ಮುಂಬೈ:ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಬಚ್ಚನ್ ನಂದಾ ಅವರೊಂದಿಗೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಅಭಿಷೇಕ್ ಯಾರಿಗೆ ಹೆಚ್ಚು ಹೆದರುತ್ತಾರೆ ಎಂದು ಅವರು ಬಹಿರಂಗಪಡಿಸಿದರು. ಈ ಸುದ್ದಿ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಎಂಬ ಎರಡು ಹೆಸರುಗಳು ಕೆಲವು ಸಮಯದಿಂದ ಎಲ್ಲರ ಗಮನ ಸೆಳೆದಿವೆ. ಅಭಿಷೇಕ್ ಮತ್ತು ಐಶ್ವರ್ಯಾ ರೈ ಬೇರೆ ಆಗುತ್ತಿದ್ದಾರೆ. ವಿಚ್ಛೇದನ ಪಡೆಯಲಿದ್ದಾರೆಂದು ಪದೇ ಪದೇ ವರದಿಗಳು ಬಂದಿವೆ. ಆದರೆ, ದಂಪತಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜಯಾ ಬಚ್ಚನ್, ಅಮಿತಾಬ್ ಬಚ್ಚನ್, ಶ್ವೇತಾ ಬಚ್ಚನ್ ನಂದಾ ಅವರೊಂದಿಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಅಭಿಷೇಕ್ ಬಚ್ಚನ್ ಆಗಮಿಸಿದಾಗ , ಐಶ್ವರ್ಯಾ ರೈ ಬಚ್ಚನ್ ಮಗಳು ಆರಾಧ್ಯ ಅವರೊಂದಿಗೆ ಪ್ರತ್ಯೇಕವಾಗಿ ಆಗಮಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇಬ್ಬರ ನಡುವಿನ ಭಿನ್ನಾಭಿಪ್ರಾಯದ ವದಂತಿಗಳು ತೀವ್ರಗೊಂಡಂತೆ, ಮದುವೆಯ ಕುರಿತು ಅವರ ಸಾಕಷ್ಟು ಹಳೆಯ ವೀಡಿಯೊಗಳು ಮತ್ತು ಸಂದರ್ಶನಗಳು ಸೋಶಿಯಲ್​​ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡ ಹಳೆ ವಿಡಿಯೋಗಳು ವೈರಲ್​​ ಆಗುತ್ತಿವೆ.
ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಕಾಫಿ ವಿತ್ ಕರಣ್‌ಗೆ ಬಂದಿದ್ದರು ಈ ಹಳೆಯ ವೀಡಿಯೋದಲ್ಲಿ. ಅಭಿಷೇಕ್ ಅವರ ಕುಟುಂಬದ ಸದಸ್ಯರೊಂದಿಗೆ ಇರುವ ಸಂಬಂಧದ ಕುರಿತಾಗಿ ಮುಕ್ತವಾಗಿ ಮಾತನಾಡಿದ್ದಾರೆ.

A post shared by Round to Roast🍠🍠 (@round_to_roast_786)

ತಾಯಿ ಜಯಾ ಬಚ್ಚನ್ ಅಥವಾ ಪತ್ನಿ ಐಶ್ವರ್ಯಾ ರೈ ಬಚ್ಚನ್ ಯಾರಿಗೆ ಹೆಚ್ಚು ಹೆದರುತ್ತಾರೆ ಎಂದು ನಟನನ್ನು ಕೇಳಲಾಯಿತು . ಇದಕ್ಕೆ ಅಮ್ಮ ಜಯಾ ಬಚ್ಚನ್ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ. ಆದರೆ, ಶ್ವೇತಾ ಬಚ್ಚನ್ ನಂದಾ ಅವರು ತಮ್ಮ ಪತ್ನಿ ಐಶ್ವರ್ಯಾ ಬಗ್ಗೆ ಹೆಚ್ಚು ಭಯಪಡುತ್ತಾರೆ ಎಂದು ಹೇಳಿದ್ದಾರೆ.
ವೀಡಿಯೊ ಕ್ಲಿಪ್‌ನಲ್ಲಿ ಅಭಿಷೇಕ್​​ ಮಾತನಾಡಿ, ನನ್ನ ತಾಯಿಯನ್ನು ಪ್ರೀತಿಸುವ, ದ್ವೇಷಿಸುವ ಮತ್ತು ಸಹಿಸಿಕೊಳ್ಳುವ ವಿಷಯಗಳ ಬಗ್ಗೆಯೂ ಹೇಳುವುದಾದರೆ ‘ಅವಳು ನನ್ನ ತಾಯಿ, ಅದು ನಾನು ಪ್ರೀತಿಸುವ ಬಂಧ ಎಂದಿದ್ದಾರೆ. ಕರಣ್ ಜೋಹರ್ ಅವರು ಅಭಿಷೇಕ್ ಬಚ್ಚನ್ ಅವರನ್ನು ಐಶ್ವರ್ಯಾ ರೈ ಬಚ್ಚನ್ ಅವರೊಂದಿಗಿನ ಸಂಬಂಧದ ಬಗ್ಗೆ ಏನಾದರೂ ಬದಲಾಯಿಸಲು ಬಯಸುತ್ತೀರಾ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್, ತಾನು ಬಯಸಿದಂತೆಯೇ ಬದಲಾಗಲು ಹೆಚ್ಚು ಇಷ್ಟಪಡುವುದಿಲ್ಲ ಎಂದು ಹೇಳಿದರು.
ಅಭಿಷೇಕ್ ತನ್ನ ತಾಯಿಯ ಬಗ್ಗೆ ಮಾತನಾಡುವ ಮೊದಲು ಎರಡು ಬಾರಿ ಯೋಚಿಸುವುದಿಲ್ಲ ಆದರೆ ಅವನು ನಿಜವಾಗಿಯೂ ತನ್ನ ಹೆಂಡತಿಯ ಬಗ್ಗೆ ಮಾತನಾಡುವ ಮೊದಲು ಯೋಚಿಸುತ್ತಾನೆ ಎಂದು ಶ್ವೇತಾ ಬಚ್ಚನ್ ಹೇಳಿದರು.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಕೆಲವು ವರ್ಷಗಳ ಡೇಟಿಂಗ್ ನಂತರ 2007 ರಲ್ಲಿ ವಿವಾಹವಾದರು. ನಂತರ ಅವರು 2011 ರಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದರು. ಇದೀಗ ಈ ಜೋಡಿ ಬೇರೆಬೇರೆಯಾಗಿದ್ದಾರೆ ಎನ್ನುವ ಸುದ್ದಿ ಇದೆ. ಆದರೆಎ ಈ ಕುರಿತಾಗಿ ದಂಪತಿ ಎಲ್ಲೂ ಮಾತನಾಡಿಲ್ಲ. ಆದರೆ ಈ ಕುರಿತಾದ ಸುದ್ದಿ ಸೋಶಿಯಲ್​​ ಮೀಡಿಯಾದೆಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:seventeen − 16 =
Remember me
