ನವದೆಹಲಿ:ಸಹೋದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಅಮಾನತುಗೊಂಡಿದ್ದ ಏರ್​ ಇಂಡಿಯಾದ ಹಿರಿಯ ಪೈಲಟ್​ ಒಬ್ಬರು ಮತ್ತೆ ಕೆಲಸಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನಯಾನ ಆಂತರಿಕ ದೂರುಗಳ ಸಮಿತಿಯು ಆರೋಪಿ ಕ್ಯಾಪ್ಟನ್​ ಸಚಿನ್​ ಗುಪ್ತಾ ಅವರಿಗೆ ದಂಡ ವಿಧಿಸಿದೆ. ಏರ್​ ಇಂಡಿಯಾದ ಪ್ರಾದೇಶಿಕ ನಿದೇರ್ಶಕ ಪಿ.ಎಸ್. ನೇಗಿ, ವಿಮಾನಯಾನ ಆಂತರಿಕ ಸಮಿತಿ ಈ ಬಗ್ಗೆ ತನಿಖೆ ನಡೆಸಿತ್ತು.
ಸೇವಾ ನಿಯಮಗಳಂತೆ ಕ್ಯಾಪ್ಟನ್ ಸಚಿನ್ ಗುಪ್ತಾ ಅವರು ಶಿಕ್ಷೆಯ ವಿರುದ್ಧ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೇಲ್ಮನವಿಯನ್ನು ಪ್ರಾಧಿಕಾರವು ಪರಿಶೀಲಿಸುತ್ತದೆ ಎಂದು ನೇಗಿ ಹೇಳಿದರು.
ಸಚಿನ್ ಗುಪ್ತಾ ಅವರನ್ನು ಮತ್ತೆ ಬೋಧಕರನ್ನಾಗಿ ನೇಮಿಸಲಾಗಿದೆ ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಈ ಮೊದಲು ಸಚಿನ್​ ಗುಪ್ತಾ ಅವರನ್ನು ಅಮಾನತುಗೊಳಿಸಿದ್ದಾಗ ತನಿಖೆ ಮುಗಿಯುವವರೆಗೆ ಲಿಖಿತ ಅನುಮತಿ ಇರದ ಹೊರತು ಏರ್​ ಇಂಡಿಯಾದ ಆವರಣದೊಳಗೆ ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧ ಹೇರಲಾಗಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 19 =
Remember me
