ಹೈದ್ರಾಬಾದ್​: ಇಂಧನ ಸೋರಿಕೆ ಹಿನ್ನೆಲೆಯಲ್ಲಿ ಏರ್​ ಏಷ್ಯಾ ವಿಮಾನ ಹೈದ್ರಾಬಾದ್​ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಜೈಪುರದಿಂದ ಹೈದ್ರಾಬಾದ್​ಗೆ ಆಗಮಿಸಿದ ವಿಮಾನದ ಇಂಜಿನ್​​ನಲ್ಲಿ ಇಂಧನ ಸೋರಿಕೆಯಾದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿತು. ವಿಮಾನದಲ್ಲಿ 76 ಮಂದಿ ಪ್ರಯಾಣಿಕರಿದ್ದೂ ಎಲ್ಲರೂ ಸುರಕ್ಷಿತವಾಗಿದ್ದಾರೆ.
ಇದನ್ನೂ ಓದಿಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಪ್ರಕರಣ: ಆರೋಪಿ ಸಿಕ್ಕಿಬೀಳಲು ಆತನ ನಡೆಯೇ ಕಾರಣವಾಯ್ತು!
ಜೈಪುರದಿಂದ ಮಧ್ಯಾಹ್ನ 1.25ಕ್ಕೆ ಹೈದ್ರಾಬಾದ್​ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್​ ಏಷ್ಯಾ ವಿಮಾನದಲ್ಲಿ ಇಂಧನ ಸೋರಿಕೆಯಾಗುತ್ತಿತ್ತು. ಇದನ್ನು ಗಮನಿಸಿದ ಪೈಲಟ್​ ಕೂಡಲೇ ಹೈದ್ರಾಬಾದ್​ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿ ತುರ್ತು ಭೂಸ್ಪರ್ಶ​ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು. ಇದಕ್ಕೆ ಒಪ್ಪಿದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಇತರೆ ಎಲ್ಲ ಕೆಲಸಗಳನ್ನು ರದ್ದುಪಡಿಸಿದರು. ವಿಮಾನ ಸುರಕ್ಷಿತವಾಗಿ ಇಳಿಯುವವರೆಗೆ ಯಾವುದೇ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಲಿಲ್ಲ.
ವಿಮಾನ ನಿಲ್ದಾಣ ಅಧಿಕಾರಿಗಳಿಂದ ತುರ್ತು ಭೂಸ್ಪರ್ಶಕ್ಕೆ ಅವಕಾಶ ಸಿಕ್ಕ ಕೂಡಲೇ ಪೈಲೆಟ್​ ಇಂಧನ ಸೋರಿಕೆಯಾಗುತ್ತಿದ್ದ ಇಂಜಿನ್​ ಸ್ಥಗಿತಗೊಳಿಸಿ ಮತ್ತೊಂದು ಇಂಜಿನ್​ನಲ್ಲಿ ವಿಮಾನವನ್ನು ಸುಕ್ಷಿತವಾಗಿ ಇಳಿಸಿದರು.
ವಿಮಾನದ ಇಂಜಿನ್​ನಲ್ಲಿ ಇಂಧನ ಸೋರಿಕೆಯಾಗಿದ್ದನ್ನು ತನಿಖೆ ನಡೆಸಲು ಏರ್​ ಏಷ್ಯಾ ಮುಂದಾಗಿದೆ. ಇಂಧನ ಸೋರಿಕೆಯ ಎಲ್ಲ ಮಾಹಿತಿಯನ್ನು ಡಿಜಿಸಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)
FACT CHECK: ಹಾದಿ ತಪ್ಪಿರುವ ಸೂರತ್ ಶ್ರಮಿಕ್​ ರೈಲು, ಸಾವು: ಈ ವರದಿಯಲ್ಲಿ ಸತ್ಯಾಂಶ ಇದೆಯೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + two =
Remember me
