ಮುಂಬೈ:ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್​ ವಿವಾಹ ಮಹೋತ್ಸವದಲ್ಲಿ ​​ವಿಶ್ವದಾದ್ಯಂತ ಗಣ್ಯರು ಪಾಲ್ಗೊಂಡಿದ್ದಾರೆ. ಇಡೀ ಬಾಲಿವುಡ್​​​ ತಾರೆಯರು ಕೂಡ ತಮ್ಮ ರಾಯಲ್​ ಲುಕ್​ನಲ್ಲಿ ಕಂಗೊಳಿಸಿದ್ದಾರೆ.
ಇದನ್ನು ಓದಿ:ಅನಂತ್-ರಾಧಿಕಾ ಅದ್ಧೂರಿ ವಿವಾಹ: ವಿಶೇಷ ಮೆಹಂದಿಯಲ್ಲಿ ಕಂಗೊಳಿಸಿದ ನೀತಾ ಅಂಬಾನಿ! ಇಲ್ಲಿವೆ ಫೋಟೋಸ್​
ಬಿಟೌನ್​ ಬಿಗ್​ಬಿ ಅಮಿತಾಭ್​​​​ ಬಚ್ಚನ್ ಪತ್ನಿ ಜಯಾ ಬಚ್ಚನ್ ಅವರ ಕೈ ಹಿಡಿದು ಜಿಯೋ ವರ್ಲ್ಡ್ ಸೆಂಟರ್​ಗೆ ಎಂಟ್ರಿ ಕೊಟ್ಟರು. ಅವರ ಜತೆಯಲ್ಲಿ ಮಗ ಅಭಿಷೇಕ್ ಬಚ್ಚನ್, ಮಗಳು ಶ್ವೇತಾ ನಂದಾ, ಅಳಿಯ ನಿಖಿಲ್ ನಂದಾ ಮತ್ತು ಅವರ ಮಕ್ಕಳಾದ ನವ್ಯಾ ಮತ್ತು ಅಗಸ್ತ್ಯ ಕೂಡ ಹಾಜರಾದರು. ಎಲ್ಲರೂ ನಗುತ್ತಲೇ ಫೋಟೊಗೆ ಪೋಸ್​ ಕೊಟ್ಟರು. ಜಯಾ ಬಚ್ಚನ್ ಅವರ ಸೀರೆ ಮತ್ತು ನೆಕ್ಲೇಸ್ ಎಲ್ಲರ ಗಮನ ಸೆಳೆಯಿತು. ಆದರೆ ಈ ಫ್ಯಾಮಿಲಿ ಫೋಟೋದಲ್ಲಿ ನೋಡುಗರ ಗಮನ ಸೆಳೆದ ಇನ್ನೊಂದು ವಿಷಯವಿದೆ. ಅದು ಫ್ಯಾಮಿಲಿ ಫೋಟೋದಲ್ಲಿ ಅಮಿತಾಭ್​ ಸೊಸೆ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್​ ಹಾಗೂ ಮೊಮ್ಮಗಳು ಆರಾಧ್ಯ ಬಚ್ಚನ್​​ ಮಿಸ್ಸಿಂಗ್​​ ಆಗಿರುವುದು.
A post shared by Manav Manglani (@manav.manglani)
ಸಮಾರಂಭದಲ್ಲಿ ಮಗಳು ಆರಾಧ್ಯ ಬಚ್ಚನ್ ಜತೆ ಐಶ್ವರ್ಯಾ ರೈ ಪ್ರತ್ಯೇಕವಾಗಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಈ ವಿಚಾರ ಸದ್ಯ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಅಗಲಿಕೆಯ ವದಂತಿಗೆ ರೆಕ್ಕೆಪುಕ್ಕಗಳು ಬಂದಿವೆ. ಕಳೆದ ಹಲವು ದಿನಗಳಿಂದ ಐಶ್ವರ್ಯಾ ಮತ್ತು ಬಚ್ಚನ್ ಕುಟುಂಬದ ನಡುವೆ ಏನೋ ಸರಿಯಿಲ್ಲ ಎಂಬ ಮಾತುಗಳು ಆಗಾಗ್ಗೆ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಐಶ್ವರ್ಯಾ ಬಚ್ಚನ್ ಕುಟುಂಬದಿಂದ ಪ್ರತ್ಯೇಕವಾಗಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಚರ್ಚೆಯೂ ನಡೆದಿದೆ. ಇದೆಲ್ಲದರ ನಡುವೆ ಅನಂತ್​ ಅಂಬಾನಿ ಮತ್ತು ರಾಧಿಕ ಮರ್ಚೆಂಟ್​ ಮದುವೆ ಸಮಾರಂಭದಲ್ಲಿ ಐಶ್ವರ್ಯಾ ರೈ ಮಗಳು ಆರಾಧ್ಯ ಅವರೊಂದಿಗೆ ಭಾಗವಹಿಸಿದ್ದಾರೆ.
A post shared by Pallav Paliwal (@pallav_paliwal)
ಬಳಿಕ ತಮ್ಮ ಪತ್ನಿ ಮತ್ತು ಮಗಳ ಜತೆ ಅಭಿಷೇಕ್​​ ಬಚ್ಚನ್​​ ಸೇರ್ಪಡೆಯಾದರೂ ಬಚ್ಚನ್​ ಕುಟುಂಬದೊಂದಿಗಿನ ಸಂಬಂಧದ ಬಗ್ಗೆ ಜಾಲತಾಣದಲ್ಲಿ ಕಾಮೆಂಟ್​ಗಳು ಬರುತ್ತಿವೆ. ಐಶ್ವರ್ಯಾ ಯಾವಾಗಲೂ ತನ್ನ ಮಗಳೊಂದಿಗೆ ಏಕಾಂಗಿಯಾಗಿ ಇರುತ್ತಾಳೆ ಮತ್ತು ಕುಟುಂಬದ ಉಳಿದವರು ಏಕೆ ಒಟ್ಟಿಗೆ ಇರುತ್ತಾರೆ? ಅಭಿಷೇಕ್ ಕೂಡ ತನ್ನ ಹೆಂಡತಿಯೊಂದಿಗೆ ಇರಲು ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ತನ್ನ ಕುಟುಂಬದೊಂದಿಗೆ ಬರುತ್ತಾನೆ. ಕೌಟುಂಬಿಕ ಸಮಸ್ಯೆಗಳು ಏನೇ ಇರಲಿ, ಅಭಿಷೇಕ್​ ಅವರು ಐಶ್ವರ್ಯಾ ಮತ್ತು ಆರಾಧ್ಯ ಜತೆ ಇರಬೇಕು ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + eighteen =
Remember me
