ನವದೆಹಲಿ:ಅಮೆರಿಕನ್​​​ ಗಾಯಕ, ಗೀತರಚನೆಕಾರ, ಡಾನ್ಸರ್​ ಹಾಗೂ ಪಾಪ್​ ಲೋಕದ ಕಿಂಗ್​ ಎಂದೇ ಖ್ಯಾತಿಯಾಗಿದ್ದ ಮೈಕಲ್ ಜೋಸೆಫ್ ಜಾಕ್ಸನ್ ಅಲಿಯಾಸ್​ ಮೈಕಲ್​ ಜಾಕ್ಸನ್​ ಅವರು ಇನ್ನೂ ಸತ್ತಿಲ್ಲ ಬದುಕಿದ್ದಾರೆ ಎಂಬ ಸಂಗತಿ ಇದೀಗ ಜಗತ್ತಿನಾದ್ಯಂತ ಭಾರಿ ಸಂಚಲವನ್ನೇ ಸೃಷ್ಟಿ ಮಾಡಿದೆ.
ಅಯ್ಯೋ ಜಾಕ್ಸನ್​ ಸತ್ತು 15 ವರ್ಷಗಳೇ ಆಯಿತು ಬದುಕಿ ಬರಲು ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಿರಬಹುದು. ಆದರೆ, ಜಾಕ್ಸನ್​ ಇನ್ನೂ ಬದುಕಿದ್ದಾರೆ ಎಂಬುದನ್ನು ಅಮೆರಿಕನ್​ ಗಾಯಕ ಅಕೊನ್​ ಖಚಿತವಾಗಿ ಹೇಳಿದ್ದಾರೆ. ಜಾಕ್ಸನ್​ ಅವರು ಮರಳಿ ಬರಲು ರಹಸ್ಯವಾಗಿಯೇ ತಯಾರಿ ನಡೆಸುತ್ತಿದ್ದಾರೆ. ಭರ್ಜರಿಯಾಗಿ ರೀ ಎಂಟ್ರಿ ಕೊಡಲಿದ್ದಾರೆ ಎಂದು ಅಕೊನ್​ ವಾದಿಸಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಮೈಕಲ್ ಜಾಕ್ಸನ್ ಅವರ ಆರೋಗ್ಯ ಚೆನ್ನಾಗಿದೆ ಎಂದು ಅವರ ನಿಕಟವರ್ತಿಯೊಬ್ಬರು ಸಹ ಖಚಿತಪಡಿಸಿದ್ದಾರಂತೆ. ಇನ್ನೂ ನಿರ್ಮಾಪಕ ಹಾಗೂ ಜಾಕ್ಸನ್​ ಅವರ ಆಪ್ತ ಟೆಡ್ಡಿ ರಿಲೇ ಸಹ ಜಾಕ್ಸನ್​ ಜೀವಂತವಾಗಿರುವುದನ್ನು ಬಲವಾಗಿ ನಂಬಿದ್ದಾರೆ ಮತ್ತು ವಾಪಸ್​ ಬರಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಇಂದಿಗೂ ಅದೇ ನಂಬಿಕೆಯನ್ನು ಹೊಂದಿದ್ದಾರೆ. ಅಂದಹಾಗೆ ಸಿಕ್ಕಾಪಟ್ಟೆ ಹಿಟ್​ ಆದ ಡೇಂಜರಸ್​ ಆಲ್ಬಮ್,​ ರಿಲೇ ಮತ್ತು ಜಾಕ್ಸನ್​ ಸಹಯೋಗದಲ್ಲೇ ಮೂಡಿಬಂದಿತ್ತು.
