ನವದೆಹಲಿ:ಏರ್​ ಇಂಡಿಯಾದಲ್ಲಿನ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನು ಬಿಜೆಪಿಯ ಹಿರಿಯ ನಾಯಕ, ಸಂಸದ ಸುಬ್ರಮಣಿಯನ್​ ಸ್ವಾಮಿ ಟೀಕಿಸಿದ್ದು, ಸುಪ್ರೀಂಕೋರ್ಟ್​ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್​ ಕೂಡ ಸರ್ಕಾರವನ್ನು ಟೀಕಿಸಿದೆ.
ಟ್ವೀಟ್​ ಮೂಲಕ ತಮ್ಮ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಬ್ರಮಣಿಯನ್​ ಸ್ವಾಮಿ ಏರ್​ ಇಂಡಿಯಾ ಮಾರಾಟ ಮಾಡುವುದು ದೇಶ ವಿರೋಧಿ ನಿರ್ಧಾರ ಎಂದು ಕರೆದಿದ್ದಾರೆ.
ಏರ್​ ಇಂಡಿಯಾ ಮಾರಾಟ ಪ್ರಕ್ರಿಯೆಗೆ ಇಂದಿನಿಂದ ಮರುಚಾಲನೆ ಸಿಕ್ಕಿದೆ. ಈ ಒಪ್ಪಂದ ಸಂಪೂರ್ಣ ದೇಶ ವಿರೋಧಿಯಾಗಿದೆ. ಇದು ನನ್ನನ್ನು ಬಲವಂತವಾಗಿ ಕೋರ್ಟ್​ ಮೆಟ್ಟಿಲೇರುವಂತೆ ಮಾಡುತ್ತದೆ. ನಮ್ಮ ಕುಟುಂಬದ ಬೆಳ್ಳಿಯನ್ನು​ ನಾವು ಮಾರಾಟ ಮಾಡಬಾರದು ಎಂದಿದ್ದಾರೆ.
ಅಲ್ಲದೆ, ಏರ್​ ಇಂಡಿಯಾ ಚೇತರಿಕೆ ಕಾಣುತ್ತಿದೆ. ಅದಕ್ಕೆ ಪೂರಕವಾಗಿ ಏಪ್ರಿಲ್-ಡಿಸೆಂಬರ್​ ಅಂಕಿಅಂಶಗಳು ಧನಾತ್ಮಕವಾಗಿವೆ. ಹೀಗಿರುವಾಗ ಪ್ರಧಾನಿ ಮೋದಿಯವರೆ ಏರ್​ ಇಂಡಿಯಾವನ್ನು ಬಲಪಡಿಸದೇ ಮಾರಾಟ ಮಾಡಲು ಏಕೆ ಮುಂದಾಗಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಕೂಡ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದೆ. ಹಿರಿಯ ನಾಯಕ ಕಪಿಲ್​ ಸಿಬಲ್​ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಖಜಾನೆಯಲ್ಲಿ ಹಣ ಇಲ್ಲದಿದ್ದಾಗ ಸರ್ಕಾರ ಏನು ಮಾಡುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಸರ್ಕಾರದಲ್ಲಿ ಹಣವಿಲ್ಲ. ಆರ್ಥಿಕ ಬೆಳವಣಿಗೆ ಶೇ 5ಕ್ಕಿಂತಲೂ ಕಡಿಮೆ ಇದೆ. ನರೇಗಾ ಯೋಜನೆಯ ಹಣ ವಸೂಲಾಗಿಲ್ಲ. ಹೀಗಾಗಿ ಮೌಲ್ಯಯುತವಾದ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.(ಏಜೆನ್ಸೀಸ್​)
Air India disinvestment process restarts todayhttps://t.co/72eklh9C3g: THIS DEAL IS WHOLLY ANTI NATIONAL and IWILL FORCED TO GO TO COURT. WE CANNOT SELL OUR FAMILY SILVER— Subramanian Swamy (@Swamy39)January 27, 2020
Air India disinvestment process restarts todayhttps://t.co/72eklh9C3g: THIS DEAL IS WHOLLY ANTI NATIONAL and IWILL FORCED TO GO TO COURT. WE CANNOT SELL OUR FAMILY SILVER
RT@NAVANGULTEJAS:@Swamy39Air India on Recovery mode: Maharaja’s April-December EBITDA Turns Positive; Loss NarrowsCC@Swamy39@jagdishshettyPM@narendramodiSir why does govt still want to sell this Family Silver instead of strengthening it ?https://t.co/C1SCV3mCPJ— Subramanian Swamy (@Swamy39)January 27, 2020
RT@NAVANGULTEJAS:@Swamy39Air India on Recovery mode: Maharaja’s April-December EBITDA Turns Positive; Loss NarrowsCC@Swamy39@jagdishshettyPM@narendramodiSir why does govt still want to sell this Family Silver instead of strengthening it ?https://t.co/C1SCV3mCPJ
ಏರ್​ ಇಂಡಿಯಾದಲ್ಲಿನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಮುಂದಾದ ಕೇಂದ್ರ ಸರ್ಕಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 13 =
Remember me
