಆದರೆ ಜಲೀಲ್​ ಹೇಳಿಕೆಯಿಂದ ಶಿವಸೇನೆ ನಾಯಕರು ಕುಪಿತಗೊಂಡಿದ್ದರು. ಶಿವಸೇನೆ ಮತ್ತು ಎಐಎಂಐಎಂ ಕಾರ್ಯಕರ್ತರ ನಡುವೆ ಘರ್ಷಣೆ ಕೂಡ ಆಗಿತ್ತು.(ಏಜೆನ್ಸೀಸ್​)
ವಧುವಿನ ಕೆನ್ನೆಗೆ ಚುಂಬಿಸುತ್ತಿರುವುದು ಮೌಲ್ವಿಯಲ್ಲ: ವೈರಲ್​ ವಿಡಿಯೋ ಹಿಂದಿನ ಸತ್ಯಾಂಶ ಇಲ್ಲಿದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − three =
Remember me
