ನವದೆಹಲಿ:ರಷ್ಯಾದಿಂದ ಖರೀದಿಸಲು ಉದ್ದೇಶಿಸಿರುವ ಎಕೆ-203 ಅಸಾಲ್ಟ್ ರೈಫಲ್ಸ್ ’ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಡಿಯಲ್ಲಿ ಭಾರತಲ್ಲೂ ತಯಾರಾಗಲಿದೆ. ಇದರ ಘಟಕ ಉತ್ತರ ಪ್ರದೇಶದ ಅಮೇಠಿ ಬಳಿಯ ಕೊರ್ವಾದಲ್ಲಿ ತಲೆ ಎತ್ತುತ್ತಿದೆ. ಇದರಿಂದ ಹೊಸ ಉದ್ಯೋಗ ಸೃಷ್ಟಿ ಮತ್ತು ಬಿಡಿ ಭಾಗಗಳ ಪೂರೈಕೆಗಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಅವಲಂಬನೆ ಹೆಚ್ಚಲಿದೆ.
ಇಂಡೋ-ರಷ್ಯನ್ ರೈಫಲ್ಸ್ ಪ್ರೖೆವೇಟ್ ಲಿಮಿಟೆಡ್ (ಐಆರ್​ಆರ್​ಪಿಎಲ್) ಈ ರೈಫಲ್ಸ್ ಗಳನ್ನು ತಯಾರಿಸಲಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಡಿ. 6ಕ್ಕೆ ದೆಹಲಿಗೆ ಭೇಟಿ ನೀಡುವ ವೇಳೆ ಒಪ್ಪಂದ ಏರ್ಪಡಲಿದೆ. 5,000 ಕೋಟಿ ರೂಪಾಯಿ ಮೌಲ್ಯದ 7.50 ಲಕ್ಷ ಎಕೆ-203ರೈಫಲ್​ಗಳನ್ನು ಭಾರತ ಖರೀದಿಸುತ್ತಿದ್ದು, 7 ಲಕ್ಷರೈಫಲ್​ಗಳನ್ನು ರಷ್ಯಾ ನೇರವಾಗಿ ಪೂರೈಕೆ ಮಾಡಲಿದೆ. ಉಳಿದ 50,000 ರೈಫಲ್​ಗಳನ್ನು ಅಮೇಠಿ ಕೊರ್ವಾ ಘಟಕದಲ್ಲಿ ತಯಾರಿಸಲಾಗುತ್ತದೆ. ಫ್ಯಾಕ್ಟರಿ ಆರಂಭವಾದ 32 ತಿಂಗಳಲ್ಲಿ ಇವು ಬಳಕೆಗೆ ದೊರೆಯಲಿವೆ.
ರೈಫಲ್ಸ್ ವಿಶೇಷ:ಎಕೆ 203 ಅಸಾಲ್ಟ್ ರೈಫಲ್ಸ್ ಎಕೆ-47 ರೈಫಲ್ಸ್​ನ ಸುಧಾರಿತ ರೂಪಾವಾಗಿದ್ದು, ಹೆಚ್ಚು ದೊಡ್ಡದಾಗಿದೆ. 7.62 ಎಂಎಂ ಸುತ್ತು ಗುಂಡನ್ನು ಹಾರಿಸುವ ಸಾಮರ್ಥ್ಯ ಹೊಂದಿದೆ. ಇದೇ ಶ್ರೇಣಿಯ ಇತರ ರೈಫಲ್ಸ್​ಗಳು 5.56 ಎಂಎಂ ಸುತ್ತು ಗುಂಡಗಳ ಸಾಮರ್ಥ್ಯದಾಗಿವೆ. 300 ಮೀಟರ್​ಗೂ ಹೆಚ್ಚು ದೂರದವರೆಗೆ ಈ ರೈಫಲ್​ನಿಂದ ಗುಂಡು ಸಿಡಿಯಲಿದ್ದು, ಗುರಿ ದೃಷ್ಟಿಸಲು ವಿಶೇಷ ಕಿಂಡಿ, ರೈಫಲ್​ನ ಗ್ರಿಪ್ ಉತ್ತಮವಾಗಿದೆ. ವಿಶೇಷ ಕಾರ್ಯಾಚರಣೆಗೆ ಹೇಳಿ ಮಾಡಿಸಿದಂತೆ ಇದೆ. ಸೇನೆಯಲ್ಲಿ ಮೂರು ದಶಕದಿಂದ ಬಳಕೆಯಲ್ಲಿರುವ ಇನ್ಸಾಸ್ ರೈಫಲ್ಸ್​ಗಳ ಬದಲಿಗೆ ಇದನ್ನು ಖರೀದಿಸಲಾಗುತ್ತಿದೆ.
