ಲಖನೌ:ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರ ಮೂಲ ಹೆಸರು ಮತ್ತು ಮೂಲ ರಾಜ್ಯದ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಮಾತನಾಡಿದ್ದಾರೆ. ಯೋಗಿ ಬೇರೆ ರಾಜ್ಯದವರಾಗಿದ್ದು, ಅವರನ್ನು ಬಿಜೆಪಿ ರಾಜ್ಯದಲ್ಲಿ ಹೇರಿಕೆ ಮಾಡಿದೆ ಎಂದು ಅವರು ದೂರಿದ್ದಾರೆ.
ಶನಿವಾರದಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಯೋಗಿ ಆದಿತ್ಯಾನಾಥ ಅವರು ತಮ್ಮ ಮೂಲ ಪರಿಚಯವನ್ನು ಮಾಡಿಕೊಳ್ಳಬೇಕು. ಸಂತ ದೀಕ್ಷೆ ಪಡೆಯುವುದಕ್ಕೂ ಮೊದಲು ಅವರ ಹೆಸರು ಅಜಯ್​ ಬಿಶ್ತ್​ ಎಂದಾಗಿತ್ತು. ಅವರ ಮೂಲ ರಾಜ್ಯ ಉತ್ತರಾಖಂಡ. ಆದರೆ ಅಲ್ಲಿಂದ ಇಲ್ಲಿಗೆ ಬಂದು ಇಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅವರಿಗೆ ಉತ್ತರ ಪ್ರದೇಶದ ಜನರ ಬಗ್ಗೆ ಏನೂ ಗೊತ್ತಿಲ್ಲ. ನಮ್ಮ ಪಕ್ಷ ಆಡಳಿತದಲ್ಲಿದ್ದಾಗ ಮಾಡಿದ ಕೆಲಸಗಳನ್ನೇ ಇಟ್ಟುಕೊಂಡು ಅದರಿಂದಲೇ ಹೆಸರು ಪಡೆದುಕೊಳ್ಳುತ್ತಿದ್ದಾರೆ” ಎಂದು ದೂರಿದ್ದಾರೆ.
ಮುಖ್ಯಮಂತ್ರಿಗಳು ವಿಧಾನಸಭೆಯಲ್ಲೇ ಸುಳ್ಳು ಹೇಳುತ್ತಾರೆ. ಈ ರೀತಿಯ ನಾಯಕನಿಗೆ ಮುಂದೆ ಜೈಲು ಶಿಕ್ಷೆಯಾಗಲಿದೆ. ಹಾಗೆಯೇ ಬಿಜೆಪಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸುವ ರೈತರನ್ನು ಮತ್ತು ಅವರ ಕುಟುಂಬರನ್ನು ಅವಮಾನಿಸಲಾಗುತ್ತಿದೆ. ಅದಕ್ಕೂ ಕೂಡ ಬಿಜೆಪಿ ನಾಯಕರು ತಕ್ಕ ಶಿಕ್ಷೆ ಅನುಭವಿಸಲಿದ್ದಾರೆ ಎಂದು ಅಖಿಲೇಶ್​ ಹೇಳಿದ್ದಾರೆ. (ಏಜೆನ್ಸೀಸ್​)
ಬದಲಾಯಿತು ಮತ್ತೊಂದು ನಗರದ ಹೆಸರು! ನರ್ಮದೆಯ ತಟದಲ್ಲಿ ‘ನರ್ಮದಾಪುರಂ’

VIDEO| ಸೇತುವೆಯಿಂದ ಬಸ್​ ಮೇಲೆ ಬಿದ್ದ ಕಬ್ಬಿಣ ತುಂಬಿದ ಟ್ರಕ್​: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − one =
Remember me
