ನವದೆಹಲಿ:ರಾಜ್ಯದಲ್ಲಿ ಆರೋಗ್ಯ ಕ್ಷೇತ್ರ ಮತ್ತಷ್ಟು ಬಲವರ್ಧನೆಗಾಗಿ ಏಮ್ಸ್ ಸಂಸ್ಥೆಯನ್ನು ಆರಂಭಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ, ಏಮ್ಸ್ ಸ್ಥಾಪನೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯದ ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಏಮ್ಸ್ ಸಂಸ್ಥೆಯೊಂದನ್ನು ಆರಂಭಿಸಬೇಕೆಂದು ಸಚಿವ ಡಾ.ಕೆ.ಸುಧಾಕರ್, ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೆ ವೈದ್ಯಕೀಯ ಶಿಕ್ಷಣ ಕ್ಷೇತ್ರ ಸಾಕಷ್ಟು ಬೆಳೆದಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ಶಿಕ್ಷಣ ಪಡೆದು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರಾಗುವ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಲು ಏಮ್ಸ್ ಸಂಸ್ಥೆ ಸ್ಥಾಪಿಸುವುದು ಸೂಕ್ತವಾಗಿದೆ ಎಂದು ಮನವಿಯಲ್ಲಿ ಕೋರಿದ್ದಾರೆ.
ಉತ್ತರ ತಾಲೂಕಿನಲ್ಲಿ ನಿಮ್ಹಾನ್ಸ್ ಕ್ಯಾಂಪಸ್:ಕೇಂದ್ರ ಸಚಿವರನ್ನು ಭೇಟಿಯಾದ ವೇಳೆ ನಿಮಾನ್ಸ್ ಸಂಸ್ಥೆಯ ಹೊಸ ಕ್ಯಾಂಪಸ್ ನಿರ್ಮಾಣ ಕುರಿತು ಡಾ.ಕೆ.ಸುಧಾಕರ್ ಚರ್ಚೆ ನಡೆಸಿದರು. 2021ರಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪಿಸಲು ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಇದರ ಬದಲು, ನಿಮ್ಹಾನ್ಸ್ ಪಿಜಿ ಸಂಸ್ಥೆ ಆರಂಭಿಸುವಂತೆ ಆರ್ಥಿಕ ಸ್ಥಾಯಿ ಸಮಿತಿ ಸಲಹೆ ನೀಡಿತ್ತು. ಅದರಂತೆ, 2,100 ಕೋಟಿ ರೂ. ವೆಚ್ಚದಲ್ಲಿ 2,344 ಹಾಸಿಗೆಯ ಕಟ್ಟಡ ಹಾಗೂ ಪಿಜಿ ಕೇಂದ್ರವನ್ನು 8 ವರ್ಷಗಳಲ್ಲಿ ನಿರ್ವಿುಸುವ ಪ್ರಸ್ತಾವವನ್ನು 2022ರ ಫೆಬ್ರವರಿಯಲ್ಲಿ ಸಲ್ಲಿಸಲಾಗಿತ್ತು. ಆದರೆ ಇದನ್ನು ಪರಿಷ್ಕರಿಸುವಂತೆ ಸಮಿತಿಯು ಸಲಹೆ ನೀಡಿತ್ತು. ಆದ್ದರಿಂದ 538 ಹಾಸಿಗೆಗಳ ಪಾಲಿ ಟ್ರಾಮಾ ಕೇಂದ್ರ ಹಾಗೂ ಪಿಜಿ ಸೆಂಟರ್ ನಿರ್ವಿುಸುವ ಡಿಪಿಆರ್ ಸಿದ್ಧಪಡಿಸಿ ನೀಡಲಾಗಿದೆ. ಈ ಯೋಜನೆಯಲ್ಲಿ ಕಟ್ಟಡ ನಿರ್ವಣಕ್ಕೆ 489 ಕೋಟಿ ರೂ. ಖರ್ಚಾಗಲಿದ್ದು, 260.76 ಕೋಟಿ ರೂ. ವೈದ್ಯಕೀಯ ಉಪಕರಣಗಳಿಗೆ ಹಾಗೂ ವಾರ್ಷಿಕ 159 ಕೋಟಿ ರೂ. ಮಾನವ ಸಂಪನ್ಮೂಲಕ್ಕೆ ಖರ್ಚಾಗಲಿದೆ.