10 ಒಪ್ಪಂದಕ್ಕೆ ಭಾರತ- ರಷ್ಯಾ ಸಹಿ ನಿರೀಕ್ಷೆ:ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದಿನ ವಾರ ಭಾರತಕ್ಕೆ ನೀಡಲಿರುವ ಭೇಟಿ ವೇಳೆ ಉಭಯ ದೇಶಗಳು 10 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಸೋಮವಾರ ದೆಹಲಿಗೆ ಆಗಮಿಸಲಿರುವ ಪುಟಿನ್, ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಲಿದ್ದಾರೆ. ಮಾತುಕತೆಯ ನಂತರ, ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದ 10 ಒಡಂಬಡಿಕೆಗಳಿಗೆ ಸಹಿ ಹಾಕಲಾಗುತ್ತದೆ ಎಂದು ಅಧ್ಯಕ್ಷರ ಸಹಾಯಕ ಯೂರಿ ಉಷಕೋವ್ ತಿಳಿಸಿದ್ದಾರೆ. ಒಪ್ಪಂದಗಳ ವಿಚಾರದಲ್ಲಿ ಇನ್ನೂ ಚರ್ಚೆ ನಡೆಯುತ್ತಿದೆ. ಪುಟಿನ್ ಭೇಟಿ ವೇಳೆ ಅವುಗಳಿಗೆ ಸಹಿ ಹಾಕುವ ವಿಶ್ವಾಸವಿದೆ ಎಂದು ಉಷಕೋವ್ ಹೇಳಿದ್ದಾರೆ. ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪುಟಿನ್ ಸೋಮವಾರ ದೆಹಲಿಗೆ ಆಗಮಿಸಲಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಭದ್ರತಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಕಳೆದ 7 ವರ್ಷಗಳಲ್ಲಿ 38 ಸಾವಿರ ಕೋಟಿ ರೂ. ಮೊತ್ತದ ಭದ್ರತಾ ಉಪಕರಣಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಭವಿಷ್ಯದಲ್ಲಿ ಇದರ ಪ್ರಮಾಣ ಮತ್ತಷ್ಟು ಏರಿಕೆ ಕಾಣಲಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ಮಾಹಿತಿ ನೀಡಿದ್ದಾರೆ. ಭದ್ರತೆ ಹಾಗೂ ಏರೋಸ್ಪೇಸ್ ಉದ್ಯಮದಲ್ಲಿ ವಾರ್ಷಿಕ 85 ಸಾವಿರ ಕೋಟಿ ರೂ. ವಹಿವಾಟಿನ ನಿರೀಕ್ಷೆ ಇದೆ. ಇದರಲ್ಲಿ ಸುಮಾರು 18 ಸಾವಿರ ಕೋಟಿ ರೂ. ಖಾಸಗಿ ಕಂಪನಿಗಳ ಪಾಲಿದೆ. ಸಣ್ಣ ಹಾಗೂ ಅತಿ ಸಣ್ಣ ಉದ್ಯಮಗಳು (ಎಂಎಸ್​ಎಂಇ) ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಇದರಿಂದ ದೇಶ ಸದೃಢವಾಗುತ್ತದೆ. ಹೊಸ ತಂತ್ರಜ್ಞಾನ, ಹೊಸ ಉತ್ಪನ್ನಗಳನ್ನು ತಯಾರು ಮಾಡಬೇಕಿದೆ. ಕೇಂದ್ರ ಸರ್ಕಾರದ ಯತ್ನದ ಫಲವಾಗಿ 12 ಸಾವಿರ ಎಂಎಸ್​ಎಂಇಗಳು ಭದ್ರತಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಸ್ಟಾರ್ಟಪ್​ಗಳ ಆವಿಷ್ಕಾರ, ಸಂಶೋಧನೆ, ಅಭಿವೃದ್ಧಿಯಿಂದ ಭಾರತದಲ್ಲಿ ರಕ್ಷಣಾ ಕ್ಷೇತ್ರ ಹೆಚ್ಚು ಬೆಳವಣಿಗೆ ಕಾಣುತ್ತಿದೆ. ಇನ್ನು ಕೆಲ ವರ್ಷಗಳಲ್ಲಿ ಭಾರತ ಭದ್ರತಾ ಉಪಕರಣಗಳ ಪ್ರಮುಖ ರಫ್ತುದಾರ ರಾಷ್ಟ್ರವಾಗಲಿದೆ ಎಂದು ಸಚಿವ ರಾಜನಾಥ ಸಿಂಗ್ ಹೇಳಿದರು.
ಡಾ.ರಾಜ್​ ಸಿನಿಮಾ ಹೆಸರಲ್ಲೊಂದು ಕನಸು, ಪಾರ್ವತಮ್ಮನವರ ಜನ್ಮದಿನದಂದು ನನಸು: ಡಿ. 6ರಂದು ಅಪ್ಪು ರೋಮಾಂಚಕ ಅನುಭವದ ಝಲಕ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 9 =
Remember me
