ನವದೆಹಲಿ:ವಿಮಾನಯಾನ ಕ್ಷೇತ್ರಕ್ಕೆ ಹೊಸ ವಿಮಾನವೊಂದು ಸೇರ್ಪಡೆಯಾಗಿತ್ತಿದೆ. ಇದರ ವಿನ್ಯಾಸ ಭಾರೀ ಆಕರ್ಷಿಸುತ್ತಿದ್ದು, ಶೀಘ್ರದಲ್ಲೇ ಪ್ರಯಾಣಿಕರಿಗೆ ಸೇವೆ ಆರಂಭಿಸಲಿದೆ. ಹೂಡಿಕೆದಾರ ರಾಕೇಶ್​ ಝುಂಜುನ್​​ವಾಲಾ ಅವರ ಕನಸಿನ ಈ ವಿಮಾನದ ವಿನ್ಯಾಸ ಪೂರ್ಣಗೊಂಡಿದ್ದು, ಮೊದಲ ಚಿತ್ರವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಶೀಘ್ರದಲ್ಲೇ ಸೇವೆ ಆರಂಭಗೊಳಲ್ಲಿದ್ದು, ವಿಮಾನದ ಪೂರ್ಣ ಕೆಲಸ ಮುಗಿದಿದ್ದು, ಸಂಸ್ಥೆಗೆ ಕ್ಯೂಪಿ ಕೋಡ್​​​ ಸಿಕ್ಕಿದ್ದು, ಇನ್ನೇನು ಹಾರಾಟ ಆರಂಭಿಸಲಿದೆ. ಇನ್ನು ನಾವು ಕಾಯುವುದಿಲ್ಲ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್​ ಮಾಡಿದ್ದಾರೆ.
ಪ್ರತಿ ವಿಮಾನಯಾದ ಕ್ಯೂಪಿ ಕೋಡ್​​​ ಸಂಖ್ಯೆ ಪ್ರತ್ಯೇಕವಾಗಿರುತ್ತದೆ. ವಿಮಾನ ಹಾರಾಟ ಪ್ರಾರಂಭಕ್ಕೂ ಮುನ್ನ ನಾಗರಿಕ ವಿಮಾನಯಾನ ಸಚಿವಾಲಯದಿಂದ ಈ ಕೋಡನ್ನು ನೀಡಲಾಗುತ್ತದೆ. ಉದಾಹರಣೆಯಾಗಿ ಇಂಡಿಗೋ 6ಈ, ಗೋ ಫಸ್ಟ್​​ ಜೀ8 ಮತ್ತು ಏರ್​ ಇಂಡಿಯಾ ಎಐ ಕ್ಯೂಪಿ ಕೋಡ್​ ಹೊಂದಿದೆ. ಇದೀಗ ಹೊಸ ವಿಮಾನಯಾನಕ್ಕೂ ಕ್ಯೂಪಿ ಕೋಡ್​ ನೀಡಲಾಗಿದೆ.
Can’t keep calm! Say hi to our QP-pie! 😍#AvGeekpic.twitter.com/sT8YkxcDCV
ಸದ್ಯ ಹೊಸ ವಿನ್ಯಾಸದೊಂದಿಗೆ ಬುಲೆಟ್​ ಟ್ರೈನ್​ ಮಾದರಿಯಲ್ಲಿ ಕಾಣುವ ಸುಸಜ್ಜಿತ ವಿಮಾನ ಇನ್ನು ಕೆಲವೇ ದಿನಗಳಲ್ಲಿ ಹಾರಾಟ ನಡೆಸಲಿದ್ದು, ಈ ಹೊಸ ವಿಮಾನ ಯಾವ್ಯಾವ ದೇಶಕ್ಕೆ ಸಂಚರಿಸಲಿದೆ ಎಂಬುದನ್ನು ಶೀಘ್ರದಲ್ಲೇ ಸಂಸ್ಥೆ ಪಟ್ಟಿ ನೀಡಲಿದೆ.
2021 ನವಂಬರ್​​ 26ರಂದು 72 ಮ್ಯಾಕ್ಸ್​​ ವಿಮಾನ ತಯಾರಿಕೆಗೆ ಬೋಯಿಂಗ್​​ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದಂತೆ ವಿಮಾನ ತಯಾರಾಗಿದ್ದು, ಮೊದಲ ಜೂನ್​​ ತಿಂಗಳಲ್ಲಿ ಹಸ್ತಾಂತರ ಮಾಡಲಿದೆ. ಸದ್ಯ ಕೆಲವು ವಿಮಾನಗಳಷ್ಟೇ ಹಾರಾಟ ನಡೆಸಲಿದೆ ಎಂದು ಆಕಾಶ ಸಂಸ್ಥೆ ತಿಳಿಸಿದೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