ಮೋದಿ, ಮಾಂಡವೀಯಗೆ ಧನ್ಯವಾದ ಅರ್ಪಣೆ:ರಾಜ್ಯಕ್ಕೆ ಏಮ್ಸ್ ಸಂಸ್ಥೆಯನ್ನು ನೀಡಲು ಸಕಾರಾತ್ಮಕವಾಗಿ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಸಂಸ್ಥೆಯು ರಾಜ್ಯದಲ್ಲಿ ಸ್ಥಾಪನೆಯಾದರೆ ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಮತ್ತಷ್ಟು ಮುಂಚೂಣಿಗೆ ಬರಲು ಹಾಗೂ ರಾಜ್ಯದ ಜನರಿಗೆ ವಿಶ್ವದರ್ಜೆಯ ಆರೋಗ್ಯ ಸೇವೆ ದೊರೆಯಲು ಸಹಾಯಕವಾಗಲಿದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಶಿಕ್ಷಣ, ಸಂಶೋಧನೆಗೆ ಹೊಸ ವೇದಿಕೆ:ಆಲ್​ಇಂಡಿಯ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್್ಸ) ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದ ಇತಿಹಾಸವಿದೆ. ಪ್ರಸ್ತುತ 24 ಕಡೆಗಳಲ್ಲಿ ಏಮ್್ಸ ಕಾರ್ಯನಿರ್ವಹಿಸುತ್ತಿವೆ. ಇದು ಸರ್ಕಾರಿ ಸ್ವಾಯತ್ತ ವೈದ್ಯಕೀಯ ಸಂಸ್ಥೆಯಾಗಿರಲಿದ್ದು, 1956ರಿಂದಲೂ ದೇಶದಲ್ಲಿ ಬೇರೂರಿದೆ. ವೈದ್ಯಕೀಯ ಶಿಕ್ಷಣ ಬೋಧನೆ, ಸಂಶೋಧನೆ ಮತ್ತು ರೋಗಿಗಳ ಆರೈಕೆಗಾಗಿ ಈ ಸಂಸ್ಥೆ ಸಮಗ್ರ ಸೌಲಭ್ಯಗಳನ್ನು ಹೊಂದಿರುತ್ತದೆ. ಇಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದ ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್​ಗಳ ಮೂಲಕ ಬೋಧನಾ ಕಾರ್ಯಕ್ರಮ ನಡೆಸಿ ತನ್ನದೇ ಪದವಿಗಳನ್ನು ನೀಡುತ್ತದೆ. ಪದವಿಪೂರ್ವ ವೈದ್ಯಕೀಯ ಪ್ರವೇಶಕ್ಕೆ ಪ್ರವೇಶ ಪಡೆಯಲು ಆಕಾಂಕ್ಷಿಗಳು ಏಮ್ಸ್ ಎಂಬಿಬಿಎಸ್​ನ ಅರ್ಹತಾ ಮಾನದಂಡ ಪೂರೈಸಬೇಕು. ದೆಹಲಿಯ ಆಲ್ ಇಂಡಿಯಾ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಏಮ್ಸ್ ಅರ್ಹತಾ ಮಾನದಂಡಗಳನ್ನು ನಿರ್ದಿಷ್ಟಪಡಿಸುತ್ತದೆ. ಏಮ್್ಸ ವೈದ್ಯಕೀಯ ಗುಣಮಟ್ಟದ ಸೇವೆಗೆ ಹೆಸರುವಾಸಿ. ಅದರಲ್ಲೂ ವೈದ್ಯಕೀಯ ಸಂಶೋಧನೆಗೆ ಒಂದು ಉನ್ನತ ಸಂಸ್ಥೆಯಾಗಿರಲಿದೆ. ತಜ್ಞ ವೈದ್ಯರ ದೊಡ್ಡ ತಂಡ ಜನರಿಗೆ ಲಭ್ಯವಾಗಲಿದೆ. ಹೊಸದಾಗಿ ಬರುವ ರೋಗಗಳಿಗೆ ಹಾಗೂ ದೀರ್ಘಕಾಲದಿಂದ ಇರುವ ಸ್ಥಳೀಯ ರೋಗಗಳಿಗೆ ಸಂಬಂಧಿಸಿದಂತೆ ಸಂಶೋಧನೆಯನ್ನೂ ನಡೆಸಲಿದೆ.
ನೀಗಲಿದೆ ರಾಜ್ಯದ ಕೊರಗು:ಕರ್ನಾಟದಲ್ಲಿ ಏಮ್್ಸ ಇಲ್ಲ ಎಂಬ ಕೂಗು ಬಹಳ ವರ್ಷಗಳಿಂದಲೂ ಇದೆ. 2020ರಲ್ಲಿ ಆಂಧ್ರಪ್ರದೇಶ, 2021ರಲ್ಲಿ ನೆರೆಯ ತಮಿಳುನಾಡಿಗೂ ಏಮ್್ಸ ಘೋಷಣೆಯಾಗಿತ್ತು. ಇದೀಗ ಕರ್ನಾಟದಲ್ಲೂ ಅತ್ಯುನ್ನತ ವೈದ್ಯಕೀಯ ಸಂಸ್ಥೆ ಸ್ಥಾಪನೆಯಾಗುವ ಮೂಲಕ ಬಹುವರ್ಷಗಳ ಕೊರತೆ ನೀಗಲಿದೆ.
ಕುತುಬ್ ಮಿನಾರ್ ಕಟ್ಟಿಸಿದ್ದು ಕುತ್ಬುದ್ದೀನ್​ ಅಲ್ಲ; ಅಷ್ಟಕ್ಕೂ ಅದರ ನಿರ್ಮಾಣದ ಉದ್ದೇಶವೇ ಬೇರೆ ಇತ್ತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
