ಮುಂಬೈ:ಐಶ್ವರ್ಯಾ ರೈ ಕೇವಲ ನಟನೆ ಮತ್ತು ನೃತ್ಯದಲ್ಲಿ ಮಾತ್ರವಲ್ಲದೆ ಗಾಯನದಲ್ಲೂ ಪರಿಣತಿ ಹೊಂದಿದ್ದಾರೆ. ಆಕೆ ಹಾಡುತ್ತಾ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಇದು ಟ್ರೈಲರ್ ಅಷ್ಟೇ.. ಜಿಡಿಪಿ ಬೆಳವಣಿಗೆ ಬಗ್ಗೆ ಮೋದಿಯವರ ಕುತೂಹಲಕಾರಿ ಪ್ರತಿಕ್ರಿಯೆ!
ಬಾಲಿವುಡ್​ನಲ್ಲಿ ಇಲ್ಲಿಯವರೆಗೆ ಪರಿಣಿತಿ ಚೋಪ್ರಾ, ಶ್ರದ್ಧಾ ಕಪೂರ್ ಮತ್ತು ಆಲಿಯಾ ಭಟ್ ಅವರಂತಹ ನಟಿಯರು ಹಾಡಿರುವುದು ತಿಳಿದ ಸಂಗತಿಯೇ. ಆದರೆ ಈಗ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಗಾಯನ ಪ್ರತಿಭೆಯನ್ನು ವೈರಲ್​ ಆಗಿರುವ ವೀಡಿಯೋದಲ್ಲಿ ನೋಡಬಹುದಾಗಿದೆ.
ವೈರಲ್​ನ ಆಗುತ್ತಿರುವ ವೀಡಿಯೋ ‘ಗುಜಾರಿಶ್’ ಚಿತ್ರದ ಪ್ರಚಾರ ಕಾರ್ಯಕ್ರಮದ್ದಾಗಿದೆ. ಆ ಚಿತ್ರದ ‘ನೀಂದೇನ್ ಆಂಖೋನ್ ಸೆ ಉರಿ’ ಹಾಡನ್ನು ಐಶ್ವರ್ಯಾ ವೇದಿಕೆಯಲ್ಲಿ ಹಾಡಿ, ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆ ನೃತ್ಯ ಮಾಡುತ್ತಿದ್ದಾರೆ. ಈ ವೇಳೆ ಹೃತಿಕ್ ರೋಷನ್ ಕೂಡ ಇವರಿಬ್ಬರ ಜೊತೆ ಸೇರಿಕೊಂಡು ಮೂವರೂ ಒಟ್ಟಿಗೆ ಹಾಡಿದ್ದನ್ನು ವಿಡಿಯೋದಲ್ಲಿ ನೋಡಬಹುದು.

A post shared by Aishwarya🫅🤍 (@aishwaryamylight)

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕೆಯ ಹಾಡನ್ನು ಕೇಳಿದ ಜನರು ಸಾಕಷ್ಟು ಪ್ರಭಾವಿತರಾಗುತ್ತಿದ್ದಾರೆ.
ಐಶ್ವರ್ಯಾ ಕೊನೆಯದಾಗಿ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈಗ ಅವರ ಹೊಸ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪಿಒಕೆ ದೇಶದ ಅವಿಭಾಜ್ಯ ಅಂಗವಲ್ಲ..ಕೊನೆಗೂ ಒಪ್ಪಿಕೊಂಡ ಪಾಕ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 10 =
Remember me
