ನವದೆಹಲಿ​​:ವರ್ಷಗಳ ಹಿಂದೆ ಅಮೆರಿಕದ ಮೇಲೆ ನಡೆದಿದ್ದ 9/11 ಉಗ್ರರ ದಾಳಿಯ ಮಾಸ್ಟರ್​ಮೈಂಡ್​ ಆದ ಅಲ್​ಖೈದಾ ಆತಂಕವಾದಿಗಳ ಸಂಘಟನೆಯು ಅಫ್ಘಾನಿಸ್ತಾನದ ‘ವಿಮುಕ್ತಿ’ಗಾಗಿ ತಾಲಿಬಾನ್​ಗೆ ಶುಭಾಶಯ ಕೋರಿದೆ. ಜೊತೆಯಲ್ಲೇ, ಭಾರತದ ಕಾಶ್ಮೀರವನ್ನೂ ‘ಇಸ್ಲಾಂನ ಶತೃಗಳ ಹಿಡಿತದಿಂದ ಮುಕ್ತಗೊಳಿಸಿ’ ಎಂದು ಕರೆ ನೀಡಿದೆ.
ತಾಲಿಬಾನ್​ ಆಕ್ರಮಿತ ಅಫ್ಘಾನಿಸ್ತಾನದಿಂದ ಅಮೆರಿಕದ ಸೇನಾ ಪಡೆಗಳು ಅಂತಿಮ ನಿರ್ಗಮನ ಮಾಡಿದ ನಂತರ, ಅಲ್​ಖೈದಾ ಈ ಹೇಳಿಕೆ ನೀಡಿದೆ. “ಇಸ್ಲಾಂನ ಶತೃಗಳ ಹಿಡಿತದಿಂದ ಲೆವಂತ್​, ಸೊಮಾಲಿಯ, ಯೆಮೆನ್​, ಕಾಶ್ಮೀರ ಮತ್ತು ಉಳಿದ ಇಸ್ಲಾಮೀಯ ಭೂಪ್ರದೇಶಗಳನ್ನು ಮುಕ್ತಗೊಳಿಸಿ. ಓಹ್​ ಅಲ್ಲಾ, ಜಗತ್ತಿನಾದ್ಯಂತದ ಮುಸಲ್ಮಾನ ಖೈದಿಗಳಿಗೆ ಸ್ವಾತಂತ್ರ್ಯ ಕರುಣಿಸು” ಎಂದು ಅಲ್​ಖೈದಾ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನೂ ಓದಿ:ಮನೆಯ ಬಳಿ ಆಡುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ!
ಆಗಸ್ಟ್​ 30 ರಂದು ಮಧ್ಯರಾತ್ರಿ ಅಮೆರಿಕದ ಸೈನಿಕರನ್ನು ಹೊತ್ತ ಸಿ-17 ಕಾರ್ಗೋ ಏರ್​ಕ್ರಾಫ್ಟ್​ ಕಾಬುಲ್​ನ ಹಮೀದ್​ ಕರ್ಜಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು. ತನ್ಮೂಲಕ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಯುದ್ಧಕ್ಕೆ ಜೋ ಬಿಡೆನ್ ನೇತೃತ್ವದ ಸರ್ಕಾರ ಅಂತ್ಯ ಹಾಡಿತು. ಇದಾದ ನಂತರ ಅಫ್ಘಾನಿಸ್ತಾನ ಪೂರ್ಣವಾಗಿ ಸ್ವತಂತ್ರವಾಗಿದೆ ಎಂದು ತಾಲಿಬಾನ್​ ಘೋಷಣೆ ಮಾಡಿದೆ.(ಏಜೆನ್ಸೀಸ್)
ಕಾಜಿರಂಗ ಉದ್ಯಾನ: ಪ್ರವಾಹಕ್ಕೆ ಸಿಲುಕಿದ್ದ ಪುಟ್ಟ ಘೇಂಡಾಮೃಗದ ರಕ್ಷಣೆ
https://www.vijayavani.net/women-be-cautious-about-breast-cancer-symptoms-tests-and-treatment-details-here/


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
