ನವದೆಹಲಿ:ರಾಷ್ಟ್ರೀಯ ವಿಮಾನ ಸಂಸ್ಥೆ ಏರ್​ ಇಂಡಿಯಾದ ಸರ್ವರ್​ ಮೇಲೆ ನಡೆದ ಸೈಬರ್​ ದಾಳಿಯಿಂದಾಗಿ ಭಾರೀ ಪ್ರಮಾಣದಲ್ಲಿ ದತ್ತಾಂಶ ಸೋರಿಕೆಯಾಗಿದ್ದು, ಏರ್​ ಇಂಡಿಯಾದ ಸುಮಾರು 4.5 ಮಿಲಿಯನ್​ ಗ್ರಾಹಕರ ಮೇಲೆ ಪರಿಣಾಮ ಬೀರಿದೆ.
ಸೈಬರ್​ ದಾಳಿಯಲ್ಲಿ ಪ್ರಯಾಣಿಕರ ಪಾಸ್​ಪೋರ್ಟ್​ ಹಾಗೂ ಕ್ರೆಡಿಟ್​ ಕಾರ್ಡ್​ ಸೇರಿದಂತೆ ಕೆಲವೊಂದು ಮಾಹಿತಿಗಳು ಲೀಕ್​ ಆಗಿವೆ ಎಂದು ಶುಕ್ರವಾರ ಏರ್​ ಇಂಡಿಯಾ ವಿಮಾನ ಸಂಸ್ಥೆ ತಿಳಿಸಿದೆ.
ಪ್ರಯಾಣಿಕರ ಸೇವಾ ವ್ಯವಸ್ಥೆಯ ಡೇಟಾ ಪ್ರೊಸೆಸರ್ ಇತ್ತೀಚೆಗಷ್ಟೇ ಏರ್​ ಇಂಡಿಯಾದ ಸೆಕ್ಯುರಿಟಿ ಉಲ್ಲಂಘನೆಯ ಸೂಚನೆ ನೀಡಿತು. ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಸಹ ಸೋರಿಕೆ ಆಗಿದೆ ಎಂದು​​ ನಮ್ಮ ಬದ್ಧತೆಯ ಭಾಗವಾಗಿ, ನಾವು ನಿಮಗೆ ತಿಳಿಯಲು ಬಯಸುತ್ತೇವೆಂದು ಏರ್​ ಇಂಡಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
2011ರ ಆಗಸ್ಟ್​ 26 ಮತ್ತು 2021 ಫೆಬ್ರವರಿ 20ರ ನಡುವಿನ ಅವಧಿಯಲ್ಲಿ ನೋಂದಣಿ ಆಗಿರುವ ವೈಯಕ್ತಿಕ ಮಾಹಿತಿ ಸೇರಿದಂತೆ ಅನೇಕ ದತ್ತಾಂಶಗಳು ಸೋರಿಕೆ ಆಗಿದ್ದು, ದೇಶಾದ್ಯಂತ ಲಕ್ಷಾಂತರ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ಹೆಸರು, ಜನ್ಮ ದಿನಾಂಕ, ಸಂಪರ್ಕ ಮಾಹಿತಿ, ಪಾಸ್​ಪೋರ್ಟ್​ ಮಾಹಿತಿ, ಟಿಕೆಟ್​ ಮಾಹಿತಿ ಆಗಾಗ ಪ್ರಯಾಣ ಬೆಳೆಸಿದವರ ದತ್ತಾಂಶ ಮತ್ತು ಕ್ರೆಡಿಟ್​ ಕಾರ್ಡ್​ ಮಾಹಿತಿ ಸಹ ಸೈಬರ್​ ಖದೀಮರ ಕೈಸೇರಿರುವುದಾಗಿ ಏರ್​ ಇಂಡಿಯಾ ಹೇಳಿದೆ.
