ನವದೆಹಲಿ:ಕರೊನಾ ಮುನ್ನೆಚ್ಚರಿಕೆ ಬಗ್ಗೆ ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಜಾರಿಮಾಡಿರುವ ಹೊಸ ನಿರ್ದೇಶನಗಳನ್ನು ವಿಮಾನ ಆಪರೇಟರ್​ಗಳು ಗಂಭೀರವಾಗಿ ಸ್ವೀಕರಿಸಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಕಳೆದ ಕೆಲವು ದಿನಗಳಲ್ಲಿ ಏರ್​ಏಷಿಯಾ ಇಂಡಿಯಾ ಕಂಪೆನಿ ತನ್ನ ಇಬ್ಬರು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ್ದರೆ, ಇಂಡಿಗೋ ಏರ್​ಲೈನ್ಸ್ ಮತ್ತು ಅಲೈಯನ್ಸ್ ಏರ್​ ಕಂಪೆನಿ ಆರು ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಭದ್ರತಾ ಪಡೆ ವಶಕ್ಕೆ ಒಪ್ಪಿಸಿವೆ.
“ವಿಮಾನ ಪ್ರಯಾಣಿಕರು ಏರ್​ಪೋರ್ಟ್ ಪ್ರವೇಶಿಸಿದಾಗಿನಿಂದ ಹಿಡಿದು ಪ್ರಯಾಣದ ಪೂರ್ಣ ವೇಳೆ ಮಾಸ್ಕ್​ ಸರಿಯಾಗಿ ಧರಿಸಿರಬೇಕು, ಮತ್ತು ಸಾಮಾಜಿಕ ಅಂತರ ಮುಂತಾದ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ವಿಮಾನ ಕರ್ಮಚಾರಿಗಳು ಸೂಕ್ತ ಎಚ್ಚರಿಕೆ ನೀಡಬೇಕು. ಆ ನಂತರವೂ ನಿಯಮ ಉಲ್ಲಂಘಿಸಿದಲ್ಲಿ ಅಂಥ ಯಾತ್ರಿಕರನ್ನು ವಿಮಾನದಿಂದ ಕೆಳಗಿಳಿಸಬೇಕು ಅಥವಾ ನಂತರ ಸೆಕ್ಯುರಿಟಿ ಅಧಿಕಾರಿಗಳಿಗೆ ಒಪ್ಪಿಸಬೇಕು” ಎಂದು ಡಿಜಿಸಿಎ ಮಾರ್ಚ್ 13 ರಂದು ಆದೇಶ ಹೊರಡಿಸಿತ್ತು.
ಇದನ್ನೂ ಓದಿ:‘ಪ್ರಯಾಣಿಕರೇ ಗಮನಿಸಿ… ಮಾಸ್ಕ್ ಸರಿಯಾಗಿ ಧರಿಸದಿದ್ದಲ್ಲಿ, ವಿಮಾನದಿಂದ ಇಳಿಸಲಾಗುವುದು’!
