ನವದೆಹಲಿ:ಸ್ವದೇಶಿ ನಿರ್ವಿುತ ತೇಜಸ್ ಯುದ್ಧ ವಿಮಾನದ ಎರಡನೇ ಸ್ಕ್ವಾಡ್ರನ್ ಬುಧವಾರ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ತಮಿಳುನಾಡಿನ ಕೊಯಮತ್ತೂರು ವಾಯುನೆಲೆಯಲ್ಲಿ ವಾಯುಪಡೆ ಮುಖ್ಯಸ್ಥ ಆರ್.ಕೆ. ಎಸ್ ಭದೌರಿಯಾ ತೇಜಸ್ ಯುದ್ಧ ವಿಮಾನಗಳನ್ನು ಲೋಕಾರ್ಪಣೆ ಮಾಡಿದರು. ಬೆಂಗಳೂರು ಮೂಲದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್)ನಲ್ಲಿ ತಯಾರಾಗಿರುವ ತೇಜಸ್ ಯುದ್ಧ ವಿಮಾನ ಉನ್ನತ ಕಾರ್ಯವೈಖರಿ ಹೊಂದಿದೆ. ಮಿಗ್ 21 ಯುದ್ಧ ವಿಮಾನದ ಮುಂದಿನ ಸರಣಿಯಾಗಿ ತಯಾರಿಸಲಾಗಿರುವ ಈ ವಿಮಾನವು 15,200 ಮೀಟರ್ ಎತ್ತರದಲ್ಲಿ ಗಂಟೆಗೆ 2,205 ಕಿಮೀ ವೇಗದಲ್ಲಿ ಹಾರಬಲ್ಲದು. ಲೇಸರ್ ನಿರ್ದೇಶಿತ ಬಾಂಬ್, ನಿರ್ವಹಣೆ ಸೇರಿ ಅನೇಕ ವಿಶೇಷ ಸೌಲಭ್ಯಗಳು ಇದರಲ್ಲಿವೆ. ಹಾರಾಡುತ್ತಿರುವಾಗಲೇ ಇಂಧನ ತುಂಬಿಸಿಕೊಳ್ಳುವಂತಹ ಸಾಮರ್ಥ್ಯ ಇದರಲ್ಲಿದೆ. 2016ರಿಂದ ಮೊದಲ ಸ್ಕಾ್ವಡ್ರನ್ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದೆ. ಅನೇಕ ಕಾರ್ಯಾಚರಣೆಗಳಲ್ಲೂ ಪಾಲ್ಗೊಂಡಿದೆ.
ತೇಜಸ್ ಹಾದಿ
ಮಿಗ್-21 ವಿಮಾನ ಬದಲು ದೇಶೀಯ ಲಘು ಯುದ್ಧ ವಿಮಾನ (ಎಲ್​ಎಸಿ) ಅಭಿವೃದ್ಧಿ ಯೋಜನೆಗೆ 1984ರಲ್ಲಿ ಸರ್ಕಾರ ಅನುಮೋದನೆ ನೀಡಿತ್ತು. 1986ರಲ್ಲಿ ಸರ್ಕಾರ ಈ ಯೋಜನೆಗಾಗಿ 575 ಕೋಟಿ ರೂಪಾಯಿಯನ್ನು ಮಂಜೂರು ಮಾಡಿತು. ಅದಾದ ನಂತರ ಎಚ್​ಎಎಲ್ ಯುದ್ಧ ವಿಮಾನ ತಯಾರಿಯಲ್ಲಿ ತೊಡಗಿತು. ತಯಾರಾದ ಯುದ್ಧವಿಮಾನವನ್ನು 2001ರಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಬೇರೆಲ್ಲ ಯುದ್ಧ ವಿಮಾನಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲದ್ದಾಗಿದ್ದ ಇದಕ್ಕೆ 2003ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತೇಜಸ್ ಎಂದು ನಾಮಕರಣ ಮಾಡಿದರು. 2016ರಲ್ಲಿ ಮೊದಲನೇ ಬಾರಿಗೆ ಈ ತೇಜಸ್​ನ್ನು ಫ್ಲೈಯಿಂಗ್ ಡ್ಯಾಗರ್ಸ್ ಎಂದು ಕರೆಯಲ್ಪಡುವ ನಂ. 45 ಸ್ಕಾ್ವಡ್ರನ್​ಗೆ ಸೇರಿಸಲಾಯಿತು. ಅದೇ ವರ್ಷದಲ್ಲಿ ಬಹರೇನ್​ನಲ್ಲಿ ನಡೆದ ಅಂತಾರಾಷ್ಟ್ರೀಯ ಏರ್ ಷೋನಲ್ಲಿ ತೇಜಸ್ ಪ್ರದರ್ಶನ ನೀಡಿ, ಮೆಚ್ಚುಗೆಗೆ ಪಾತ್ರವಾಯಿತು. ಭಾರತದಲ್ಲಿ ಮೊದಲನೇ ಬಾರಿಗೆ 2017ರ ಗಣರಾಜ್ಯೋತ್ಸವದಲ್ಲಿ ಪ್ರದರ್ಶನ ನೀಡಿತು. 2018ರಲ್ಲಿ ಮಿಲಿಟರಿ ತಾಲೀಮು ಗಗನ್ ಶಕ್ತಿಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿತು.