ಫೆಬ್ರವರಿ ಕೊನೆಯ ವಾರದಲ್ಲಿ ತನ್ನ ಡೇಟಾ ಪ್ರೊಸೆಸರ್​ ಎಸ್​ಐಟಿಎ ಪಿಎಸ್​ಎಸ್​ ಮೇಲೆ ಸೈಬರ್​ ದಾಳಿ ನಡೆದಿದೆ ಎಂದು ಮಾರ್ಚ್​ನಲ್ಲಿ ಏರ್​ ಇಂಡಿಯಾ ಹೇಳಿಕೊಂಡಿತ್ತು. ಇದೀಗ ದತ್ತಾಂಶವೂ ಸೋರಿಕೆಯಾಗಿರುವುದಾಗಿ ಬಾಯ್ಬಿಟ್ಟಿದೆ. ದತ್ತಾಂಶ ದುರ್ಬಳಕೆ ಆಗಿರುವ ಬಗ್ಗೆ ಇದುವರೆಗೂ ಯಾವುದೇ ಸಾಕ್ಷಿ ಇಲ್ಲ ಎಂದು ಸಂಸ್ಥೆ ಭರವಸೆ ನೀಡಿದ್ದು, ದಾಳಿ ಸಂಬಂಧ ದೇಶ-ವಿದೇಶದಲ್ಲಿರುವ ರೆಗ್ಯುಲೇಟರಿ ಏಜೆನ್ಸಿ ಜತೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ.
ತಮ್ಮ ವೈಯಕ್ತಿಕ ಡೇಟಾಗಳ ಸುರಕ್ಷತೆಗಾಗಿ ಪಾಸ್​ವರ್ಡ್​ಗಳನ್ನು ಬದಲಾಯಿಸಿಕೊಳ್ಳುವಂತೆ ಏರ್​ ಇಂಡಿಯಾ ಗ್ರಾಹಕರ ಬಳಿ ಕೋರಿದೆ. ಅಲ್ಲದೆ, ಹೆಚ್ಚಿನ ಮಾಹಿತಿಗೆ[email protected]ಈಮೇಲ್​ ಅಥವಾ 01242641415 ಕರೆ ಮಾಡಿ ಎಂದು ಹೇಳಿದೆ ಮತ್ತು www.airindia.in ವೆಬ್​ಸೈಟ್​ ಭೇಟಿ ನೀಡಲು ತಿಳಿಸಿದೆ.
ಪ್ರಸ್ತುತ, “ವಂದೇ ಭಾರತ್” ಮಿಷನ್ ಅಡಿಯಲ್ಲಿ ವಿಶೇಷ ವಿಮಾನಗಳನ್ನು ಹೊರತುಪಡಿಸಿ, ಏರ್​ ಇಂಡಿಯಾ ದೇಶೀಯ ವಿಮಾನಯಾನಗಳನ್ನು ಮಾತ್ರ ನಿರ್ವಹಿಸುತ್ತಿದೆ. ಏಕೆಂದರೆ ಕೊರೊನಾವೈರಸ್ ಕಾಯಿಲೆ (ಕೋವಿಡ್ -19) ಸಾಂಕ್ರಾಮಿಕ ರೋಗದಿಂದಾಗಿ ಅಂತಾರಾಷ್ಟ್ರೀಯ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ.(ಏಜೆನ್ಸೀಸ್​)
ನೈರುತ್ಯ ಚೀನಾದಲ್ಲಿ ಪ್ರಬಲ ಭೂಕಂಪ: 3 ಸಾವು, 27 ಮಂದಿಗೆ ಗಾಯ,7.3 ತೀವ್ರತೆ ದಾಖಲು

ತಮ್ಮನೋ ತಂಗಿಯೋ ಇದ್ದಿದ್ರೆ ಚೆನ್ನಾಗಿರ್ತಿತ್ತು!; ಒಂದೇ ಮಗುವಿರುವ ಮನೆಗಳಲ್ಲಿ ಒಂಟಿತನ..

ಬರೇ ಗೋತ್ರ ಬಿಟ್ಟರ ನಡಿಯಂಗಿಲ್ಲಾ.. ಕೋವಿಶೀಲ್ಡ್ ತೊಗೊಂಡವಂಗ ಕೋವ್ಯಾಕ್ಸಿನ್ ತೊಗೊಂಡೊಕಿನ್ ಕೊಡಬಹುದಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + three =
Remember me
