ನವದೆಹಲಿ:ಬೆರಿಲ್ ಚಂಡಮಾರುತದ ಪರಿಣಾಮವಾಗಿ ಕಳೆದ ಮೂರು ದಿನಗಳಿಂದ ಟೀಂ ಇಂಡಿಯಾ ಬಾರ್ಬಡೋಸ್​​ನಲ್ಲಿ ಸಿಲುಕಿದೆ. ಟಿ20 ವಿಶ್ವಕಪ್ ಗೆದ್ದ ನಂತರ ಭಾರತಕ್ಕೆ ಮರಳಲಾಗದೆ ಅಲ್ಲೇ ಉಳಿದಿರುವ ಭಾರತದ ತಂಡವನ್ನು ಕರೆತರಲು ಏರ್ ಇಂಡಿಯಾದ ಬೋಯಿಂಗ್ 777 ವಿಶೇಷ ಚಾರ್ಟರ್ ವಿಮಾನ ಬಾರ್ಬಡೋಸ್ ಅನ್ನು ತಲುಪಿದೆ. ಭಾರತೀಯ ತಂಡ, ಕೋಚ್‌ಗಳು, ಆಟಗಾರರ ಕುಟುಂಬಗಳು ಮತ್ತು ಕೆಲವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕಾರಿಗಳನ್ನು ಭಾರತಕ್ಕೆ ಕ್ಷೇಮವಾಗಿ ಕರೆತರಲು ಬಿಸಿಸಿಐ ವಿಶೇಷ ಏರ್ ಇಂಡಿಯಾ ವಿಮಾನವನ್ನು ವ್ಯವಸ್ಥೆ ಮಾಡಿದೆ.
ಇದನ್ನು ಓದಿ:ವಿಶ್ವಸಂಸ್ಥೆ ಸಭೆಯಲ್ಲಿ ಮೊದಲ ಬಾರಿಗೆ ತಾಲಿಬಾನ್​ ಪ್ರತಿನಿಧಿಗಳು ಭಾಗಿ; ಯುಎನ್​ ಕೊಟ್ಟ ಸ್ಪಷ್ಟನೆ ಹೀಗಿದೆ
ಅಲ್ಲದೆ ಟೀಂ ಇಂಡಿಯಾ ಜತೆಗೆ ಅಲ್ಲಿ ಸಿಲುಕಿರುವ ಪತ್ರಕರ್ತರನ್ನೂ ವಾಪಸ್ ಕರೆತರಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದರುವುದಾಗಿ ಎಎನ್​ಐ ವರದಿ ಮಾಡಿದೆ. ಭಾರತೀಯ ಮಾಧ್ಯಮದ ಪತ್ರಕರ್ತರು ಕ್ರಿಕೆಟ್​ ಪ್ರಸಾರಕ್ಕಾಗಿ ಬಾರ್ಬಡೋಸ್​​ಗೆ ಹೋಗಿದ್ದರು. ಚಂಡಮಾರುತದ ಕಾರಣದಿಂದಾಗಿ ಅವರ ವಿಮಾನ ಟಿಕಟ್​ಗಳನ್ನ ರದ್ದುಗೊಳಿಸಲಾಗಿತ್ತು. ಇದೀಗ ಅವರನ್ನು ಭಾರತಕ್ಕೆ ಕರೆತರುವುದಾಗಿ ಬಿಸಿಸಿಐ ತಿಳಿಸಿದೆ. ಬಾರ್ಬಡೋಸ್​ನಿಂದ ಭಾರತಕ್ಕೆ ತಲುಪಲು 16 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಬುಧವಾರ ಬಾರ್ಬಡೋಸ್​ನಿಂದ ಟೇಕಾಫ್​ ಆಗುವ ವಿಮಾನವು ಗುರುವಾರ ದೆಹಲಿಯನ್ನು ತಲುಪಲಿದೆ ಎನ್ನಲಾಗಿದೆ.
ಚಂಡಮಾರುತವು ಸುಮಾರು 257 ಕಿಲೋಮೀಟರ್ ವೇಗದಲ್ಲಿ ಬರುವ ಬಗ್ಗೆ ಈಗಾಗಲೇ ಬಾರ್ಬಡೋಸ್​​ನಲ್ಲಿ ಎಚ್ಚರಿಕೆ ನೀಡಲಾಗಿತ್ತು. ಇದೇ ಕಾರಣದಕ್ಕಾಗಿ ವಿಮಾನ ನಿಲ್ದಾಣದಲ್ಲಿ ಎಲ್ಲ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿತ್ತು. ಅಲ್ಲದೆ ಇಡೀ ನಗರದಲ್ಲಿ ಕರ್ಫ್ಯೂ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕಾರಣಕ್ಕಾಗಿ ಟೀಂ ಇಂಡಿಯಾ ಬಾರ್ಬಡೋಸ್‌ನ ಹೋಟೆಲ್‌ನಲ್ಲಿ ಸಿಲುಕಿಕೊಂಡಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ರೋಚಕ ಜಯದೊಂದಿಗೆ ಪ್ರಶಸ್ತಿ ಗೆದ್ದುಕೊಂಡಿತು. ಟೀಂ ಇಂಡಿಯಾ ಎರಡನೇ ಬಾರಿಗೆ ಈ ಪ್ರಶಸ್ತಿ ಗೆದ್ದಿದೆ. (ಏಜೆನ್ಸೀಸ್​​)
77ನೇ ಲೊಕಾರ್ನೊ ಫಿಲ್ಮ್​​ ಫೆಸ್ಟಿವಲ್​; ಬಾಲಿವುಡ್​ ಬಾದ್​ಶಾ ಶಾರೂಖ್​ಗೆ ವಿಶೇಷ ಗೌರವ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eight + twenty =
Remember me
