ನವದೆಹಲಿ:ಜಿ20 ಶೃಂಗಸಭೆಗಾಗಿ ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಯೊಬ್ಬರು ನಡೆಸಿದ ಅದ್ಭುತ ಸ್ಕೈಡೈವಿಂಗ್ ಪ್ರದರ್ಶನವು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಜಿ20 ಧ್ವಜವನ್ನು ನೆಲದಿಂದ ಸರಿಸುಮಾರು 10,000 ಸಾವಿರ ಅಡಿ ಎತ್ತರದಲ್ಲಿ ಹಾರಾಡಿಸಿದ್ದಾರೆ.
‘ವಸುಧೈವ ಕುಟುಂಬ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಥೀಮ್‌ನೊಂದಿಗೆ ಜಿ- 20 2023 ಧ್ವಜವನ್ನು ಹೊತ್ತ ವಿಂಗ್ ಕಮಾಂಡರ್ ಗಜಾನಂದ್ ಯಾದವ್ ಅವರ ಸ್ಕೈಡೈವಿಂಗ್ ಪ್ರದರ್ಶನವು ಮಾಡಿದ್ದಾರೆ. ಒಂದೆಡೆ ಜಿ20 ಶೃಂಗಸಭೆಗಾಗಿ ವಿಶ್ವ ನಾಯಕರೆಲ್ಲ ದೆಹಲಿಗೆ ಆಗಮಿಸುತ್ತಿರುವ ಹೊತ್ತಿನಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಅಧಿಕಾರಿ ಗಜಾನಂದ್ ಯಾದವ್ ಸ್ಕೈಡೈವಿಂಗ್ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
*#G20Celebration* Wg Cdr Gajanand Yadava posted at Air Force Station Madh Island celebrated G20 summit in the blue sky. He skydived from 10000 feet with G20 handheld flag at Air Force Station Phalodipic.twitter.com/wuToSLgBay
— C PRO South Western Air Command (@SWAC_IAF)March 7, 2023

G20 2023 ಧ್ವಜವನ್ನು ಹಿಡಿದುಕೊಂಡು 10 ಸಾವಿರ ಅಡಿ ಎತ್ತರದಲ್ಲಿ ಹಾರುವ ಮೂಲಕ ಗಜಾನಂದ ಯಾದವ್ ದಿಟ್ಟ ಪ್ರದರ್ಶನ ನೀಡಿದ್ದಾರೆ. ಈ ವಿಡಿಯೋ ತುಣುಕನ್ನು ಈ ವರ್ಷದ ಮಾರ್ಚ್‌ನಿಂದ ಮಾಡಲಾಗಿದೆ ಆದರೆ ಇತ್ತೀಚೆಗೆ ಮತ್ತೆ ಕಾಣಿಸಿಕೊಂಡಿದೆ.
ಜಿ 20 ಶೃಂಗಸಭೆಗಾಗಿ 40 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು, ಸರ್ಕಾರಿ ಅಧಿಕಾರಿಗಳು ಮತ್ತು ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ನವದೆಹಲಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಪ್ರಗತಿ ಮೈದಾನದ ಪ್ರತಿಷ್ಠಿತ ಭಾರತ ಮಂಟಪದ ಸಂಕೀರ್ಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಸ್ಥೆಯ 51% ಪಾಲನ್ನು ಟಾಟಾ ಸಂಸ್ಥೆಗೆ ಮಾರಾಟ ಮಾಡುವ ಕುರಿತು ಚರ್ಚೆಮಾಡಿಲ್ಲ: ಹಲ್ದಿರಾಮ್ಸ್

Sign in to your account
Please enter an answer in digits:six − 1 =
Remember me
