ನವದೆಹಲಿ:ಇಸ್ರೇಲ್ ಮತ್ತು ಹಮಾಸ್​​​​ ನಡುವಿನ ಯುದ್ಧದ ಭೀತಿಯ ಮಧ್ಯೆ ಏರ್​ ಇಂಡಿಯಾ ಟೆಲ್​ ಅವಿವ್​​ಗೆ ತೆರಳುವ ವಿಮಾನಗಳನ್ನು ಸ್ಥಗಿತಗೊಳಿಸಿದೆ. ಈ ಹಿಂದೆ ಲೆಬನಾನ್​ನಲ್ಲಿರುವ ಭಾರತೀಯರಿಗೆ ತಕ್ಷಣವೇ ತೊರೆಯುವಂತೆ ಭಾರತ ಸರ್ಕಾರ ಸಲಹೆ ನೀಡಿತ್ತು. ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಅವರ ಹತ್ಯೆಯ ನಂತರ ಇಸ್ರೇಲ್ ಮತ್ತು ಹಮಾಸ್​​​ ನಡುವಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ.
ಇದನ್ನು ಓದಿ:ಹಿಮಾಚಲದಲ್ಲಿ ಮೇಘಸ್ಫೋಟ: 50 ಮಂದಿ ನಾಪತ್ತೆ.. ರೆಡ್​ ಅಲರ್ಟ್​​ ಘೋಷಣೆ
ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಟೆಲ್ ಅವಿವ್​​ಗೆ ತೆರಳುವ ಮತ್ತು ಅಲ್ಲಿಂದ ಬರುವ ನಮ್ಮ ನಿಗದಿತ ವಿಮಾನಗಳ ಕಾರ್ಯಾಚರಣೆಯನ್ನು 2024 ಆಗಸ್ಟ್ 8ರವರೆಗೆ ಸ್ಥಗಿತಗೊಳಿಸಿದ್ದೇವೆ. ತಕ್ಷಣದಿಂದಲೆ ಜಾರಿಗೆ ಬರುವಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ANNOUNCEMENTIn view of the ongoing situation in parts of the Middle East, we have suspended scheduled operation of our flights to and from Tel Aviv with immediate effect up to and including 08 August 2024. We are continuously monitoring the situation and are extending support…
ಏರ್ ಇಂಡಿಯಾವು ಆಗಸ್ಟ್​​ 1ರಂದು ದೆಹಲಿಯಿಂದ ಟೆಲ್ ಅವಿವ್​​​​​​​​ಗಿದ್ದ ವಿಮಾನ AI139 ಮತ್ತು ಟೆಲ್ ಅವಿವ್‌ನಿಂದ ದೆಹಲಿಗಿದ್ದ AI140 ವಿಮಾನ ಹಾರಾಟವನ್ನು ರದ್ದುಗೊಳಿಸಿದೆ. ಈ ಎರಡು ವಿಮಾನಗಳಲ್ಲಿ ಪ್ರಯಾಣಿಸಲು ಬುಕಿಂಗ್ ಹೊಂದಿದ್ದ ಪ್ರಯಾಣಿಕರಿಗೆ ಮರುಹೊಂದಿಸಿವಿಕೆ ಮತ್ತು ರದ್ದತಿ ಶುಲ್ಕಗಳನ್ನು ಒಂದು ಬಾರಿ ಮನ್ನಾ ಮಾಡಲಾಗುವುದು. ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ ಎಂದು ಏರ್​ಲೈನ್ಸ್​​ ತಿಳಿಸಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ 011-69329333 / 011-69329999ಗೆ ಕರೆ ಮಾಡುವಂತೆ ತಿಳಿಸಿದೆ. (ಏಜೆನ್ಸೀಸ್​​)
ಭಾರತೀಯ ಸಂವಿಧಾನದ ಮೊದಲ ಆವೃತ್ತಿ ಹರಾಜಿನಲ್ಲಿ 48 ಲಕ್ಷ ರೂ.ಗೆ ಮಾರಾಟ; ಇದರ ವಿಶೇಷತೆ ಏನು ಇಲ್ಲಿದೆ ಡೀಟೇಲ್ಸ್​​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 4 =
Remember me
