ಮುಂಬೈ:ಈಗಾಗಲೇ ಭಾರಿ ಕುತೂಹಲ ಸೃಷ್ಟಿಸಿರುವ, ಅದ್ದೂರಿಯಾಗಿ ನಿರ್ಮಾಣ ಆಗಿರುವ ಬಹುನಿರೀಕ್ಷಿತ ಸಿನಿಮಾ, ಅಕ್ಷಯ್​ ಕುಮಾರ್ ಅಭಿನಯದ ‘ಲಕ್ಷ್ಮೀ ಬಾಂಬ್​’ನ ಟೈಟಲ್ ಬದಲಾಗಿದೆ.
ರಾಘವ ಲಾರೆನ್ಸ್​ ನಿರ್ದೇಶನ, ಅಕ್ಷಯ್​ ಕುಮಾರ್ ಹಾಗೂ ಕಿಯಾರಾ ಆಡ್ವಾಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾ ಟೈಟಲ್​ ಕಾರಣಕ್ಕೇ ಈಗಾಗಲೇ ಒಂದಷ್ಟು ಸದ್ದು ಮಾಡಿತ್ತು. ಇದೀಗ ಅದೇ ಟೈಟಲ್​ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿ ಆಗಲಾರಂಭಿಸಿದೆ.
ಹೊಸ ಬದಲಾವಣೆಯೊಂದರಲ್ಲಿ ಸಿನಿಮಾದ ಪರಿಷ್ಕೃತ ಶೀರ್ಷಿಕೆ ಬಹಿರಂಗವಾಗಿದ್ದು, ಚಿತ್ರಕ್ಕೆ ‘ಲಕ್ಷ್ಮೀ ಬಾಂಬ್’ ಬದಲು ‘ಲಕ್ಷ್ಮೀ’ ಎಂದಷ್ಟೇ ಟೈಟಲ್​ ಇಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
‘ಲಕ್ಷ್ಮೀ ಬಾಂಬ್’ ಎಂದಿರುವುದರಿಂದ ಲಕ್ಷ್ಮೀ ದೇವರಿಗೆ ಅವಮಾನ ಮಾಡಿದಂತೆ, ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗುತ್ತದೆ ಎಂದು ಶ್ರೀ ರಜಪೂತ್ ಕರ್ಣಿ ಸೇನಾ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿತ್ತು. ಮಾತ್ರವಲ್ಲ ಈ ಸಂಬಂಧ ಲೀಗಲ್ ನೋಟಿಸ್ ಕೂಡ ರವಾನೆ ಮಾಡಿದ್ದರಿಂದ ಚಿತ್ರತಂಡ ಈ ಬದಲಾವಣೆ ಮಾಡಿಕೊಂಡಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
