ನವದೆಹಲಿ:ವಿಮಾನ ಸಂಚಾರ ಯಾವಾಗ ಆರಂಭವಾಗುತ್ತೆ ಎಂದು ಕಾಯುತ್ತಿದ್ದವರಿಗೆ ಏರ್​ ಇಂಡಿಯಾ ಸಿಹಿ ಸುದ್ದಿ ನೀಡಿದೆ. ದೇಶಿಯ ವಿಮಾನಗಳ ಸಂಚಾರವನ್ನು ಮೇ 4ರಂದು ಶುರು ಮಾಡುವುದಾಗಿ ಘೋಷಿಸಿದೆ.
ಶನಿವಾರದಿಂದಲೇ ಟಿಕೆಟ್​ ಬುಕಿಂಗ್​ಗೆ ಚಾಲನೆ ನೀಡಿದೆ. ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ವಿಮಾನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಜತೆಗೆ, ಮೇ 3ರವರೆಗೆ ಲಾಕ್​ಡೌನ್​ ವಿಸ್ತರಿಸಿರುವುದರಿಂದ ಏರ್​ ಇಂಡಿಯಾ ಅಲ್ಲಿಯವರೆಗೆ ಟಿಕೆಟ್​ ಬುಕಿಂಗ್​ಅನ್ನು ಸ್ಥಗಿತಗೊಳಿಸಿತ್ತು. ಇದೀಗ ಮೇ 4ರಿಂದ ದೇಶೀಯ ಪ್ರಯಾಣಕ್ಕೆ ಟಿಕೆಟ್​ ಬುಕ್​ ಮಾಡಬಹುದು ಎಂದು ಸಂಸ್ಥೆಯ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ.
ಜೂ.1ರಿಂದ ಅಂತಾರಾಷ್ಟ್ರೀಯ ಪ್ರಯಾಣ: ಜೂನ್​ 1ರಿಂದ ವಿದೇಶಗಳಿಗೆ ವಿಮಾನ ಸಂಚಾರ ಆರಂಭಿಸುವುದಾಗಿ ಏರ್​ ಇಂಡಿಯಾ ತಿಳಿಸಿದೆ. ಇದೀಗ ಇತರ ಖಾಸಗಿ ವಿಮಾನ ಸಂಸ್ಥೆಗಳು ಕೂಡ ಇದೇ ಅವಧಿಯಲ್ಲಿ ವಿಮಾನ ಯಾನ ಆರಂಭಿಸಲಿದ್ದು, ಟಿಕೆಟ್​ ಬುಕಿಂಗ್​ ಆರಂಭಿಸಿವೆ.
ಕೆಲ ಸಂಸ್ಥೆಗಳು ಏಪ್ರಿಲ್​ 14ರ ನಂತರದ ಪ್ರಯಾಣಕ್ಕಾಗಿ ಈಗಾಗಲೇ ಮುಂಗಡ ಟಿಕೆಟ್​ ಬುಕಿಂಗ್​ ಮಾಡಿಸಿಕೊಂಡಿದ್ದವು. ಆದರೆ, ಲಾಕ್​ಡೌನ್​ ವಿಸ್ತರಣೆಯಾಗಿದ್ದರಿಂದ ಪ್ರಯಾಣಿಕರಿಗೆ ಟಿಕೆಟ್​ ಹಣ ಮರಳಿಸುವ ಪ್ರಕ್ರಿಯೆ ಆರಂಭಿಸಿವೆ.
ನಾಗರಿಕ ವಿಮಾನ ಸಂಚಾರ ಸ್ಥಗಿತಗೊಂಡಿದ್ದರೂ ದೇಶದ ವಿವಿಧ ಭಾಗಗಳಿಗೆ ವೈದ್ಯಕೀಯ ಹಾಗೂ ಅಗತ್ಯ ವಸ್ತುಗಳ ಸಾಗಣೆ ಕಾರ್ಯದಲ್ಲಿ ಏರ್​ ಇಂಡಿಯಾ ಸೇರಿ ಹಲವು ಸಂಸ್ಥೆಗಳು ಭಾಗಿಯಾಗಿದ್ದವು. ವಿದೇಶಗಳಿಂದಲೂ ಅಗತ್ಯ ಸಾಮಗ್ರಿಗಳನ್ನು ಭಾರತಕ್ಕೆ ತರುವಲ್ಲಿಯೂ ಏರ್​ ಇಂಡಿಯಾ ನಿರತವಾಗಿತ್ತು.
ದೇಶದೆಲ್ಲೆಡೆ ವೈದ್ಯಕೀಯ ಸಾಮಗ್ರಿ ಪೂರೈಸಿದ ‘ಲೈಫ್​ಲೈನ್​ ಉಡಾನ್​’ 274 ವಿಮಾನಗಳ ಸಂಚಾರ ನಿರ್ವಹಿಸಿದ ಸಚಿವಾಲಯ

d
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 3 =
Remember me
