ಮುಂಬಯಿ:ಬಾಲಿವುಡ್​ ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುತ್ತದೆ. ಇದಕ್ಕೆ ಬಾಲಿವುಡ್​​ ನಟರೇನೂ ಕಮ್ಮಿ ಇಲ್ಲ. ಇದೀಗ ನಟ ಅಕ್ಷಯ್​​ ಕುಮಾರ್​​ ನಟಿಸಿದ ಜಾಹೀರಾತು ಕಾಂಟ್ರವರ್ಸಿ ಸೃಷ್ಟಿಸಿದೆ.
ಇದರಲ್ಲಿ ಅಕ್ಷಯ್​ ಕುಮಾರ್ ​​ರಸ್ತೆ ಸುರಕ್ಷತೆಯ ಕುರಿತಾದ ಜಾಹೀರಾತಿನಲ್ಲಿ ಕಪ್ಪುಹಣದ ಮೂಲಕ ವರದಕ್ಷಿಣೆಗೆ ಬೆಂಬಲ ನೀಡುವ ದೃಶ್ಯ ಕಂಡುಬರುತ್ತದೆ. ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಮತ್ತು ಟಿಎಂಸಿಯ ರಾಷ್ಟ್ರೀಯ ವಕ್ತಾರ ಸಾಕೇತ್​ ಗೋಖಲೆ ಈ ಜಾಹೀರಾತಿನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿ ಟೀಕಿಸಿದ್ದಾರೆ.
ಕೇಂದ್ರ ಸಚಿವ ನಿತಿನ್​​ ಗಡ್ಕರಿ ಆರು ಬ್ಯಾಗ್​ಗಳನ್ನು ಒಳಗೊಂಡಿರುವ ಟ್ರಾವೆಲಿಂಗ್​​ ಕಾರನ್ನು ಪ್ರಚಾರ ಮಾಡುವ ಭರದಲ್ಲಿ ಈ ಜಾಹೀರಾತಿನ ವಿಡಿಯೋ ತುಣುಕನ್ನು ತಮ್ಮ ಟ್ವೀಟರ್​​ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಇದರ ಕುರಿತು ಪ್ರಿಯಾಂಕ ಟ್ವಿಟ್​ ಮಾಡಿದ್ದರು. “ಇದು ನಿಜಕ್ಕೂ ಒಂದು ಸಮಸ್ಯಾತ್ಮಕ ಜಾಹೀರಾತು. ಈ ರೀತಿಯ ಕ್ರಿಯಾಶೀಲತೆಯನ್ನು ತರುವವರು ಯಾರು? ಸರ್ಕಾರವೇನಾದರೂ ಕಾರಿನ ಸುರಕ್ಷಿತೆಯ ಕುರಿತಾಗಿ ಜಾಹೀರಾತು ತರಲು ಹಣ ಕೊಡುತ್ತಿದೆಯಾ? ಅಥವಾ ಈ ರೀತಿ ದುಷ್ಟ ಮತ್ತು ಕ್ರೂರ ಪದ್ಧತಿಯಾದ ವರದಕ್ಷಿಣೆಯನ್ನು ಬೆಂಬಲಿಸಿ ಪ್ರಚಾರ ಮಾಡುತ್ತಿದೆಯಾ?” ಎಂದು ತಮ್ಮ ಟ್ವೀಟ್ ನಲ್ಲಿ ಪ್ರಶ್ನಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇದು ಈಗ ಭಾರೀ ಚರ್ಚೆಯ ವಿಷಯವಾಗಿದೆ.(ಏಜೆನ್ಸೀಸ್)
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಚೂರಿ ಇರಿದು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ; ಇಬ್ಬರ ಸ್ಥಿತಿ ಚಿಂತಾಜನಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 4 =
Remember me
