ನವದೆಹಲಿ:ಸ್ಕೂಟರ್ ಮತ್ತು ಮೋಟಾರ್ ಸೈಕಲ್​ಗಳಂಥ ದ್ವಿಚಕ್ರ ವಾಹನಗಳ ಸವಾರರ ಸುರಕ್ಷತೆಗಾಗಿ ಕಾರ್​ಗಳಲ್ಲಿ ಇರುವ ರೀತಿಯಲ್ಲಿ ಏರ್​ಬ್ಯಾಗ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಪಿಯಾಜ್ಜಿಯೋ ಸಮೂಹವು ವಾಹನ ಸುರಕ್ಷತಾ ಸಾಧನಗಳ ಕಂಪನಿ ಆಟೋಲಿವ್​ನೊಂದಿಗೆ ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ.
ಮಿಲಿಸೆಕೆಂಡ್ ಅವಧಿಯೊಳಗೆ ಏರ್​ಬ್ಯಾಗ್ ತೆರೆದುಕೊಂಡು ಚಾಲಕರು ಹಾಗೂ ಹಿಂಬದಿ ಸವಾರರಿಗೆ ರಕ್ಷಣೆ ಒದಗಿಸಲಿದೆ. ವಾಹನದ ಚೌಕಟ್ಟಿನ ಮೇಲ್ಭಾಗದಲ್ಲಿ ಏರ್​ಬ್ಯಾಗ್ ಅಳವಡಿಸಲಾಗುತ್ತದೆ. ಅವಘಡ ಸಂಭವಿಸಿದ ಮಿಲಿ ಸೆಕೆಂಡ್​ನೊಳಗೆ ಅದು ಕಾರ್ಯಾಚರಿಸಲಿದೆ ಎಂದು ಮೂಲಗಳು ತಿಳಿಸಿವೆ. ಆಟೋಲಿವ್ ಈಗಾಗಲೇ ಸುಧಾರಿತ ಸಿಮ್ಯುಲೇಶನ್ ಸಾಧನಗಳಿಂದ ಇಂಥ ಏರ್​ಬ್ಯಾಗ್​ನ ಆರಂಭಿಕ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ, ಉತ್ಪನ್ನದ ಪೂರ್ಣ ಪ್ರಮಾಣದ ಪರೀಕ್ಷೆಯನ್ನೂ ನಡೆಸಿದೆ.
ಪಿಯಾಜ್ಜಿಯೋ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಏರ್​ಬ್ಯಾಗ್​ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಆಟೋಲಿವ್​ಗೆ ನೆರವಾಗಲಿದೆ. ಸದ್ಯೋಭವಿಷ್ಯದಲ್ಲಿ ವಾಣಿಜ್ಯ ಮಟ್ಟದಲ್ಲಿ ಅದರ ಉತ್ಪಾದನೆಗೆ ಕೂಡ ಅದು ಸಹಾಯಕವಾಗಲಿದೆ. ಹೆಚ್ಚು ಅಪಘಾತ ನಡೆಯುವ ರಸ್ತೆಗಳಲ್ಲಿ ಸಾಗುವ ದ್ವಿಚಕ್ರ ವಾಹನಗಳ ಸವಾರರಿಗೆ ಉತ್ತಮ ಸುರಕ್ಷತೆ ಒದಗಿಸುವುದು ಏರ್​ಬ್ಯಾಗ್​ನ ಗುರಿಯಾಗಿದೆ.
ಚಲಿಸುತ್ತಿದ್ದ ರೈಲಿನಿಂದ ಬಿದ್ದಾಕೆ ಸ್ವಲ್ಪದರಲ್ಲೇ ಬಚಾವ್​; ‘ತ್ರಿಮೂರ್ತಿ’ಗಳಂತೆ ಧಾವಿಸಿ ರಕ್ಷಿಸಿದ ರೈಲ್ವೆ ಪೊಲೀಸರು
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − 13 =
Remember me
