ನವದೆಹಲಿ: ಲಾಕ್​ಡೌನ್​ನಿಂದ ಭಾರತದಲ್ಲಿ ಸಿಲುಕಿರುವ ವಿದೇಶಿಗರನ್ನು ಆಯಾ ದೇಶಗಳಿಗೆ ಏರ್​ ಇಂಡಿಯಾ ವಿಶೇಷ ವಿಮಾನಗಳ ಮೂಲಕ ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ. ಅದಕ್ಕೆ ಜಗತ್ತಿನ ಹಲವು ದೇಶಗಳು ಮೆಚ್ಚುಗೆಯನ್ನೂ ವ್ಯಕ್ತಪಡಿಸಿವೆ.ಈಗ ಇನ್ನೊಂದು ಮಹತ್ವದ ಕಾರ್ಯವನ್ನು ಕೇಂದ್ರ ಸರ್ಕಾರ ಏರ್ ಇಂಡಿಯಾ ವಿಮಾನಗಳ ಮೂಲಕ ಮಾಡುತ್ತಿದೆ.
ಇಲ್ಲಿನ ರೈತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಅವರು ಬೆಳೆದ ಹಣ್ಣು, ತರಕಾರಿಗಳನ್ನು ಎರಡು ವಿಶೇಷ ವಿಮಾನಗಳ ಮೂಲಕ ಲಂಡನ್​ ಹಾಗೂ ಜರ್ಮನಿಯ ಫ್ರಾಂಕ್​ಫರ್ಟ್​ಗಳಿಗೆ ಕಳಿಸಿಕೊಡಲಾಗುತ್ತಿದೆ.
ಲಾಕ್​ಡೌನ್​ನಿಂದ ಕೃಷಿ ಉತ್ಪನ್ನಗಳ ಮಾರಾಟಕ್ಕೂ ಕಷ್ಟವಾಗಿದೆ. ರೈತರು ತಮ್ಮ ಬೆಳೆಯನ್ನು ಮಾರಲಾಗದೆ ಕಂಗಾಲಾಗುತ್ತಿದ್ದಾರೆ. ಹಣ್ಣು, ತರಕಾರಿಗಳನ್ನು ರಸ್ತೆಯಲ್ಲಿ ಎಸೆಯುತ್ತಿರುವ ಘಟನೆಗಳೂ ನಡೆಯುತ್ತಿದೆ. ಹೀಗಿರುವಾಗ ರೈತರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಕೃಷಿ ಉದಾನ್​ ಯೋಜನೆಯಡಿ ಎರಡು ಏರ್​ ಇಂಡಿಯಾ ವಿಮಾನಗಳು ಹಣ್ಣು, ತರಕಾರಿಗಳನ್ನು ಸಾಗಣೆ ಮಾಡಲಿವೆ.
ಪ್ರಸಕ್ತ ಋತುವಿನ ಪ್ರಮುಖ ಹಣ್ಣು ಮತ್ತು ತರಕಾರಿಗಳನ್ನು ಹೊತ್ತ ಒಂದು ವಿಮಾನ ಏಪ್ರಿಲ್​ 13ರಂದು ಲಂಡನ್​ಗೆ ತೆರಳಲಿದ್ದು, ಇನ್ನೊಂದು ವಿಮಾನ ಏಪ್ರಿಲ್ 15ರಂದು ಫ್ರಾಂಕ್​ಫರ್ಟ್​ಗೆ ಹೋಗಲಿದೆ. ಇವೆರಡೂ ವಿಮಾನಗಳು ವಾಪಸ್​ ಬರುವಾಗ ಅಲ್ಲಿಂದ ಕೆಲವು ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತು ತರಲಿವೆ ಎಂದು ಸರ್ಕಾರದ ಉನ್ನತ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ರೈತರ ಬೆಳೆಯನ್ನು ವಿದೇಶಗಳಿಗೆ ಸಾಗಿಸುವ ಮೂಲಕ ಅವರಿಗೆ ನೆರವಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೃಷಿ ಉದಾನ್ ಯೋಜನೆಯನ್ನು ಜಾರಿಗೊಳಿಸಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + three =
Remember me
