ನವದೆಹಲಿ:ಯಾವುದೇ ಸಂಸ್ಥೆಯಲ್ಲಿ ಮೀಟಿಂಗ್ ಎಂದರೆ ಅಲ್ಲೊಂದು ಶಿಸ್ತು ಸಹಜವಾಗಿಯೇ ಇರುತ್ತದೆ. ಅದರಲ್ಲೂ ಅಂಥ ಮೀಟಿಂಗ್​ನಲ್ಲಿ ಬಾಸ್ ಎನಿಸಿಕೊಂಡವರ ದಿರಿಸು ಟಿಪ್​ಟಾಪ್​ ಆಗಿರುವುದಲ್ಲದೆ ಅವರ ವರ್ತನೆ ಕೂಡ ಗಂಭೀರವಾಗಿ ಇರುತ್ತದೆ. ಆದರೆ ಇಲ್ಲೊಂದು ಅಂಥ ಮೀಟಿಂಗ್​ ನಗೆಪಾಟಲಿಗೆ ಈಡಾಗಿದೆ.
ಏರ್ ​ಏಷ್ಯಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಎಒ) ಟೋನಿ ಫೆರ್ನಾಂಡಿಸ್​ ಅಂಗಿ ಧರಿಸದೆ ಮ್ಯಾನೇಜ್​ಮೆಂಟ್ ಮೀಟಿಂಗ್ ನಡೆಸಿದ್ದು, ಆ ಕುರಿತ ಮಾಹಿತಿಯನ್ನು ಲಿಂಕ್ಡ್​ ಇನ್​ನಲ್ಲಿ ಹಂಚಿಕೊಂಡಿದ್ದರು.
ಮಲೇಷ್ಯಾದ ಈ ಕಡಿಮೆ ವೆಚ್ಚದ ವೈಮಾನಿಕ ಸಂಸ್ಥೆಯ ಉದ್ಯೋಗ ಸಂಸ್ಕೃತಿಯನ್ನು ಹೊಗಳುವ ಸಲುವಾಗಿ ಅವರು ಶರ್ಟ್​ ಇಲ್ಲದೆ ಹಾಗೂ ಮಸಾಜ್​​ ಮಾಡಿಸಿಕೊಳ್ಳುತ್ತ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಬಳಿಕ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದ್ದರಿಂದ ಲಿಂಕ್ಡ್​ ಇನ್​ ಪೋಸ್ಟ್ ಡಿಲೀಟ್ ಮಾಡಲಾಗಿದೆ.
ಇದನ್ನೂ ಓದಿ:ಮಹಿಳಾ ಕುಸ್ತಿಪಟುಗಳ ನಾಡಿಮಿಡಿತ ಚೆಕ್ ಮಾಡಿದ್ದೆ, ಅಷ್ಟೇ..: ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬ್ರಿಜ್​ ಭೂಷಣ್ ಹೇಳಿಕೆ
ವಾರವಿಡೀಯ ಒತ್ತಡದ ನಿವಾರಣೆಗಾಗಿ ವೆರಾನಿಟಾ ಯೊಸೆಫಿನ್ ಮಸಾಜ್ ಮಾಡಿಸಿಕೊಳ್ಳಲು ಸೂಚಿಸಿದರು. ಇಂಡೋನೇಷ್ಯಾ ಮತ್ತು ಏರ್​ಏಷ್ಯಾ ಸಂಸ್ಕೃತಿಯನ್ನು ಪ್ರೀತಿಸಲು ನಾನು ಮಸಾಜ್ ಜತೆ ಮ್ಯಾನೇಜ್​ಮೆಂಟ್ ಸಭೆಯನ್ನೂ ಮಾಡಬಹುದು. ನಾವು ದೊಡ್ಡ ಪ್ರಗತಿ ಸಾಧಿಸುತ್ತಿದ್ದೇವೆ ಮತ್ತು ನಾನು ಈಗ ಕ್ಯಾಪಿಟಲ್ ಎ ರಚನೆ ಅಂತಿಮಗೊಳಿಸಿದ್ದೇನೆ. ಮುಂದಿನ ದಿನಗಳು ಅದ್ಭುತವಾಗಿರಲಿದ್ದು, ಅದಕ್ಕಾಗಿ ಹೆಮ್ಮೆಪಡೋಣ ಎಂದು ಅವರು ಈ ಸಭೆಯಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಹೇಳಿದ್ದರು.
ಇದನ್ನೂ ಓದಿ:‘ಮೋದಿಯನ್ನು ಅಧಿಕಾರಕ್ಕೆ ತಂದ್ರೆ ಉಳಿತೀರಿ’ ಎಂದ ಸ್ವಾಮೀಜಿ: ಒಂದೇ ದಿನದಲ್ಲಿ ಇಲ್ಲವಾದ ‘ಭವಿಷ್ಯ’!
ಜತೆಗೆ ಶರ್ಟ್ ಧರಿಸದೆ ಮತ್ತು ಮಸಾಜ್​ ಮಾಡಿಸಿಕೊಳ್ಳುತ್ತ ಮಾಡಿದ ಈ ಸಭೆಯ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಪಬ್ಲಿಕ್ ಲಿಸ್ಟಿಂಗ್ ಕಂಪನಿಯ ಸಿಇಒ ಒಬ್ಬರು ಈ ರೀತಿ ಶರ್ಟ್ ಧರಿಸದೆ ಸಭೆ ನಡೆಸುವುದು ಸರಿಯಲ್ಲ ಎಂದು ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ಜೊಮ್ಯಾಟೊ ಫುಡ್ ಡೆಲಿವರಿಗೆ ಸ್ಟೈಲಿಶ್ ಬೈಕು, ಚಂದದ ಯುವತಿ!; ಏನಿದರ ರಹಸ್ಯ?

ಬರೀ 23 ದಿನಗಳಲ್ಲಿ ಭಾರತದಲ್ಲಾಗಲಿವೆ 35 ಲಕ್ಷ ಮದುವೆಗಳು!; ಈ ಮದುವೆ ಸೀಸನ್​ನ ವಹಿವಾಟೆಷ್ಟು ಗೊತ್ತೇ?; ಇಲ್ಲಿದೆ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
