ಲಂಡನ್​: ಜಗತ್ತಿನಲ್ಲಿ ವಾಯುಮಾಲಿನ್ಯ ಇರದಿದ್ದರೆ ಕರೊನಾ ಸೋಂಕಿತರ ಸಾವಿನ ಪ್ರಮಾಣ ಇನ್ನೂ ಕಡಿಮೆ ಇದ್ದಿರುತ್ತಿತ್ತು. ವಾಯುಮಾಲಿನ್ಯದಿಂದಾಗಿಯೇ ವಿಶ್ವಾದ್ಯಂತ ಕರೊನಾ ಸೋಂಕಿತರ ಸಾವು ಶೇ. 15 ಹೆಚ್ಚಳಗೊಂಡಿದೆ ಎಂಬುದನ್ನು ಅಧ್ಯಯನವೊಂದು ಕಂಡುಕೊಂಡಿದೆ.
ಕಾರ್ಡಿಯೊವ್ಯಾಸ್ಕುಲಾರ್ ರಿಸರ್ಚ್​ ಜರ್ನಲ್​ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಈ ಅಂಶ ಪ್ರಸ್ತಾಪಗೊಂಡಿದೆ. ವಾಯುಮಾಲಿನ್ಯದಿಂದಾಗಿ ಯುರೋಪ್​ನಲ್ಲಿ ಶೇ. 19, ಉತ್ತರ ಅಮೆರಿಕ ಶೇ. 17, ಪೂರ್ವ ಏಷ್ಯಾ ಶೇ. 27, ಝೆಕ್​ ಗಣರಾಜ್ಯ ಶೇ. 29, ಚೀನಾ ಶೇ. 27, ಜರ್ಮನಿ ಶೇ. 26, ಸ್ವಿಜರ್ಲೆಂಡ್ ಶೇ. 22, ಬೆಲ್ಜಿಯಂ ಶೇ. 21, ನೆದರ್ಲೆಂಡ್​ ಶೇ. 19, ಇಟಲಿ ಶೇ. 15, ಯುಕೆನಲ್ಲಿ ಶೇ. 14 ಸಾವು ಅಧಿಕವಾಗಿ ಸಂಭವಿಸಿದೆ ಎಂದು ವರದಿ ಹೇಳಿದೆ.
ಕೋವಿಡ್​ ಸಾವು ಹೆಚ್ಚಾಗುತ್ತಲೇ ಇರುವುದರಿಂದ ಶೇಕಡಾವಾರು ಹೆಚ್ಚಳ ಸಂಖ್ಯೆಯನ್ನು ಆಯಾ ದೇಶಕ್ಕೆ ತಕ್ಕಂತೆ ನಿಖರವಾಗಿ ಹೇಳುವುದು ಕಷ್ಟ. ಆದರೆ ಜಾಗತಿಕವಾಗಿ ವಾಯುಮಾಲಿನ್ಯದಿಂದಾಗಿ ಕರೊನಾ ಸಾವಿನ ಪ್ರಮಾಣದಲ್ಲಿ ಶೇ. 15 ಹೆಚ್ಚಳವಾಗಿದೆ ಎಂದು ಅಧ್ಯಯನ ಹೇಳಿದೆ.
ವಾಯುಮಾಲಿನ್ಯಕ್ಕೆ ಕಾರಣವಾಗುವ 2.5 ಮೈಕ್ರಾನ್​ಗಿಂತಲೂ ಕಡಿಮೆ ವ್ಯಾಸದ ಕಣಗಳನ್ನು ಪರ್ಟಿಕ್ಯುಲೇಟ್​ ಮ್ಯಾಟರ್​ -25 (ಪಿಎಂ-25)ಗಳ ಪ್ರಮಾಣ ಹಾಗೂ ಉಪ್ರಗಹ ಆಧರಿತ ಮಾಹಿತಿಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಈ ಕಣಗಳಿಗೆ ದೀರ್ಘಕಾಲ ತೆರೆದುಕೊಂಡವರು ಸಾವಿಗೀಡಾಗಿದ್ದಾರೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
