ನವದೆಹಲಿ:ಕೋವಿಡ್​ 19 ನಿಯಂತ್ರಣಕ್ಕೆ ಘೋಷಿಸಲಾಗಿರುವ ಲಾಕ್​ಡೌನ್​ ಅವಧಿಯಲ್ಲಿ ಬುಕ್ಕಿಂಗ್​ ಮಾಡಲಾಗಿದ್ದ ಎಲ್ಲ ಟಿಕೆಟ್​ಗಳ ಹಣವನ್ನು ಹಿಂದಿರುಗಿಸಲು ರಾಷ್ಟ್ರದ ಎಲ್ಲ ವೈಮಾನಿಕ ಸಂಸ್ಥೆಗಳು ಸಮ್ಮತಿಸಿವೆ.
ಇನ್ನು ಮೂರು ವಾರಗಳಲ್ಲಿ ಯಾವುದೇ ರದ್ಧತಿಯ ಶುಲ್ಕ ಇಲ್ಲದೆ ಟಿಕೆಟ್​ನ ಹಣವನ್ನು ಹಿಂದಿರುಗಿಸಲು ವೈಮಾನಿಕ ಸಂಸ್ಥೆಗಳು ಸಮ್ಮತಿಸಿರುವುದಾಗಿ ನಾಗರಿಕ ವಿಮಾನಯಾನದ ಡೈರೆಕ್ಟರೇಟ್​ ಜನರಲ್​ (ಡಿಜಿಸಿಎ) ಹೇಳಿದೆ.
ಕರೊನಾ ಮಾರಿಯನ್ನು ಹಿಮ್ಮೆಟ್ಟಿಸುವ ಸಲುವಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿದೆ. ಅದರಂತೆ ಈ ಅವಧಿಯಲ್ಲಿ ವಿಮಾನ, ರೈಲು ಮತ್ತು ಬಸ್​ ಸೇರಿ ಎಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಯಾವುದೇ ರದ್ಧತಿ ಶುಲ್ಕವನ್ನು ಅನ್ವಯಿಸದೆ, ಲಾಕ್​ಡೌನ್​ ಅವಧಿಯಲ್ಲಿ ಕಾಯ್ದಿರಿಸಲಾಗಿದ್ದ ಟಿಕೆಟ್​ಗಳ ಹಣವನ್ನು ಹಿಂದಿರುಗಿಸಿದೆ. ವಿಮಾನ ಸೇವೆಗಳು ಸ್ಥಗಿತಗೊಂಡಿರುವುದರಿಂದ, ವೈಮಾನಿಕ ಯಾನ ಸಂಸ್ಥೆಗಳು ಮುಂಗಡ ಕಾಯ್ದಿರಿಸಿದ್ದ ಟಿಕೆಟ್​ಗಳ ಹಣವನ್ನು ಹಿಂದಿರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು. ಅದರಂತೆ ಈಗ ಹಣವನ್ನು ಹಿಂದಿರುಗಿಸಲು ವೈಮಾನಿಕ ಸಂಸ್ಥೆಗಳು ಸಮ್ಮತಿಸಿವೆ.
ಲಾಕ್​ಡೌನ್​ನಿಂದ ಸುಧಾರಿಸಿದ್ದ ದೆಹಲಿಯ ಗಾಳಿಯ ಗುಣಮಟ್ಟ ಮತ್ತೆ ಕಳಪೆ ಆಗಿದ್ದು ಏಕೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 7 =
Remember me
