ಮುಂಬೈ: ಮಂಬೈಯಿಂದ ವಾರಣಾಸಿಗೆ ಹೊರಟಿದ್ದ ಅಕಾಸ ಫ್ಲೈಟ್‌ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಬೆದರಿಕೆಯಿಂದಾಗಿ ತುರ್ತು ಭೂಸ್ಪರ್ಶವನ್ನು ಮಾಡಿದೆ. ವಾರಣಾಸಿ ಏರ್ ಟ್ರಾಫಿಕ್ ಕಂಟ್ರೋಲರ್‌ನಿಂದ ತುರ್ತು ಎಚ್ಚರಿಕೆಯ ಸಂದೇಶ ಸ್ವೀಕರಿಸಿದ್ದ QP 1498 ಫ್ಲೈಟ್‌ನ ಕ್ಯಾಪ್ಟನ್ ಅಗತ್ಯ ಕ್ರಮಗಳನ್ನು ಪೂರೈಸಿ, ವಿಮಾನವನ್ನು ವಾರಣಾಸಿಯಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ.
ಬೆಳಿಗ್ಗೆ 11:30 ರ ಸುಮಾರಿಗೆ ಸಾಮಾಜಕ ಜಾಲತಾಣ X ನಲ್ಲಿ ಬಾಂಬ್‌ ಬೆದರಿಕೆಯ ಕುರಿತಾಗಿ ಟ್ಟೀಟ್‌ ಬಂದಿರುವ ಹಿನ್ನೆಲೆ ವಿಮಾನವು ತುರ್ತು ಭೂ ಸ್ಪರ್ಶ ಮಾಡಬೇಕಾಯಿತು.ಪ್ರಕರಣದ ಕುರಿತಂತೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಈಗಾಗಲೇ ಪೊಲೀಸರು FIR ದಾಖಲಿಸಿದ್ದಾರೆ. ಆಕಾಶ ಏರ್​ಲೈನ್ಸ್​​ ನೀಡಿದ ಮಾಹಿತಿಯ ಪ್ರಕಾರ, ವಿಮಾನದಲ್ಲಿ 166 ಮಂದಿ, ಒಂದು ಮಗು ಮತ್ತು 6 ಮಂದಿ ಕ್ರೂ ಸದಸ್ಯರು ಪ್ರಯಾಣಿಸುತ್ತಿದ್ದರು.
ವಾರಣಅಸಿ ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್​​ ಗುಪ್ತಾ ವಿಮಾನ ರನ್​ವೇಗೆ ತಲುಪುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿಗೆ ವಿಮಾನದ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ವಾರಣಾಸಿಗೆ ತೆರಳಬೇಕಿದ್ದ ಆಕಾಶ ಏರ್ ಫ್ಲೈಟ್ QP 1498, ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ತುರ್ತು ಎಚ್ಚರಿಕೆಯನ್ನು ಸ್ವೀಕರಿಸಿದೆ. ಫ್ಲೈಟ್​​​​ನ ಕ್ಯಾಪ್ಟನ್ ಅಗತ್ಯವಿರುವ ಎಲ್ಲಾ ತುರ್ತು ವಿಧಾನಗಳನ್ನು ಅನುಸರಿಸಿದ್ದು, ವಿಮಾನವನ್ನ ತುರ್ತಾಗಿ ವಾರಣಾಸಿಯಲ್ಲಿ ಲ್ಯಾಂಡ್​​ ಮಾಡಿದ್ದಾರೆ ಎಂದು ಏರ್​​ಲೈನ್ಸ್​ ಸ್ಪಷ್ಟನೆ ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 15 =
Remember me
