ನವದೆಹಲಿ:ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಈ ಕಷ್ಟದ ಸಮಯದಲ್ಲಿ ಸೋಂಕಿತರ ಸಹಾಯಕ್ಕೆ ಅನೇಕರು ಮುಂದಾಗಿದ್ದಾರೆ. ಅದರಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್​ ಕೂಡ ಸೋಂಕಿತರ ನೆರವಿಗೆ ಮುಂದೆ ಬಂದಿದ್ದಾರೆ.
ಬಿಜೆಪಿ ಸಂಸದ ಗೌತಮ್​ ಗಂಭೀರ್ ಅವರು ನಡೆಸುತ್ತಿರುವ ಗಂಭೀರ್​ ಫೌಂಡೇಷನ್​ಗೆ ನಟ ಅಕ್ಷಯ್​ ಕುಮಾರ್ 1 ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಆ ಹಣವನ್ನು ಸೋಂಕಿತರ ಆಹಾರ, ಆಕ್ಸಿಜನ್​ ಸೇರಿ ವಿವಿಧ ಬೇಡಿಕೆಗಳಿಗೆ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.
Every help in this gloom comes as a ray of hope. Thanks a lot@akshaykumarfor committing Rs 1 crore to#GGFfor food, meds and oxygen for the needy! God bless 🙏🏻#InThisTogether@ggf_india
— Gautam Gambhir (@GautamGambhir)April 24, 2021

ಅಕ್ಷಯ್ ಅವರು ಈ ರೀತಿ ಸಹಾಯ ಹಸ್ತ ಚಾಚಿರುವ ಬಗ್ಗೆ ಗೌತಮ್​ ಗಂಭೀರ್​ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದಾರೆ. ನೆರವು ನೀಡಲು ಮುಂದೆ ಬಂದಿದ್ದಕ್ಕಾಗಿ ಧನ್ಯವಾದಗಳು. ಕತ್ತಲೆಯಲ್ಲಿ ಮುಳುಗಿರುವಾಗ ಪ್ರತಿ ಸಹಾಯವೂ ಭರವಸೆಯ ಕಿರಣವಾಗುತ್ತದೆ. ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಟ್ವೀಟ್​ ಮಾಡಿದ್ದಾರೆ. ಅಂದ ಹಾಗೆ ಅಕ್ಷಯ್​ ಕುಮಾರ್ ಅವರು ಕಳೆದ ವರ್ಷ ಕೂಡ ಪಿಎಂ ಕೇರ್ಸ್ ಗೆ 25 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. (ಏಜೆನ್ಸೀಸ್)
ಏ.. ಲೈನ್​ ಬಿಟ್ಟು ಮುಂದೋಗ್ತೀಯಾ? ಜಿಲ್ಲಾಸ್ಪತ್ರೆಯಲ್ಲೇ ಜನರ ಮಾರಾಮಾರಿ

ಫ್ರೆಂಡ್ಸ್ ಜತೆ ಹೊರಗೆ ಸುತ್ತಾಡಿದನೆಂದು 9 ವರ್ಷದ ಮಗನನ್ನೇ ಕೊಂದ ಅಪ್ಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
