ಚೆನ್ನೈ:ಸೂಪರ್​​ ಸ್ಟಾರ್​​​ ರಜನಿಕಾಂತ್​ ಪುತ್ರಿ ಹಾಗೂ ನಿರ್ದೇಶಕಿ ಐಶ್ವರ್ಯಾ ರಜಿನಿಕಾಂತ್​ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಕಾರು ಚಾಲಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಾರು ಚಾಲಕ ವೆಂಕಟೇಶನ ಕುಮ್ಮಕ್ಕಿನಿಂದಲೇ ಮನೆಗೆಲಸದವಳಾದ ಈಶ್ವರಿ ಸುಮಾರು 100 ಪವನ್ ಚಿನ್ನಾಭರಣ, 30 ಗ್ರಾಂ ವಜ್ರಾಭರಣ ಮತ್ತು ನಾಲ್ಕು ಕೆಜಿ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾಳೆ. ಬಳಿಕ ಅವುಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಮನೆ ಖರೀದಿಗೆ ಬಳಸಿದ್ದಾಳೆ. ಅಲ್ಲದೆ, ಕೆಲವು ವಸ್ತುಗಳನ್ನು ಖರೀದಿಸಲು ಸಹ ಹಣ ಬಳಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:9 ತಿಂಗಳ ಕಾಲ ಬಾಣಂತಿಯೆಂದು ಸುಳ್ಳು ಹೇಳಿದಳು; ಸರ್ಕಾರದ ಪ್ರಯೋಜನ ಪಡೆಯಲು ಮಾಸ್ಟರ್​ ಪ್ಲ್ಯಾನ್​​!
ಕಳೆದ 18 ವರ್ಷಗಳಿಂದ ಸೇವಕಿಯಾಗಿ ಕೆಲಸ ಮಾಡುತ್ತಿದ್ದ ಈಶ್ವರಿ, ಐಶ್ವರ್ಯಾ ರಜನಿಕಾಂತ್ ಅವರ ಮನೆಯ ಬಗ್ಗೆ ಸಂಪೂರ್ಣ ತಿಳಿದುಕೊಂಡಿದ್ದರು ಮತ್ತು ಲಾಕರ್ ಅನ್ನು ಹಲವು ಬಾರಿ ತೆರೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕೀ ಇರುವ ಸ್ಥಳವನ್ನು ಈಶ್ವರಿ ಚೆನ್ನಾಗಿ ತಿಳಿದಿದ್ದಳು. ಆಕೆ ಒಂದೇ ಬಾರಿ ಕಳ್ಳತನ ಮಾಡಿರಲಿಲ್ಲ. ಅನೇಕ ಬಾರಿ ಸ್ವಲ್ಪ ಸ್ವಲ್ಪವಾಗಿ ಆಭರಣಗಳನ್ನು ಕದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸದಾಕೆಯಿಂದ ಕಳುವಾದ ಚರಾಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮನೆ ಆಸ್ತಿ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.
ಚೆನ್ನೈನ ಪೋಯಸ್ ಗಾರ್ಡನ್ ಮನೆಯ ಲಾಕರ್‌ನಿಂದ ಬೆಲೆಬಾಳುವ ಚಿನ್ನಾಭರಣಗಳು ನಾಪತ್ತೆಯಾಗಿವೆ ಎಂದು ನಟ ರಜನಿಕಾಂತ್ ಪುತ್ರಿ ಐಶ್ವರ್ಯಾ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.(ಏಜೆನ್ಸೀಸ್​)
ಸಿದ್ದರಾಮಯ್ಯ ಅವರ ಮೇಲೆ ಕುಮಾರಸ್ವಾಮಿಯವರ ಕಾಳಜಿ ಅಗತ್ಯವಿಲ್ಲ; ಡಿಕೆಶಿ

9 ತಿಂಗಳ ಕಾಲ ಬಾಣಂತಿಯೆಂದು ಸುಳ್ಳು ಹೇಳಿದಳು; ಸರ್ಕಾರದ ಪ್ರಯೋಜನ ಪಡೆಯಲು ಮಾಸ್ಟರ್​ ಪ್ಲ್ಯಾನ್​​!

ಸಲಿಂಗಕಾಮಿಗಳಿಗೆ ಮರಣದಂಡನೆ ನೀಡಬೇಕು ಎಂದು ಒತ್ತಾಯಿಸಿದ ಉಗಾಂಡಾ ದೇಶದ ಪ್ರಮುಖರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + one =
Remember me