ಫ್ಲೈಯಿಂಗ್ ಬುಲೆಟ್ಸ್
ಪ್ರಸ್ತುತ ಸ್ಕ್ವಾಡ್ರನ್ 18ನಲ್ಲಿ ತೇಜಸ್ ಯುದ್ಧವಿಮಾನ ನಿಯೋಜನೆ ಮಾಡಲಾಗಿದೆ. ವಿಶೇಷ ಶಕ್ತಿ ಮತ್ತು ಸಾಮರ್ಥ್ಯ ಹೊಂದಿರುವ ಈ ತಂಡವನ್ನು ಫ್ಲೈಯಿಂಗ್ ಬುಲೆಟ್ಸ್ ಎಂದೂ ಕರೆಯಲಾಗುತ್ತದೆ. ಕಠಿಣ ಕಾರ್ಯಾಚರಣೆಗಳನ್ನು ಕೈಗೊಳ್ಳಲು 1965ರ ಏಪ್ರಿಲ್ 15ರಂದು ಈ ತಂಡವನ್ನು ರಚಿಸಲಾಯಿತು. ಈ ತಂಡದಲ್ಲಿ ಮೊದಲು ಮಿಗ್-27 ಯುದ್ಧ ವಿಮಾನಗಳನ್ನು ಬಳಸಿಕೊಳ್ಳಲಾಯಿತು. ಇದು 1971ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು. ತಂಡದ ಫ್ಲೈಯಿಂಗ್ ಅಧಿಕಾರಿ ನಿರ್ಮಲ್ ಜಿತ್ ಸಿಂಗ್ ಹುತಾತ್ಮರಾಗಿದ್ದರು. ಅವರಿಗೆ ಮರಣೋತ್ತರವಾಗಿ ಪರಮವೀರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶ್ರೀನಗರ ವಾಯುನೆಲೆಯಿಂದ ಕಾರ್ಯ ನಿರ್ವಹಿಸಿದ ಮೊದಲ ತಂಡ ಇದಾಗಿದೆ. ಈ ಕಾರಣಕ್ಕಾಗಿ ತಂಡಕ್ಕೆ ಕಾಶ್ಮೀರ ಕಣಿವೆಯ ರಕ್ಷಕರು ಎನ್ನುವ ಹೆಸರೂ ಇದೆ. 2016ರ ಏಪ್ರಿಲ್ 15ರಂದು ತಂಡವನ್ನು ವಿಸರ್ಜಿಸಲಾಗಿತ್ತು. 2020ರ ಏಪ್ರಿಲ್ 1ರಂದು ಮತ್ತೆ ಇದನ್ನು ಆತಂಭಿಸಲಾಗಿದೆ.

ಜಾಗತಿಕ ನಾಯಕರ ಮಧ್ಯೆ ಮೋದಿ ಜನಪ್ರಿಯತೆ ಮತ್ತಷ್ಟು ಹೆಚ್ಚಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 9 =
Remember me