ಈ ಬೆಳವಣಿಗೆಯ ನಡುವೆ ನಡುವೆ ಜಾಕ್ಸನ್​ ಸಾವಿನ ಪಿತೂರಿಗಳು ಕೂಡ ಮತ್ತೆ ಚರ್ಚೆಯಾಗುತ್ತಿದೆ. ಮೈಕಲ್​ ಜಾಕ್ಸನ್​ 2009ರ ಜೂನ್​ 25ರಂದು ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದರು. 2010ರ ನವೆಂಬರ್​ ತಿಂಗಳಲ್ಲಿ ಎಲ್ವಿಸ್ ಇನ್ನೂ ಜೀವಂತವಾಗಿದ್ದಾನೆ ಎಂದು ಜನರು ಭಾವಿಸಬಹುದಾದರೆ, ಮೈಕಲ್ ಸತ್ತ ಎಂದು ಏಕೆ ಪರಿಗಣಿಸಬಾರದು? ಎಂದು ರಿಲೇ ಮಾಡಿದ್ದರು. ಏಕೆಂದರೆ, ಆ ಸಮಯದಲ್ಲಿ ಜಾಕ್ಸನ್​ ಸಾವನ್ನು ಸಾಕಷ್ಟು ಮಂದಿ ನಂಬಿರಲಿಲ್ಲ. ಅನಾರೋಗ್ಯದಿಂದ ಜಾಕ್ಸನ್​ ರಹಸ್ಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ಹೀಗಾಗಿ ಕೆಲವರು ಜಾಕ್ಸನ್​ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ರಿಲೇ ಹಾಗೂ ಅಕೊನ್​ ಇಬ್ಬರು ಸ್ನೇಹಿತರೂ ಹೌದು. ನಾವಿಬ್ಬರೂ ಒಂದೇ ರೀತಿಯ ನಂಬಿಕೆಯನ್ನು ಹಂಚಿಕೊಂಡಿದ್ದೇವೆ ಎಂದು ರಿಲೇ ತಿಳಿಸಿದ್ದಾರೆ. ಇನ್ನು ಮೈಕಲ್ ಜಾಕ್ಸನ್ ಅವರ ಐಕಾನಿಕ್ ಆಲ್ಬಂ ಥ್ರಿಲ್ಲರ್‌ನ 25ನೇ ವಾರ್ಷಿಕೋತ್ಸವದ ಆವೃತ್ತಿಗಾಗಿ, 45 ವರ್ಷದ ಅಕೊನ್ ವಾನ್ನಾ ಬಿ ಸ್ಟಾರ್ಟಿನ್ ಸಮ್ಥಿನ್‌ನ ರೀಮಿಕ್ಸ್ ಅನ್ನು ರಚಿಸುವ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ.
ಈ ಹಿಂದೆ 2017ರಲ್ಲಿ ಜಾಕ್ಸನ್ ಅವರ ಸ್ಟೈಲಿಸ್ಟ್ ಮತ್ತು ಕೇಶ ವಿನ್ಯಾಸಕಿಯಾಗಿದ್ದ ಸ್ಟೀವ್ ಎರ್ಹಾರ್ಡ್ ಅವರು ಜಾಕ್ಸನ್​ ಇನ್ನೂ ಬದುಕಿದ್ದಾರೆ ಎಂದು ನಂಬಿಕೆಯನ್ನು ಉಳಿಸಿಕೊಂಡಿದ್ದ ಅಭಿಮಾನಿಗಳಿಗೆ ಫೇಸ್‌ಬುಕ್ ಸಂದೇಶವೊಂದನ್ನು ಬರೆದಿದ್ದರು. ನಿಮ್ಮೊಂದಿಗೆ ಸಂವಹನ ನಡೆಸಲು ಮುಖ್ಯವಾದ ಸಂಗತಿಯೊಂದನ್ನು ಹೊಂದಿದ್ದರು. ಈಗಿನಿಂದ ಒಂದೆರಡು ತಿಂಗಳುಗಳು ಅಥವಾ ವರ್ಷದ ಕೊನೆಯಲ್ಲಿ, ನೀವು ಕೆಲವು ಅತ್ಯುತ್ತಮ ಸುದ್ದಿಗಳನ್ನು ಕೇಳುತ್ತೀರಿ. ನಾನು ಹೇಳುವುದನ್ನು ನಂಬುವುದು ಕಷ್ಟ ಮತ್ತು ನನ್ನ ಕುಟುಂಬದಲ್ಲಿ ಯಾರಿಗೂ ಇದರ ಬಗ್ಗೆ ತಿಳಿದಿಲ್ಲ. ನಾನು ನಂಬಿದ್ದೇನೆ ಎನ್ನುವ ಮೂಲಕ ಜಾಕ್ಸನ್​ ಜೀವಂತವಾಗಿದ್ದಾರೆ ಎಂದು ಹೇಳಿದ್ದರು.
ಜಾಕ್ಸನ್​ ಸಾವು ಇಂದಿಗೂ ರಹಸ್ಯವಾಗಿಯೇ ಉಳಿದಿರುವುದರಿಂದ ಆಗಾಗ ಅವರ ಅಸ್ತಿತ್ವ ಬಗ್ಗೆ ಹೊಸ ಹೊಸ ಆಯಾಮಗಳು ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಆದರೆ, ಇಂದಿಗೂ ಜಾಕ್ಸನ್​ ಇಲ್ಲ ಎಂದೇ ಜನರು ನಂಬಿದ್ದಾರೆ.(ಏಜೆನ್ಸೀಸ್​)
ನಿಮ್ಮ ಫೋಟೋ ನನ್ನ ಆಟೋದಲ್ಲಿ ಏಕಿದೆ ಗೊತ್ತಾ? ಅನುಪಮಾ ವಿರುದ್ಧ ರೊಚ್ಚಿಗೆದ್ದ ಅಭಿಮಾನಿ!

ಸುಳ್ಳು ಹೇಳಿದರೆ ಹೀಗೆ ಆಗೋದು… ಪತಿಗೆ ಜೀವನಾಂಶ ನೀಡುವಂತೆ ಪತ್ನಿಗೆ ಕೋರ್ಟ್ ಆದೇಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + fourteen =
Remember me
