ಮುಂಬೈ:ಕಾನ್​​ ಉತ್ಸವದ ಬಳಿಕ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.
ವಿಶ್ವದ ಅತ್ಯಂತ ಸುಂದರ ಮಹಿಳೆಯರಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಐಶ್ವರ್ಯಾ ರೈ ಇತ್ತೀಚೆಗೆ ಅವರು ಧರಿಸುವ ಬಟ್ಟೆಗಳು ಹಾಗೂ ಮೇಕಪ್​ ಬಗ್ಗೆ ಭಾರೀ ಟೀಕೆಗೆ ಗುರಿಯಾಗುತ್ತಿದ್ದಾರೆ.
ಗುರುವಾರ ನಡೆದ ಮುಂಬೈನ ವೈದ್ಯರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಐಶ್ವರ್ಯಾ ರೈ ಅವರು ಧರಿಸಿ ಬಂದಿದ್ದ ಬಟ್ಟೆಯಿಂದಾಗಿ ಮತ್ತೆ ಟ್ರೋಲ್​​ಗೊಳಗಾಗಿದ್ದಾರೆ. ಬಿಳಿ ಬಣ್ಣದ ಉದ್ದದ ಕುರ್ತಾ ಧರಿಸಿ, ಗಾಢ ಕೆಂಪು ಬಣ್ಣದ ಲಿಪ್​ಸ್ಟಿಕ್​​ ಹಚ್ಚಿ, ತಮ್ಮ ಕೂದಲನ್ನು ಎರಡೂ  ಕಡೆ ಇಳೆಬಿಟ್ಟಿದ್ದರು. ಆದರೆ ಇವರ ಈ ವೇಷ ಮಾತ್ರ ಅವರ ಅಭಿಮಾನಿಗಳಿಗೆ ಹಿಡಿಸಿಲ್ಲ.
A post shared by Viral Bhayani (@viralbhayani)

ಕೆಲವು ವರ್ಷಗಳಿಂದ ಒಂದೇ ಹೇರ್​​ಸ್ಟೈಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದೀರಾ, ಇದು ನಿಮಗೆ ಹಿಡಿಸುತ್ತಿಲ್ಲ, ದಯವಿಟ್ಟು ನಿಮ್ಮ ಹೇರ್​​ಸ್ಟೈಲ್ ಚೇಂಜ್​ ಮಾಡಿ, ಎಂದು ಒಬ್ಬ ಅಭಿಮಾನಿ ಮನವಿ ಮಾಡಿಕೊಂಡಿದ್ದು, ನಿಮ್ಮ ಬಟ್ಟೆ ವಿನ್ಯಾಸ ಕೂಡ ಚೆನ್ನಾಗಿಲ್ಲ, ದಯವಿಟ್ಟು ಅವರನ್ನೂ ಬದಲಾಯಿಸಿಬಿಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್​)
Sign in to your account
Please enter an answer in digits:three × 5 =
Remember me
