ಲಡಾಖ್:ಭಾರತೀಯ ವಾಯುಪಡೆಗೆ (ಐಎಎಫ್) ಸೇರಿದ ಅಪಾಚೆ ಹೆಲಿಕಾಪ್ಟರ್ ಲಡಾಖ್‌ನಲ್ಲಿ ಕಾರ್ಯಾಚರಣೆಯ ವೇಳೆ ದಿಢೀರ್​ಭೂಸ್ಪರ್ಶ ಮಾಡಿದ್ದು, ಭೂಪ್ರದೇಶ ಮತ್ತು ಎತ್ತರದ ಆಲ್ಟಿಟ್ಯುಡ್​​ ಕಾರಣದಿಂದಾಗಿ ಹಾನಿಗೊಳಗಾಗಿದೆ ಎಂದು ಐಎಎಫ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಲೋಕ ಫೈಟ್ ನಿಗಾ ಟೈಟ್: ಅಕ್ರಮಗಳ ತಡೆಗೆ ಚುನಾವಣಾ ಆಯೋಗದ ಹದ್ದಿನ ಕಣ್ಣು
ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ. ಘಟನೆಯ ಕುರಿತು ನ್ಯಾಯಾಲಯದ ತನಿಖೆಗೆ ಆದೇಶಿಸಲಾಗಿದೆ. “ಐಎಎಫ್ ಅಪಾಚೆ ಹೆಲಿಕಾಪ್ಟರ್ 03 ಏಪ್ರಿಲ್ 24 ರಂದು ಲಡಾಖ್ ಎಒಆರ್‌ನಲ್ಲಿ ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಮುನ್ನೆಚ್ಚರಿಕೆ ಲ್ಯಾಂಡಿಂಗ್ ನಡೆಸಿತು. ಈ ಲ್ಯಾಂಡಿಂಗ್ ಪ್ರಕ್ರಿಯೆಯ ವೇಳೆ ಇದು ಏರಿಳಿತದ ಭೂಪ್ರದೇಶ ಮತ್ತು ಎತ್ತರದ ಕಾರಣದಿಂದಾಗಿ ಹಾನಿಗೆ ಒಳಪಟ್ಟಿದೆ” ಎಂದು ಐಎಎಫ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
“ಹೆಲಿಕಾಪ್ಟರ್​ನಲ್ಲಿದ್ದ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದು, ಹತ್ತಿರದ ವಾಯುನೆಲೆಗೆ ಬಂದಿಳಿದ್ದಾರೆ. ಸೂಕ್ತ ಕಾರಣವನ್ನು ತನಿಖೆ ಮಾಡಲು ನ್ಯಾಯಾಲಯದ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಇಂಡಿಯನ್​​ ಏರ್​ ಫೋರ್ಸ್​ ಮಾಹಿತಿ ಹಂಚಿಕೊಂಡಿದೆ. ಐಎಎಫ್ ತನ್ನ ರೋಟರಿ ವಿಭಾಗಕ್ಕೆ ಬಲ ನೀಡಲು 22 ಯುಎಸ್ ನಿರ್ಮಿತ ದಾಳಿ ಮಾಡುವ ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಿದೆ.
ಇದನ್ನೂ ಓದಿ:ವಿಚ್ಛೇದಿತ ನಿರ್ಮಾಪಕನ ಜತೆ ಮದುವೆ: ಸೌತ್​ ಬ್ಯೂಟಿ ಅಂಜಲಿ ಶಾಕಿಂಗ್​ ಕಾಮೆಂಟ್​ ವೈರಲ್​
ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಕೆಲವು ತಾಂತ್ರಿಕ ದೋಷವನ್ನು ಶಂಕಿಸಿ ಪಂಜಾಬ್‌ನ ಸಂಗ್ರೂರ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಈ ಘಟನೆಯ ನಂತರ ಲಡಾಖ್​ನಲ್ಲಿ ಅಪಾಚೆ ಹೆಲಿಕಾಪ್ಟರ್​ ಸಹ ತುರ್ತು ಭೂಸ್ಪರ್ಶಕ್ಕೆ ಕಾರಣವಾಗಿದೆ,(ಏಜೆನ್ಸೀಸ್).
2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + one =
Remember me
