ನವದೆಹಲಿ:ಮಾಸ್ಕೋದಲ್ಲಿ ನಿರಾಶ್ರಿತರಾಗಿರುವ ಭಾರತೀಯರನ್ನು ಕರೆತರಲು ದೆಹಲಿಯಿಂದ ಹೊರಟಿದ್ದ ಏರ್​ ಇಂಡಿಯಾದ ಏರಬಸ್​-320 ವಿಮಾನವನ್ನು ಮಾರ್ಗ ಮಧ್ಯವೇ ದೆಹಲಿಗೆ ವಾಪಸ್​ ಕರೆಯಿಸಿಕೊಳ್ಳಲಾಗಿದೆ.
ದೆಹಲಿಯಿಂದ ಯಾವುದೇ ಪ್ರಯಾಣಿಕರಿಲ್ಲದೇ, ಕೇವಲ ಸಿಬ್ಬಂದಿಯೊಂದಿಗೆ ಹೊರಟಿದ್ದ ಏರ್​ ಇಂಡಿಯಾ ವಾಪಸ್​ ಕರೆಯಿಸಿಕೊಳ್ಳುವ ವೇಳೆಗಾಗಲೇ ಉಜ್ಬೆಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತ್ತು. ಶನಿವಾರ ಮಧ್ಯಾಹ್ನ 12.30ರಲ್ಲಿ ದೆಹಲಿಗೆ ಮರಳಿದೆ.
ಇದನ್ನೂ ಓದಿ;ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಏಕೈಕ ಭಾರತೀಯ ಕೊಹ್ಲಿ
ಇಷ್ಟಕ್ಕೂ ವಿಮಾನ ವಾಪಸ್​ ಕರೆಯಿಸಿಕೊಳ್ಳಲು ಕಾರಣವೇನೆಂದರೆ, ಪೈಲಟ್​ ಕೋವಿಡ್​19 ಕಾಯಿಲೆಗೀಡಾಗಿದ್ದ. ಆತನಿಗೆ ಕರೊನಾ ಸೋಂಕು ಅಂಟಿರುವುದು ಪರೀಕ್ಷೆಯಲ್ಲಿ ಖಚಿತವಾಗಿತ್ತು. ಇದು ಗೊತ್ತಾಗುತ್ತಿದ್ದಂತೆ ಏರ್​ ಇಂಡಿಯಾ ಅಧಿಕಾರಿಗಳು ಕೂಡಲೇ ವಿಮಾನವನ್ನು ದೆಹಲಿಯಲ್ಲಿ ಲ್ಯಾಂಡ್​ ಮಾಡುವಂತೆ ಸೂಚಿಸಿದ್ದಾರೆ.
ಪೈಲಟ್​ ಹಾರಾಟಕ್ಕೂ ತೆರಳುವ ಮುನ್ನ ನಡೆಸಿದ ಪರೀಕ್ಷೆಯಲ್ಲಿ ಲೋಪ ಉಂಟಾಗಿತ್ತು. ಬಳಿಕ ತಪಾಸಣೆ ಮಾಡಿದಾಗ ಕರೊನಾ ಪಾಸಿಟಿವ್​ ಎಂದು ಫಲಿತಾಂಶ ಬಂದಿತ್ತು. ವಿಮಾನದ ಸಿಬ್ಬಂದಿಯನ್ನೆಲ್ಲ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಮಿಷನ್​ ವಂದೇ ಭಾರತ ಕಾರ್ಯಾಚರಣೆಯಡಿ ಮಾಸ್ಕೋದಲ್ಲಿರುವ ಭಾರತೀಯರನ್ನು ಕರೆತರಲು ಮತ್ತೊಂದು ವಿಮಾನ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಏರ್​ ಇಂಡಿಯಾ ಸಿಬ್ಬಮದಿ ತೋರಿದ ಸಮಯ ಪ್ರಜ್ಞೆ ನೂರಾರು ಭಾರತೀಯರನ್ನು ಕರೊನಾದಿಂದ ಕಾಪಾಡಿದೆ.
ಮೊಬೈಲ್​ ಸಂಖ್ಯೆಗಿನ್ನು 11 ಅಂಕಿಗಳು, ಟ್ರಾಯ್​ ಶಿಫಾರಸು

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:17 − fourteen =
Remember me
