ಬಾಮೇರ್/ನವದೆಹಲಿ:ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಯುಪಡೆ ವಿಮಾನವನ್ನು ತುರ್ತಾಗಿ ಇಳಿಸುವ ಪ್ರಯೋಗ ಗುರುವಾರ ಯಶಸ್ವಿಯಾಗಿದೆ. ಪಾಕಿಸ್ತಾನದ ಗಡಿಯ ಬಾಮೇರ್​ನಲ್ಲಿ ಎನ್​ಎಚ್ 925ರ ಸತ್ತಾ-ಗಾಂಧವ್ ವಿಭಾಗದಲ್ಲಿ ಭಾರತೀಯ ವಾಯು ಪಡೆಯ ಹರ್ಕ್ಯುಲಸ್ ಸಿ-130ಜೆ ವಿಮಾನವನ್ನು ಇಳಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ವಿಮಾನದಲ್ಲಿದ್ದರು.
ಗಡಿಯಲ್ಲಿರುವ ಹೆದ್ದಾರಿಯಲ್ಲಿ ವಾಯುಪಡೆ ವಿಮಾನಗಳು ತುರ್ತಾಗಿ ಇಳಿಯಲು ವ್ಯವಸ್ಥೆ ಮಾಡಲಾಗಿದ್ದು, ಶತ್ರು ಪಾಳಯಕ್ಕೆ ಇದೊಂದು ಸ್ಪಷ್ಟ ಸಂದೇಶವಾಗಿದೆ. ಗಡಿಯಾಚೆಯಿಂದ ಯಾವುದೇ ದುಸ್ಸಾಹಸ ನಡೆಸಿದರೆ ತುರ್ತಾಗಿ ಎದುರಿಸಲು ಏರ್​ಸ್ಟ್ರಿಪ್ ನೆರವಾಗಲಿದೆ. ಯುದ್ಧದಂಥ ಸಮಯದಲ್ಲಿ ತುರ್ತಾಗಿ ಹೆದ್ದಾರಿಯನ್ನೇ ಕಾರ್ಯಾಚರಣೆಗೆ ಬಳಸುವುದು ಇದರ ಉದ್ದೇಶವಾಗಿದೆ. ಇದು ಮೂರು ಕಿ.ಮೀ. ಉದ್ದದ ರಸ್ತೆ-ಕಮ್​ಏರ್ ಸ್ಟ್ರಿಪ್ ನಿರ್ಮಾಣ ಮಾಡಲಾಗಿದೆ. ಗಡಿ ತಂಟೆ ಕೆದಕುವ ಪಾಕಿಸ್ತಾನ ಮತ್ತು ಚೀನಾಕ್ಕೆ ಇದೊಂದು ಎಚ್ಚರಿಕೆಯ ಗಂಟೆ ಎಂದು ವಿಶ್ಲೇಷಿಸಲಾಗಿದೆ. ತುರ್ತು ಇಳಿಕೆ ಸೌಕರ್ಯದ (ಇಎಲ್​ಎಫ್) ಮೇಲೆ ವಿಮಾನದ ವೈವಿಧ್ಯಮಯ ಕಾರ್ಯಾಚರಣೆಗಳನ್ನು ಉಭಯ ಸಚಿವರು ವೀಕ್ಷಿಸಿದರು. ಸುಖೋಯ್-30ಎಂಕೆಐ ಫೈಟರ್ ಜೆಟ್ ಕೂಡ ಇಎಲ್​ಎಫ್ ಮೇಲೆ ಅಣಕು ಲ್ಯಾಂಡಿಂಗ್ ನಡೆಸಿತು. ಮೂರೂ ಪಡೆಗಳ ಮಹಾ ದಂಡ ನಾಯಕ (ಸಿಡಿಎಸ್) ಬಿಪಿನ್ ರಾವತ್, ಐಎಎಫ್ ಮುಖ್ಯಸ್ಥ ಆರ್.ಕೆ. ಭದೌರಿಯಾ ಕೂಡ ವೀಕ್ಷಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − four =
Remember me