ಈ ಆದೇಶವನ್ನು ಬಹುತೇಕ ಏರ್​ಲೈನ್​ ಆಪರೇಟರ್​​ಗಳು ಪಾಲಿಸಲು ಆರಂಭಿಸಿದ್ದಾರೆ. ಇಂಡಿಗೋದ ದೆಹಲಿ-ಗೋವಾ ವಿಮಾನದಲ್ಲಿ ಸೋಮವಾರ ಪ್ರಯಾಣಿಸುತ್ತಿದ್ದ ಮಿಡಲ್ ಸೀಟ್ ಪ್ಯಾಸೆಂಜರ್​ ಒಬ್ಬರು ಪಿಪಿಇ ಗೌನ್ ಧರಿಸಲು ಗಲಾಟೆ ಮಾಡಿ, ಪದೇ ಪದೇ ತಮ್ಮ ಮಾಸ್ಕ್ ತೆಗೆಯುತ್ತಿದ್ದರು ಎನ್ನಲಾಗಿದೆ. ಈ ಮಹಿಳಾ ಪ್ರಯಾಣಿಕರನ್ನು ವಿಮಾನ ಸಿಬ್ಬಂದಿಯು ಗೋವಾದಲ್ಲಿ ವಿಮಾನ ಲ್ಯಾಂಡ್​ ಆದಾಗ ಭದ್ರತಾ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬುಧವಾರ ದೆಹಲಿಯಿಂದ ಹೈದರಾಬಾದ್​ಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಪದೇ ಪದೇ ಎಚ್ಚರಿಕೆ ನೀಡಿದರೂ ಮಾಸ್ಕ್ ಹಾಕಿಕೊಳ್ಳಲು ನಿರಾಕರಿಸಿದ ಪುರುಷ ಪ್ರಯಾಣಿಕರೊಬ್ಬರನ್ನು ಹೈದರಾಬಾದ್ ವಿಮಾನ ನಿಲ್ದಾಣದ ಸುರಕ್ಷತಾ ಸಿಬ್ಬಂದಿಯ ವಶಕ್ಕೆ ನೀಡಲಾಗಿದೆ.
ಮತ್ತೊಂದೆಡೆ, ಏರ್​ಏಷಿಯಾ ತನ್ನ ಇಬ್ಬರು ಪ್ರಯಾಣಿಕರನ್ನು ಕರೊನಾ ನಿಯಮ ಪಾಲಿಸಲು ನಿರಾಕರಿಸಿದ್ದಕ್ಕಾಗಿ ವಿಮಾನ ಹೊರಡುವ ಮುಂಚೆ ಕೆಳಗಿಳಿಸಿರುವ ಪ್ರಕರಣ ವರದಿಯಾಗಿದೆ. ಪಿಪಿಇ ಗೌನ್​ಗಳನ್ನು ಧರಿಸಲು ಒಪ್ಪದೆ ಹಠ ಹಿಡಿದ ಇಬ್ಬರು ಮಿಡಲ್ ಸೀಟ್ ಪ್ಯಾಸೆಂಜರ್​ಗಳನ್ನು ತನ್ನ ಗೋವಾ-ಮುಂಬೈ ವಿಮಾನದಿಂದ ಹೊರಗೆ ಕಳುಹಿಸಿ ಸೆಕ್ಯುರಿಟಿ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ.
ಇದನ್ನೂ ಓದಿ:ಕರೊನಾ ನಿಯಮ ಉಲ್ಲಂಘನೆ : ಬಾಲಿವುಡ್ ನಟಿ ವಿರುದ್ಧ ಮುಂಬೈ ಪಾಲಿಕೆ ದೂರು
ಮಂಗಳವಾರ ಅಲೈಯನ್ಸ್​ ಏರ್​ನ ಜಮ್ಮು-ಕಾಶ್ಮೀರ ವಿಮಾನದಲ್ಲಿ ಸಿಬ್ಬಂದಿಯ ಎಚ್ಚರಿಕೆಯ ನಂತರವೂ ಪ್ರಯಾಣದ ವೇಳೆ ಸರಿಯಾಗಿ ಮಾಸ್ಕ್ ಹಾಕಿಕೊಳ್ಳದ ನಾಲ್ಕು ಪ್ರಯಾಣಿಕರನ್ನು ಸೆಕ್ಯುರಿಟಿ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ಈ ರೀತಿ ಹಲವು ಏರ್​ಲೈನ್​ ಆಪರೇಟರ್​ಗಳು ಕರೊನಾ ನಿಯಮಗಳನ್ನು ಉಲ್ಲಂಘಿಸುವ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !
ಕೊಯಂಬತೂರ್ ದಕ್ಷಿಣ ಕ್ಷೇತ್ರಕ್ಕೆ ಕಮಲ್ ಹಾಸನ್ ನಾಮಪತ್ರ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 13 =
Remember me
