ಲಖನೌ:ಅಯೋಧ್ಯೆಗೆ ಹೊರಗಿನವರು ಬಂದು ಲಾಭಗಳಿಸುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಜಮೀನುಗಳನ್ನು ಖರೀದಿಸಿ ದ್ದಾರೆ. ಇದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆಲ್ಲ ಬಿಜೆಪಿ ಮತ್ತು ರಾಜ್ಯ ಸರ್ಕಾರ ಕಾರಣ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಇಡಿ ನನ್ನನ್ನು ಸುಳ್ಳು ಕಪೋಲಕಲ್ಪಿತ ಕಥೆಯಲ್ಲಿ ಸಿಲುಕಿಸಿದೆ: ಕೇಜ್ರಿವಾಲ್
ಬಿಜೆಪಿಯ ತಪ್ಪುಗಳಿಂದ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರವನ್ನು ಆ ಪಕ್ಷ ಕಳೆದುಕೊಂಡಿದೆ. ಅಲ್ಲಿ ಎಸ್‌ಪಿ ಅಭ್ಯರ್ಥಿ ಗೆದ್ದ ನಂತರ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ. ಅಯೋಧ್ಯೆ ಭೂ ವ್ಯವಹಾರಗಳು ಒಂದೊಂದೇ ಬಯಲಾಗುತ್ತಿವೆ, ಬಿಜೆಪಿ ಆಡಳಿತದಲ್ಲಿ ಲಾಭ ಗಳಿಸಲು ಅಯೋಧ್ಯೆಯಲ್ಲಿ ಹೊರಗಿನವರು ಭೂಮಿ ಖರೀದಿಸಿದ್ದಾರೆ ಎಂಬ ಸತ್ಯ ಬೆಳಕಿಗೆ ಬರುತ್ತಿದೆ. ದೊಡ್ಡ ಪ್ರಮಾಣದಲ್ಲಿ ಭೂ ಒತ್ತುವರಿ ನಡೆದಿದೆ ಎಂದು ಆರೋಪಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 7 ವರ್ಷಗಳಿಂದ ಬಿಜೆಪಿ ಸರಕಾರ ಅಯೋಧ್ಯೆಯಲ್ಲಿ ಭೂಮಿ ದರವನ್ನು ಹೆಚ್ಚಿಸದೇ ಇರುವುದರ ಹಿಂದೆ ಆರ್ಥಿಕ ಷಡ್ಯಂತ್ರ ಅಡಗಿದೆ. ಇದರಿಂದ ಕೋಟ್ಯಂತರ ರೂ.ಗಳ ಭೂ ಹಗರಣಗಳು ನಡೆದಿದ್ದು, ಇಲ್ಲಿನ ಜಮೀನುಗಳನ್ನು ಖರೀದಿಸಿರುವುದು ಭೂಮಾಫಿಯಾವೇ ಹೊರತು ಸ್ಥಳೀಯರು, ಜನಸಾಮಾನ್ಯರಲ್ಲ ಎಂದರು.
ಅಯೋಧ್ಯೆ-ಫೈಜಾಬಾದ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಭೂಮಿ ಖರೀದಿ ಮತ್ತು ಮಾರಾಟದಿಂದ ಯಾವುದೇ ಪ್ರಯೋಜನವಿಲ್ಲ. ಅಯೋಧ್ಯೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವ ಅಕ್ರಮಗಳು ಮತ್ತು ಭೂ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದರು.
ರಾಮಮಂದಿರ ನಿರ್ಮಾಣದಿಂದ ಸರ್ಕಾರ ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭ ಮಾಡಿದೆ. ಅಯೋಧ್ಯೆಯಲ್ಲಿ ಭೂಮಿಯ ಬೆಲೆ ವೇಗವಾಗಿ ಏರಿಕೆಯಾಗಿದೆ. 2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ, ರಾಮಮಂದಿರ ನಿರ್ಮಾಣಕ್ಕೆ ಹಾದಿ ಸುಗಮವಾಯಿತು ಎಂದು ಅವರು ಹೇಳಿದ.
ಗೊಂಡ ಮತ್ತು ಬಸ್ತಿ ಜಿಲ್ಲೆಗಳಲ್ಲಿನ ಭೂ ವ್ಯವಹಾರಗಳ ಸಂಖ್ಯೆ ಅಯೋಧ್ಯೆಯ ಸುತ್ತಮುತ್ತಲಿನ ಕನಿಷ್ಠ 25 ಹಳ್ಳಿಗಳು 30 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಜಮೀನುಗಳು ದೇವಸ್ಥಾನದಿಂದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುತ್ತವೆ ಮತ್ತು ಈ ಭೂ ವ್ಯವಹಾರಗಳಲ್ಲಿ ಹೆಚ್ಚಿನವು ರಾಜಕಾರಣಿಗಳ ಕುಟುಂಬ ಸದಸ್ಯರು ಅಥವಾ ಅವರಿಗೆ ಸಂಬಂಧಿಸಿದ ವ್ಯಕ್ತಿಗಳು ಮಾಡಿದ್ದಾರೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ತಮನ್ನಾ ಜೊತೆ ಲವ್​ ಹೇಗೆ ಪ್ರಾರಂಭವಾಯಿತು ಎಂಬುದನ್ನು ಬಿಚ್ಚಿಟ್ಟ ವಿಜಯ್ ವರ್ಮಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + seventeen =
Remember me
