ನವದೆಹಲಿ:ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿಯವರ ಪ್ರಯಾಣಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಿದ B777 ವಿಮಾನ ಏರ್​ ಇಂಡಿಯಾ ಒನ್ ಅಮೆರಿಕದಿಂದ ಹೊರಟು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಲ್ಯಾಂಡ್ ಆಗಿದೆ. ಈ ವಿಮಾನ ಜುಲೈನಲ್ಲೇ ಭಾರತಕ್ಕೆ ಆಗಮಿಸಬೇಕಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಹಸ್ತಾಂತರ ಎರಡು ಬಾರಿ ಮುಂದೂಡಲ್ಪಟ್ಟಿತ್ತು.
ಗುರುವಾರ ಅಪರಾಹ್ನ 3 ಗಂಟೆಗೆ ಏರ್​ ಇಂಡಿಯಾ ಒನ್ ಲ್ಯಾಂಡ್ ಆಗಿದೆ. ಇನ್ನೊಂದು ವಿಮಾನ ಮುಂದಿನ ಕೆಲವೇ ದಿನಗಳಲ್ಲಿ ಭಾರತಕ್ಕೆ ಹಸ್ತಾಂತರಗೊಳ್ಳಲಿದೆ. ಅಮೆರಿಕದ ಬೋಯಿಂಗ್ ನಿರ್ಮಿತ ವಿಮಾನಗಳಿವು. 2018ರಲ್ಲಿ ಏರ್​ಇಂಡಿಯಾ ಈ ಎರಡು ವಿಮಾನಗಳನ್ನು ಗಣ್ಯರ ಪ್ರಯಾಣಕ್ಕೆ ಮರುವಿನ್ಯಾಸಗೊಳಿಸುವುದಕ್ಕೆ ಅಮೆರಿಕದ ಬೋಯಿಂಗ್ ಕಂಪನಿಗೆ ರವಾನಿಸಿತ್ತು. ಈ ಮರುವಿನ್ಯಾಸಕ್ಕೆ 8.400 ಕೋಟಿ ರೂಪಾಯಿ ಅಂದಾಜಿಸಲಾಗಿತ್ತು.
ಇದನ್ನೂ ಓದಿ:ಪ್ರಧಾನಿ ಪ್ರಯಾಣಕ್ಕೆ ಏರ್​ ಇಂಡಿಯಾ ಒನ್​: ಭಾರತಕ್ಕೆ ಶೀಘ್ರ 8500 ಕೋಟಿ ರೂ. ಮೌಲ್ಯದ 2 ವಿಮಾನಗಳು
ಗಣ್ಯರನ್ನು ಕರೆದೊಯ್ಯುವ B777 ವಿಮಾನಗಳು ಕ್ಷಿಪಣಿ ನಿರೋಧಕ ವ್ಯವಸ್ಥೆ – ಲಾರ್ಜ್​ ಏರ್​ಕ್ರಾಫ್ಟ್​ ಇನ್​ಫ್ರಾರೆಡ್​ ಕೌಂಟರ್​ಮೆಷರ್ಸ್ ಆ್ಯಂಡ್ ಸೆಲ್ಫ್ ಪ್ರೊಟೆಕ್ಷನ್ ಸ್ಯೂಟ್ಸ್ ಅನ್ನು ಹೊಂದಿರುತ್ತವೆ. ಫೆಬ್ರವರಿ ತಿಂಗಳಲ್ಲಿ ಅಂತಹ ಎರಡು ಸಿಸ್ಟಮ್ ಅನ್ನು ಭಾರತಕ್ಕೆ 190 ದಶಲಕ್ಷ ಡಾಲರ್​ಗೆ ಮಾರಾಟ ಮಾಡಲು ಅಮೆರಿಕ ಒಪ್ಪಿಗೆ ನೀಡಿತ್ತು. ಏರ್​ಇಂಡಿಯಾ ಒನ್ ವಿಮಾನಗಳನ್ನು ಭಾರತೀಯ ವಾಯುಪಡೆಯ ಪೈಲಟ್​ಗಳೇ ಮುನ್ನಡೆಸಲಿದ್ದಾರೆ.
ಇದನ್ನೂ ಓದಿ:ರಾಷ್ಟ್ರಪತಿ ಕೋವಿಂದ, ಪ್ರಧಾನಿ ಮೋದಿಗಾಗಿ ಬರಲಿರುವ ವಿಮಾನಗಳು ಹೇಗಿವೆ ಗೊತ್ತಾ…?
ಪ್ರಸ್ತುತ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಯವರು ಏರ್​ ಇಂಡಿಯಾದ B747 ವಿಮಾನವನ್ನು ಪ್ರಯಾಣಕ್ಕೆ ಬಳಸುತ್ತಿದ್ದಾರೆ. ಈ ವಿಮಾನಗಳ ನಿರ್ವಹಣೆಯನ್ನು ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ ನೋಡಿಕೊಳ್ಳುತ್ತಿದೆ. ಹೊಸ ವಿಮಾನ ಬಳಕೆ ಶುರುವಾದ ಬಳಿಕ B747 ವಿಮಾನಗಳು ವಾಣಿಜ್ಯ ಬಳಕೆ ಆಗಲಿವೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ರಸ್ತೆ ಅಪಘಾತದ ಸಂತ್ರಸ್ತರಿಗೆ ನೆರವೀಯಲು ಹಿಂಜರಿಯ ಬೇಕಿಲ್ಲ; ಉಪಕಾರಿಗಳ ರಕ್ಷಣೆಗಿದೆ ಹೊಸ ಕಾನೂನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
