ನವದೆಹಲಿ:ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿಗಳ ಪ್ರಯಾಣಕ್ಕೆ ಮೀಸಲಾದ ಎರಡನೇ ಏರ್​ ಇಂಡಿಯಾ ಒನ್​ ವಿಮಾನ ಶನಿವಾರ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಮೊದಲನೇ ವಿಮಾನ ಈ ತಿಂಗಳ ಆರಂಭದಲ್ಲೇ ದೆಹಲಿಗೆ ಆಗಮಿಸಿತ್ತು.
ಬೋಯಿಂಗ್​ ಬಿ -747 ವಿಮಾನದ ಬದಲಿಗೆ ಇನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಮುಂತಾದ ಗಣ್ಯರು ಬಿ-777 ವಿವಿಐಪಿ ಮಾದರಿಯ ವಿಮಾನವನ್ನು ಬಳಸಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಏರ್​ ಇಂಡಿಯಾದ ಹಿರಿಯ ಅಧಿಕಾರಿಗಳು ಅಗತ್ಯಗಳನ್ನು ಪೂರೈಸುವುದಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.
ಇದನ್ನೂ ಓದಿ:ಉಡುಪಿ ಯುವತಿ ಅನುಮಾನಾಸ್ಪದ ಸಾವು ಪ್ರಕರಣ: ಕಾಲ್​ ರೆಕಾರ್ಡ್ಸ್​ನಲ್ಲಿ ಸ್ಫೋಟಕ ಮಾಹಿತಿ..!
ಅತಿಗಣ್ಯರ ಓಡಾಟಕ್ಕಾಗಿ ಖರೀದಿಸಿರುವ ಎರಡು ಬಿ777 ವಿಮಾನದಲ್ಲಿ ಲಾರ್ಜ್​ ಏರ್​ಕ್ರಾಫ್ಟ್​ ಇನ್​ಫ್ರಾರೆಡ್​ ಕೌಂಟರ್​ಮೆಷರ್ಸ್​ (ಎಲ್​ಎಐಆರ್​ಸಿಎಂ) ಎಂಬ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲ, ಸ್ವಯಂರಕ್ಷಣ ಸೂಟ್​ಗಳನ್ನೂ ಇದು ಒಳಗೊಂಡಿದೆ. ಎರಡು ವಿಮಾನಗಳಲ್ಲಿ ಅಳವಡಿಸಲಾಗುತ್ತಿರುವ ಎಲ್​ಎಐಆರ್​ಸಿಎಂ ವ್ಯವಸ್ಥೆಯನ್ನು 1,434.72 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೆರಿಕದಿಂದ ಖರೀದಿಸಲಾಗಿದೆ. (ಏಜೆನ್ಸೀಸ್)
ಪ್ರಧಾನಿ ಪ್ರಯಾಣಕ್ಕೆ ಏರ್​ ಇಂಡಿಯಾ ಒನ್​: ಭಾರತಕ್ಕೆ ಶೀಘ್ರ 8500 ಕೋಟಿ ರೂ. ಮೌಲ್ಯದ 2 ವಿಮಾನಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − thirteen =
Remember me
