ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ವಿದೇಶ ಪ್ರವಾಸಕ್ಕೆ ಏರ್ ಇಂಡಿಯಾ ಒನ್ ವಿಮಾನ ಬಳಸಿದ್ದಾರೆ. ಈ ಹಿಂದೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಗೆ ಮೀಸಲಾದ ಇಂತಹ ವಿಮಾನ ಇರಲಿಲ್ಲ. ಈಗ 2 ವಿಮಾನಗಳು ಲಭ್ಯ ಇದ್ದು, ಭಾರತೀಯ ವಾಯುಪಡೆಯ ಉಸ್ತುವಾರಿಯಲ್ಲಿದೆ. ಅಮೆರಿಕದ ಅಧ್ಯಕ್ಷರು ಕೂಡ ಅತ್ಯಾಧುನಿಕ, ಸುರಕ್ಷಿತ ವಿಮಾನವನ್ನು ಹೊಂದಿದ್ದಾರೆ. ಎರಡೂ ಹೈಟೆಕ್ ವಿಮಾನಗಳ ಹೋಲಿಕೆ ಇಲ್ಲಿದೆ…
ಏರ್​ಫೋರ್ಸ್ ಒನ್
ಬೋಯಿಂಗ್ 747-200ಬಿಯ ಒಳಭಾಗ ಹೀಗಿದೆ:ಸಂವಹನದ ಕೊಠಡಿ – 386 ಕಿ.ಮೀ. ಉದ್ದದ ವಯರಿಂಗ್ ಹೊಂದಿರುವ ಈ ಕೊಠಡಿ ಅಣ್ವಸ್ತ್ರ ಸ್ಪೋಟದತೀವ್ರತೆಯನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಧ್ಯಕ್ಷರ ಕಚೇರಿ, ಕಾಕ್​ಪಿಟ್, ಆಗಸದಲ್ಲೇ ವಿಮಾನಕ್ಕೆ ಇಂಧನ ತುಂಬುವ ಜಾಗ, ಅಧ್ಯಕ್ಷರ ವಿಶ್ರಾಂತಿಕೊಠಡಿ – ಇದರಲ್ಲಿ ಡ್ರೆಸ್ಸಿಂಗ್ ರೂಮ್ ಷವರ್ ಮತ್ತು ಜಿಮ್ ಸೌಲಭ್ಯವೂ ಒಳಗೊಂಡಿದೆ. ರಕ್ತ ನಿಧಿ ಸೇರಿದಂತೆ ಎಲ್ಲ ರೀತಿಯ ವೈದ್ಯಕೀಯ ಸವಲತ್ತುಗಳಿರುವ ಕೊಠಡಿ, ಮುಖ್ಯದ್ವಾರ – ವಿಮಾನ ಭೂಸ್ಪರ್ಶ ಮಾಡಿದ ಬಳಿಕ ಎಡಭಾಗದಲ್ಲಿರುವ ಈ ಬಾಗಿಲು ತೆರೆದುಕೊಳ್ಳುತ್ತದೆ. ಸುರಕ್ಷಾ ದೃಷ್ಟಿಯಿಂದ ಕಚೇರಿ ಬಲಭಾಗದಲ್ಲಿರುತ್ತದೆ. ಅಧ್ಯಕ್ಷರ ರಕ್ಷಣಾ ಪಡೆ, ಹಿರಿಯ ಅಧಿಕಾರಿಗಳ ಸಭಾ ಕೊಠಡಿ, ರೆಕ್ಕೆಗಳಲ್ಲಿ ಹುದುಗಿರುವ ಮಿರರ್​ಬಾಲ್​ಗಳಲ್ಲಿ ಇನ್​ಫ್ರಾ ರೆಡ್ ಮಾರ್ಗದರ್ಶಕ ವ್ಯವಸ್ಥೆ ಇದೆ.
ಪ್ರತಿ ರಕ್ಷಣಾ ವ್ಯವಸ್ಥೆ
ಶತ್ರುಗಳ ಕ್ಷಿಪಣಿಗಳ ದಿಕ್ಕು ತಪ್ಪಿಸುವಂತಹ ಕಿರಣಗಳನ್ನು ಹೊರಸೂಸುವ ಉಪಕರಣ, ಭೂಮಿ ಮೇಲೆ ಅಣ್ವಸ್ತ್ರ ಸ್ಪೋಟಗೊಂಡರೂ ಅದನ್ನು ತಾಳಿಕೊಂಡು ಪಾರಾಗಬಲ್ಲ ರಕ್ಷಾ ಕವಚ, ಶತ್ರುಗಳ ರಾಡಾರ್ ಹಾಗೂ ಕ್ಷಿಪಣಿಗಳ ಕಣ್ಣುತಪ್ಪಿಸುವಂತಹ ವಿದ್ಯುನ್ಮಾನ ರಕ್ಷಣಾ ವ್ಯವಸ್ಥೆ, ಎಲ್ಲ ಕಿಟಕಿಗಳಿಗೂ ರಕ್ಷಾ ಕವಚ ಹೊಂದಿರುವ ಗಾಜುಗಳಿವೆ. ಕಚೇರಿ ಮತ್ತು ಮಾಧ್ಯಮ ವಿಭಾಗ, ಸಿಬ್ಬಂದಿ/ ಸಚಿವಾಲಯ ವಿಭಾಗ – 85 ಟೆಲಿಫೋನ್​ಗಳು, 19 ಟಿವಿ ಮತ್ತು ಇತರೆ ಸೌಲಭ್ಯ, ಡೈನಿಂಗ್ ರೂಮ್ – 2000 ಜನರಿಗೆ ಊಟ ಸಿದ್ಧಪಡಿಸುವ ಅಡುಗೆಮನೆಯೂ ಇದರಲ್ಲಿದೆ.
ಏರ್ ಇಂಡಿಯಾ ಒನ್ಈ ವಿಮಾನವು ಅಮೆರಿಕ ಅಧ್ಯಕ್ಷರ ‘ಏರ್ ಫೋರ್ಸ್ ಒನ್’ ರೀತಿಯಲ್ಲೇ ವಿಶೇಷ ಸೌಲಭ್ಯಗಳನ್ನು ಹೊಂದಿದೆ. ಇದು ಬೋಯಿಂಗ್ 777-300ಇಆರ್ ಮಾದರಿಯದಾಗಿದ್ದು, ನಮ್ಮ ದೇಶದ ಅತಿಗಣ್ಯರ ಅನುಕೂಲಕ್ಕೆ ತಕ್ಕಂತೆ ಮಾಡಿಫೈ ಮಾಡಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 10 =
Remember me
