ನವದೆಹಲಿ:ಕೋಳಿಕ್ಕೋಡ್​ನಲ್ಲಿ ಸಂಭವಿಸಿದ ಏರ್​ ಇಂಡಿಯಾ ಎಕ್ಸ್​ಪ್ರೆಸ್​​ ವಿಮಾನ ದುರಂತದಲ್ಲಿ ಮೃತಪಟ್ಟ ಇಬ್ಬರು ಪೈಲಟ್​ಗಳು ಸೇರಿ ಇತರ 18 ಪ್ರಯಾಣಿಕರ ಕುಟುಂಬದವರು 1.19 ಕೋಟಿ ರೂ. ಪರಿಹಾರ ಪಡೆಯಲು ಅರ್ಹರಾಗಿದ್ದಾರೆ.
ಸಾಮಾನ್ಯವಾಗಿ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಹಾಗೂ ಗಾಯಗೊಂಡವರಿಗೆ ಮಾಂಟ್ರಿಯಲ್​ ಒಪ್ಪಂದದ ಪ್ರಕಾರ ಪರಿಹಾರ ನಿಗದಿ ಮಾಡಲಾಗುತ್ತದೆ ಎಂದು ಏರ್​ ಇಂಡಿಯಾದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಒಪ್ಪಂದವನ್ನು ಹಿನ್ನೆಲೆಯಾಗಿಟ್ಟುಕೊಂಡು ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ವಿಮಾನ ಪ್ರಯಾಣಿಕರ ಹಕ್ಕುಗಳ ಸನ್ನದು ರೂಪಿಸಿದೆ. ಇದರಂತೆ ಪರಿಹಾರದ ಮೊತ್ತ ಎಷ್ಟಿರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ;ತಾಯ್ನೆಲ ಸ್ಪರ್ಶಿಸಲು ಹಾತೊರೆದವರಿಗೆ ಕಾಡಿತ್ತು ದುಃಸ್ವಪ್ನ; ‘ವಂದೇ ಭಾರತ’ ವಿಮಾನವದು; ಟೇಬಲ್​ ಟಾಪ್​ ನಿಲ್ದಾಣದಲ್ಲಿ ಮತ್ತೊಂದು ದುರಂತ
ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ನಷ್ಟ ಪರಿಹಾರವಾಗಿ 1,13,100 ವಿಶೇಷ ಪಾವತಿ ಹಕ್ಕು (ಸ್ಪೆಷಲ್​ ಡ್ರಾಯಿಂಗ್​ ರೈಟ್ಸ್​- ಎಸ್​ಡಿಆರ್​) ಹೊಂದಿದ್ದಾರೆ. ಅಪಘಾತ ಸಂಭವಿಸಿದ ಶುಕ್ರವಾರಕ್ಕೆ ಅನ್ವಯಿಸುವಂತೆ ಒಂದು ಎಸ್​ಡಿಆರ್​ನ ಮೌಲ್ಯ 1.14 ಅಮೆರಿಕನ್​ ಡಾಲರ್​ ಆಗಿದೆ. ಇದನ್ನು ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿದಲ್ಲಿ ಈ ಮೊತ್ತ 1.19 ಕೋಟಿ ರೂ. ಆಗಲಿದೆ ಎಂದು ಲೆಕ್ಕ ಹಾಕಲಾಗಿದೆ.
2016ರಲ್ಲಿ ನಷ್ಟ ಪರಿಹಾರದ ಮೊತ್ತವನ್ನು 1ಲಕ್ಷ ಎಸ್​ಡಿಆರ್​ನಿಂದ 1.13 ಲಕ್ಷಕ್ಕೆ ಏರಿಸಲಾಯಿತು. ಇದಲ್ಲದೇ, ಕಾರ್ಗೋ ವಿಳಂಬ ಅಥವಾ ನಷ್ಟಕ್ಕೆ ನೀಡಲಾಗುವ ಪರಿಹಾರವನ್ನು ಹೆಚ್ಚಿಸಲಾಗಿದೆ. ದೇಶೀಯ ವಿಮಾನ ದುರಂತದಲ್ಲಿ ಸಾವು ಸಂಭವಿಸಿದಲ್ಲಿ 20 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
ಇದನ್ನೂ ಓದಿ;ಕೋಳಿಕ್ಕೋಡ್​ ವಿಮಾನ ದುರಂತ; ಲ್ಯಾಂಡಿಂಗ್ ಎರಡು ಬಾರಿ ಯತ್ನಿಸಿದ್ದ ಪೈಲಟ್​…!
ಸದ್ಯ ಏರ್​ ಇಂಡಿಯಾ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಕೇರಳ ಸರ್ಕಾರ ಕೂಡ 10 ಲಕ್ಷ ರೂ. ನೀಡಿದೆ. ಇದರ ಹೊರತಾಗಿಯೂ ಹೆಚ್ಚಿನ ಪರಿಹಾರಕ್ಕಾಗಿ ಒತ್ತಾಯಿಸುವ ಹಾಗೂ ನ್ಯಾಯಾಲಯದ ಮೊರೆ ಹೋಗುವ ಅಧಿಕಾರ ಸಂತ್ರಸ್ತರು ಹೊಂದಿರುತ್ತಾರೆ.
ಭಾರತದಲ್ಲಿ ಉತ್ಪಾದನೆಯಾಗುತ್ತಾ ರಷ್ಯಾ ಲಸಿಕೆ? ಬಳಕೆಗೆ ಇನ್ನೆಷ್ಟು ದಿನ ಬೇಕು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 10 =
Remember me
