ನವದೆಹಲಿ:ಅಮೆರಿಕ ಅಧ್ಯಕ್ಷರು ಬಳಸುವ ‘ಏರ್​ಫೋರ್ಸ್ ಒನ್’ ವಿಮಾನ ಮಾದರಿಯಲ್ಲೇ ಭಾರತದಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನಿ ಪ್ರಯಾಣಕ್ಕೆ ಖರೀದಿಸಲಾಗಿರುವ ವಿಶೇಷವಾದ ‘ಏರ್ ಇಂಡಿಯಾ ಒನ್’ ವಿಮಾನ ಗುರುವಾರ ಮಧ್ಯಾಹ್ನ ಅಮೆರಿಕದಿಂದ ನವದೆಹಲಿಗೆ ಆಗಮಿಸಿದೆ. ಅಮೆರಿಕದ ಟೆಕ್ಸಾಸ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ, ದೆಹಲಿ ನಿಲ್ದಾಣಕ್ಕೆ ಮಧ್ಯಾಹ್ನ 3.10ಕ್ಕೆ ಬಂದಿಳಿಯಿತು.
ಪ್ರಖ್ಯಾತ ವಿಮಾನ ನಿರ್ಮಾಣ ಸಂಸ್ಥೆ ಬೋಯಿಂಗ್​ನ ಬಿ777 ವಿಮಾನ ಆಗಸ್ಟ್​ನಲ್ಲೇ ಭಾರತಕ್ಕೆ ಹಸ್ತಾಂತರವಾಗಬೇಕಿತ್ತು. ಆದರೆ ಕೋವಿಡ್-19 ಹಾವಳಿಯಿಂದಾಗಿ ವಿಳಂಬವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವನ್ನು ಪಡೆಯಲು ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ಅಮೆರಿಕಕ್ಕೆ ತೆರಳಿದ್ದರು. ಅತಿ ಗಣ್ಯರ (ವಿವಿಐಪಿ) ಯಾನಕ್ಕಾಗಿ ಇನ್ನೊಂದು ವಿಶೇಷ ವಿಮಾನ ಮುಂದಿನ ದಿನಗಳಲ್ಲಿ ಭಾರತಕ್ಕೆ ಆಗಮಿಸಲಿದೆ.ಇದನ್ನೂ ಓದಿ:VIDEO | ಬೌಂಡರಿ ಲೈನ್ ಬಳಿ ಅದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್‌ವೆಲ್-ನೀಶಾಮ್
ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ಹಾಗೂ ವಿವಿಐಪಿಗಳು ಪ್ರಯಾಣಿಸುವ ಸಂದರ್ಭದಲ್ಲಿ ಈ ವಿಮಾನಗಳನ್ನು ಭಾರತೀಯ ವಾಯುಪಡೆಯ (ಐಎಎಫ್) ಪೈಲಟ್​ಗಳು ಚಲಾಯಿಸಲಿದ್ದಾರೆ. ಏರ್ ಇಂಡಿಯಾ ಪೈಲಟ್​ಗಳು ಚಲಾಯಿಸುವಂತಿಲ್ಲ. ಪ್ರಸ್ತುತ ದೇಶದ ಮೂವರೂ ಮುಖ್ಯಸ್ಥರು ಏರ್ ಇಂಡಿಯಾ ಒನ್ ಎಂಬ ಹೆಸರಿನ ಬಿ747 ವಿಮಾನಗಳಲ್ಲಿ ಪ್ರಯಾಣಿಸು ತ್ತಿದ್ದಾರೆ. ಸಂಸ್ಥೆಯ ಪೈಲಟ್​ಗಳೇ ಅದರ ಚಾಲಕರು. ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ (ಎಐಇಎಸ್​ಎಲ್) ಇದನ್ನು ನಿರ್ವಹಿಸುತ್ತಿದೆ. ಬಿ747 ವಿಮಾನ ಪ್ರಮುಖರನ್ನು ಕರೆದೊಯ್ಯದ ಸಂದರ್ಭದಲ್ಲಿ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತದೆ. ಆದರೆ ಈಗ ಬಂದಿರುವ ಹೊಸ ವಿಮಾನ ಗಣ್ಯರ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿದೆ. ಎರಡೂ ಹೊಸ ವಿಮಾನಗಳು 2018ರಲ್ಲೇ ಕೆಲ ತಿಂಗಳ ಕಾಲ ಏರ್ ಇಂಡಿಯಾದ ಭಾಗವಾಗಿತ್ತು. ಆದರೆ, ಗಣ್ಯರ ಪ್ರಯಾಣಕ್ಕೆಂದೇ ವಿಶೇಷವಾಗಿ ಸಜ್ಜುಗೊಳಿಸಲು ರೆಟ್ರೋಫಿಟ್ಟಿಂಗಾಗಿ ಅವನ್ನು ಅಮೆರಿಕಕ್ಕೆ ವಾಪಸ್ ಕಳಿಸಲಾಗಿತ್ತು.

ದೆಹಲಿಯಲ್ಲಿಳಿತು ಗಣ್ಯರ ವಿಮಾನ ಏರ್​ ಇಂಡಿಯಾ ಒನ್ ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 17 =
Remember me
