ಆಲಪ್ಪುಳ:ಮದುವೆಯ ನಂತರ ಕಳೆದ ಸೋಮವಾರ ಸ್ನೇಹ ಬಳಗ ಆಯೋಜಿಸಿದ್ದ ಸಂತೋಷ ಕೂಟದ ಭಾಗವಾಗಿ ಆಂಬ್ಯುಲೆನ್ಸ್​ನಲ್ಲಿ ಜಾಲಿ ರೈಡ್​ಗೆ ಹೋದ ನವದಂಪತಿಗೆ ಶಾಕ್​ ಒಂದು ಎದುರಾಗಿತ್ತು.
ಆಂಬ್ಯುಲೆನ್ಸ್​ನಲ್ಲಿ ತೆರಳಿದ ನವದಂಪತಿ ಕಯಮುಕಲಂ ಬಳಿಯಿರುವ ಕಟ್ಟನಂನಲ್ಲಿರುವ ವರನ ಮನೆಗೆ ತಲುಪಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಕೇರಳದ ಆರ್​ಟಿಒ ತಕ್ಷಣ ಪ್ರಕರಣ ದಾಖಲಿಸಿ, ವಾಹನವನ್ನು ಸೀಜ್​ ಮಾಡಿ, ಚಾಲಕನ ಲೈಸೆನ್ಸ್​ ಅನ್ನು ರದ್ದು ಮಾಡಿದೆ.
ವೃತ್ತಿಯಲ್ಲಿ ಆಂಬ್ಯುಲೆನ್ಸ್​ ಚಾಲಕನಾಗಿರುವ ವರ, ವಧುವನ್ನು ಕೂರಿಸಿಕೊಂಡು ಮದುವೆಯ ಬಳಿಕ ತನ್ನ ಮನೆಗೆ ಆಂಬ್ಯುಲೆನ್ಸ್​ ಮೂಲಕವೇ ತಲುಪಿದ. ಈ ವೇಳೆ ಆಂಬ್ಯುಲೆನ್ಸ್​ ಒಳಗೆ ವರನ ಸ್ನೇಹಿತರು ಹಾಡು ಹಾಕಿಕೊಂಡ ನೃತ್ಯ ಮಾಡಿದ್ದಲ್ಲದೆ, ಆಂಬ್ಯುಲೆನ್ಸ್​ ಸೈರನ್​ ಹಾಕಿಕೊಂಡು ಸಂಭ್ರಮಿಸಿದ್ದಾರೆ. ಇದಿಷ್ಟು ಕ್ಷಣವು ಮೊಬೈಲ್​ನಲ್ಲಿ ರೆಕಾರ್ಡ್​ ಆಗಿದ್ದು, ವಿಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡಿದೆ.
ಆಂಬ್ಯುಲೆನ್ಸ್​ ಚಾಲಕರ ಸಂಘ ದೂರು ನೀಡಿದ ಬಳಿಕ ಚಾಲಕ ಕಂ ವರನ ಮೇಲೆ ದೂರು ದಾಖಲಾಗಿದೆ. ತುರ್ತುಪರಿಸ್ಥಿತಿಗೆ ಬಳಸುವ ಆಂಬ್ಯುಲೆನ್ಸ್​ ಅನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ದೂರು ದಾಖಲಿಸಲಾಗಿದ್ದು, ಈಗಾಗಲೇ ವಾಹನ ಸೀಜ್​ ಮಾಡಿ, ಚಾಲಕನ ಲೈಸೆನ್ಸ್​ ರದ್ದು ಮಾಡಲಾಗಿದೆ.(ಏಜೆನ್ಸೀಸ್​)
VIDEO| ಬಲವಂತವಾಗಿ ಬಟ್ಟೆ ಸ್ವಚ್ಛ ಮಾಡಿಸಿದಲ್ಲದೆ, ವ್ಯಕ್ತಿಯ ಕಪಾಳಕ್ಕೆ ಬಾರಿಸಿದ ಮಹಿಳಾ ಪೊಲೀಸ್​!

ಪ್ರೀತಿಸಿ ಮದ್ವೆಯಾದ ಸಬ್​ ಇನ್ಸ್​ಪೆಕ್ಟರ್​ ಬಾಳಲ್ಲಿ ದುರಂತ: ಗಂಡನ ಹಿಂದೆಯೇ ಪತ್ನಿಯ ಜೀವನವು ಅಂತ್ಯ

ವೈವಾಹಿಕ ಜೀವನಕ್ಕೆ ಕಾಲಿಟ್ಟ ರತ್ನನ್​ ಬೆಡಗಿ: ಬೆಂಗಳೂರಿನಲ್ಲಿ ನಡೆಯಿತು ರೆಬಾ ಮೊನಿಕಾ ವಿವಾಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
