ನವದೆಹಲಿ:ಶ್ರೀರಾಮ ಜನ್ಮಭೂಮಿ ಹೋರಾಟದ ಮಾದರಿಯಲ್ಲೇ ವಾರಾಣಸಿ ಹಾಗೂ ಮಥುರಾದಲ್ಲಿರುವ ದೇವಸ್ಥಾನಗಳಿಗಾಗಿಯೂ ‘ಹಿಂದು ದೇಗುಲಗಳನ್ನು ಮುಕ್ತಗೊಳಿಸಿ’ ಅಭಿಯಾನ ಆರಂಭಿಸುವುದಾಗಿ ಅಖಿಲ ಭಾರತೀಯ ಅಖಾಡಾ ಪರಿಷದ್​ ಘೋಷಿಸಿದೆ.
ಪ್ರಯಾಗ್​ರಾಜ್​ನಲ್ಲಿ ಏರ್ಪಾಡಾಗಿದ್ದ 13 ಧಾರ್ಮಿಕ ಅಖಾಡಾಗಳ ಮುಖ್ಯಸ್ಥರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅಖಾಡಾ ಪರಿಷದ್​ನ ಅಧ್ಯಕ್ಷ ಮಹಾಂತ್​ ನರೇಂದ್ರ ಗಿರಿ ಇದರ ಅಧ್ಯಕ್ಷತೆ ವಹಿಸಿದ್ದರು. ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ಮಂದಿರ, ಮಥುರಾದ ಕೃಷ್ಣ ಜನ್ಮಭೂಮಿಯನ್ನು ಮುಕ್ತಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ನಿರ್ಣಯ ಕೈಗೊಳ್ಳಲಾಗಿದೆ.
ಇದನ್ನೂ ಓದಿ;ಸಾರ್ವತ್ರಿಕ ಬಳಕೆಗೆ ಸಿಗಲಿದೆ ರಷ್ಯಾ ಲಸಿಕೆ; ಸ್ಪುಟ್ನಿಕ್​-ವಿಗೆ ಸಿಕ್ತು ಆರೋಗ್ಯ ಇಲಾಖೆ ಸಮ್ಮತಿ
ಮೊಘಲರ ದಾಳಿಯಲ್ಲಿ ನಮ್ಮ ದೇಗುಲಗಳನ್ನು ಧ್ವಂಸಗೊಳಿಸಿ ಮಸೀದಿ ಹಾಗೂ ಸಮಾಧಿಗಳನ್ನು ಕಟ್ಟಲಾಗಿದೆ. ಸಂತರು ಅಯೋಧ್ಯೆ ರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದೇರೀತಿ ವಾರಾಣಸಿ ಹಾಗೂ ಮಥುರಾದ ದೇಗುಲಗಳಿಗಾಗಿ ಹೋರಾಟ ನಡೆಸಲಾಗುವುದು. ದೇವಾಲಯದ ಧ್ವಂಸದ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಮಹಾಂತ್​ ನರೇಂದ್ರ ಗಿರಿ ತಿಳಿಸಿದ್ದಾರೆ. ದೇಗುಲಗಳಿಗಾಗಿ ಹಿಂದುಪರ ಸಂಘಟನೆಗಳಾದ ವಿಶ್ವ ಹಿಂದು ಪರಿಷದ್​ ಹಾಗೂ ಆರ್​ಎಸ್​ಎಸ್​ ನಡೆಸುವ ಕಾನೂನು ಹೋರಾಟಕ್ಕೂ ಅಖಾಡಾ ಪರಿಷದ್​ ಬೆಂಬಲ ನೀಡಲಿದೆ ಎಂದು ಅವರು ಹೇಳಿದ್ದಾರೆ.
ವಾರಾಣಸಿಯ ಗ್ಯಾನವ್ಯಾಪಿ ಮಸೀದಿಯ ಕೆಳಗೆ ಅಗೆತ ನಡೆಸಿದಾಗ ಅಲ್ಲೊಂದು ದೇಗುಲವಿತ್ತು ಎಂಬುದಕ್ಕೆ ಅವಶೇಷಗಳು ಪತ್ತೆಯಾಗಿವೆ. ಅಂತೆಯೇ, ಮಥುರಾದಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಮಹಾಂತ್​ ನರೇಂದ್ರ ಗಿರಿ ತಿಳಿಸಿದ್ದಾರೆ. ಮುಸ್ಲಿಮರೇ ದೇಗುಲದ ಜಾಗವನ್ನು ಬಿಟ್ಟು ಕೊಟ್ಟು ಆದರ್ಶವನ್ನು ಮರೆಯಬೇಕು. ಈ ನಿಟ್ಟಿನಲ್ಲಿ ಅವರ ಮನವೊಲಿಸುವ ಕೆಲಸವನ್ನೂ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 4 =
Remember me
