ನವದೆಹಲಿ:ಸರ್ಕಾರಿ ವಿಮಾನ ಯಾನ ಸೇವಾ ಸಂಸ್ಥೆ ಏರ್​ ಇಂಡಿಯಾ ಜುಲೈ 20ರ ಬಳಿಕ ಎಲ್ಲ ಸಿಬ್ಬಂದಿಗೂ ಮನೆಯಿಂದ ಕೆಲಸ ಮಾಡುವ ಅವಕಾಶವನ್ನು (ವರ್ಕ್​ ಫ್ರಾಮ್​ ಹೋಮ್​ ) ರದ್ದು ಮಾಡಲಿದೆ.
ಆದರೆ, ಇದರಲ್ಲಿ ಕೆಲ ವಿನಾಯ್ತಿಗಳನ್ನು ನೀಡಿದೆ. ಕಂಟೇನ್​ಮೆಂಟ್​ ಝೋನ್​ಗಳಲ್ಲಿ ಕೆಲಸ ಮಾಡುತ್ತಿರುವವರು, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿಯರಿಗೆ ಈ ಸೌಲಭ್ಯ ನೀಡಲು ಪರಿಗಣಿಸಬಹುದು ಎಂದು ತಿಳಿಸಿದೆ.
ಇದನ್ನೂ ಓದಿ;ತನಗಿರುವ ವಿಚಿತ್ರ ಗೀಳಿನಿಂದಲೇ ತಿಂಗಳಿಗೆ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿದ್ದಾಳೆ ಈ ಯುವತಿ
ಈ ನಡುವೆ, ಇನ್ನೊಂದು ಶಾಕ್​ ನೀಡಲು ಏರ್​ ಇಂಡಿಯಾ ಸಜ್ಜಾಗಿದೆ. ಸಿಬ್ಬಂದಿಗೆ ಆರು ತಿಂಗಳಿನಿಂದ ಎರಡು ವರ್ಷದ ಅವಧಿಗೆ ರಜೆ ನೀಡಲು ನಿರ್ಧರಿಸಿದೆ. ಈ ರಜೆ ಸೌಲಭ್ಯವನ್ನು ಐದು ವರ್ಷಗಳವರೆಗೂ ವಿಸ್ತರಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದೆ.
ಇದು ಕೇವಲ ರಜೆ ಸೌಲಭ್ಯವಲ್ಲ, ಕಡ್ಡಾಯ ವೇತನರಹಿತ ರಜೆ ಆಗಿದೆ. ಇದಕ್ಕಾಗಿ ಉದ್ಯೋಗಿಯ ಅಗತ್ಯತೆ, ಕಾರ್ಯಕ್ಷಮತೆ, ವೈದ್ಯಕೀಯ ಕಾರಣ ಮೊದಲಾದ ಅಂಶಗಳನ್ನು ಪರಿಗಣಿಸಿ ಸಿಬ್ಬಂದಿಯ ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಜತೆಗೆ, ಇನ್ನೊಂದು ಷರತ್ತು ಇದರಲ್ಲಿದೆ. ಈ ರಜೆ ಸೌಲಭ್ಯ ಪಡೆದವರು ಇತರ ಯಾವುದೇ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಉದ್ಯೋಗ ಹೊಂದುವಂತಿಲ್ಲ.
ಇದನ್ನೂ ಓದಿ;ವಿಮಾನ ನಿಲ್ದಾಣದಲ್ಲಿ ಅನಾಥವಾಗಿರುವ ಕಾರಿನ ಹತ್ತಿರ ಹೋಗೋ ಧೈರ್ಯ ಯಾರಿಗೂ ಇಲ್ಲ, ಕಾರಣ ನಂಬರ್​ ಪ್ಲೇಟ್​…!
ಕೋವಿಡ್​ ಸಂಕಷ್ಟದಿಂದಾಗಿ ಹಲವು ಖಾಸಗಿ ವಿಮಾನ ಯಾನ ಸಂಸ್ಥೆಗಳು ಈಗಾಗಲೇ ಸಿಬ್ಬಂದಿಗೆ ವೇತನರಹಿತ ರಜೆ ಘೋಷಿಸಿವೆ. ಇದೀಗ ಏರ್​ ಇಂಡಿಯಾ ಸರದಿಯಾಗಿದೆ. ಸದ್ಯ ಪ್ರಾದೇಶಿಕ ವಿಮಾನಯಾನಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಶೇ.50 ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ. ಅಂತಾರಾಷ್ಟ್ರೀಯ ಮಾರ್ಗದಲ್ಲಿನ್ನೂ ಸಂಚಾರ ಆರಂಭವಾಗಿಲ್ಲ.
ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
