ನವದೆಹಲಿ:ದೇಶಾದ್ಯಂತ ಹೃದಯಾಘಾತ ಹೆಮ್ಮಾರಿಯಂತೆ ಕಾಡುತ್ತಿದ್ದು, ಚಿಕ್ಕ ಮಕ್ಕಳು, ವಯೋವೃದ್ಧರು ಎನ್ನದೆ ಎಲ್ಲ ವಯೋಮಾನದವರನ್ನು ಬಲಿ ತೆಗೆದುಕೊಳ್ಳಲಾರಂಭಿಸಿದೆ. ಕುಸಿದು ಬಿದ್ದು ಇಲ್ಲವೇ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಜನರು ಸಾಯುತ್ತಿರುವ ಪ್ರಕರಣ ದಿನೇದಿನೆ ಕೇಳಿಬರುತ್ತಿದೆ.
ಏರ್ ಇಂಡಿಯಾದ 37 ವರ್ಷದ ಪೈಲಟ್​ ಒಬ್ಬರು ಕೂಡ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಈ ಪ್ರಕರಣ ನಡೆದಿದೆ. ಹಿಮಾನಿಲ್ ಕುಮಾರ್ ಎಂಬಾತ ಸಾವಿಗೀಡಾದ ಪೈಲಟ್.
ವಿಮಾನನಿಲ್ದಾಣದ ಲೆವೆಲ್​ 3 ಕಚೇರಿಯಲ್ಲಿ ಬೆಳಗ್ಗೆ 11.35ರ ಸುಮಾರಿಗೆ ಇವರಿಗೆ ಎದೆನೋವು ಉಂಟಾಗಿದ್ದು, ಕೂಡಲೇ ಸಿಪಿಆರ್​ ಮಾಡಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದಾಗ್ಯೂ ಇವರನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಇದನ್ನೂ ಓದಿ:ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?
ಕ್ಯಾಪ್ಟನ್​ ಹಿಮಾನಿಲ್ ಕುಮಾರ್ ಇದೇ ಆ. 23ರಂದು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದು, ಅವರು ದೈಹಿಕವಾಗಿ ಸದೃಢರಿದ್ದಾರೆ ಎಂದು ವೈದ್ಯಕೀಯ ಪ್ರಮಾಣಪತ್ರದಲ್ಲಿ ದೃಢೀಕರಿಸಲಾಗಿದೆ. ಅಲ್ಲದೆ ಈ ಪ್ರಮಾಣಪತ್ರದ ಅವಧಿ 2024ರ ಆ. 30ರ ವರೆಗೂ ಇದೆ. ಅಲ್ಲದೆ, ಅವರು ಕೆಲಸದ ಸಮಯದಲ್ಲಿ ಯಾವುದೇ ಆಯಾಸದ ಅನುಭವವನ್ನೂ ಹೊಂದಿರಲಿಲ್ಲ. ಅದಾಗ್ಯೂ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದು ಅಚ್ಚರಿ ಮೂಡಿಸಿದೆ ಎನ್ನಲಾಗಿದೆ.
ಅಂದಹಾಗೆ ಇದು ಮೊದಲ ಪ್ರಕರಣವಲ್ಲ. ಯುವ ಪೈಲಟ್​ಗಳು ಹೃದಯಾಘಾತಕ್ಕೀಡಾಗಿ ಮರಣ ಹೊಂದಿದ ಪ್ರಕರಣಗಳಲ್ಲಿ ಇದು ಮೂರನೆಯದು. ಆಗಸ್ಟ್​ನಲ್ಲಿ ಇಂಡಿಗೊ ಪೈಲಟ್​ ನಾಗ್ಪುರ ವಿಮಾನನಿಲ್ದಾಣದಲ್ಲಿ ಇನ್ನೇನು ಪ್ರಯಾಣಕ್ಕೆ ಸಜ್ಜಾಗುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ಸಾವಿಗೀಡಾಗಿದ್ದರು. ಅದಕ್ಕೂ ಹಿಂದಿನ ದಿನ ಕತಾರ್ ಏರ್​ವೇಸ್ ಪೈಲಟ್​ ಪ್ರಯಾಣಿಕರಾಗಿ ದೆಹಲಿಯಿಂದ ದೋಹಾಗೆ ಸಂಚರಿಸುತ್ತಿದ್ದಾಗ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದರು.
ಶಮಿಗೆ ಏಳು ವಿಕೆಟ್: ಏನಿದು ಅಚ್ಚರಿ.. ಆತನೊಬ್ಬ ನಿನ್ನೆ ಕಂಡ ಕನಸು ಇಂದು ನಿಜವಾಯ್ತು!

‘ದೇವ್ರು’ ಮೆಚ್ಚೋ ಆಟ ಆಡಿದ ವಿರಾಟ್​: ‘ಆ ದಿನ ನನಗೆ ನಗು ತಡೆಯಲು ಆಗಲಿಲ್ಲ’ ಎಂದ ಸಚಿನ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 + twelve =
Remember me
