ಚೆನ್ನೈ:ನಕಲಿ ತಡೆ, ಬೆಲೆ, ಪರಿಸರ ಮತ್ತು ಶುಚಿತ್ವದ ದೃಷ್ಟಿಯಿಂದ ಟೆಟ್ರಾ ಪ್ಯಾಕ್‌ ಅಥವಾ ಪ್ಲಾಸ್ಟಿಕ್​ ಬಾಟಲಿಗಳಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ತಮಿಳುನಾಡು ಸರ್ಕಾರ ಚಿಂತನೆ ನಡೆಸಿದೆ.
ಇದನ್ನೂ ಓದಿ:ಆ ಮಾಜಿ ಸಿಎಂ ದೇಶದ್ರೋಹಿ..ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ವೈರಲ್​!
ಕಲ್ಲಕುರಿಚಿಯಲ್ಲಿ ನಕಲಿ ಮದ್ಯದಿಂದ ನಡೆದ ಅನಾಹುತದ ಬಳಿಕ ಎಚ್ಚೆತ್ತುಕೊಂಡಿರುವ ಸ್ಟಾಲಿನ್​ ಸರ್ಕಾರ, ಬಡವರ ಕೈಗೆಟಕುವಂತೆ 50ರೂ.ನಿಂದ 80ರೂ.ಒಳಗೆ 100ಎಂಎಲ್​ನ ಕ್ವಾರ್ಟರ್ ಪ್ಲಾಸ್ಟಿಕ್​ ಬಾಟಲಿಗಳು ಅಥವಾ ಟೆಟ್ರಾಪ್ಯಾಕ್​ಗಳಲ್ಲಿ ಮದ್ಯ ಮಾರಾಟ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಕಡಿಮೆ ಬೆಲೆಗೆ ನಕಲಿ ಮಾಡದಂತೆ ಮದ್ಯ ಒದಗಿಸುವುದರಿಂದ ಕೂಲಿ ಕಾರ್ಮಿಕರು ಅದನ್ನು ಖರೀದಿಸುತ್ತಾರೆ. ಇದು ಜನರ ಬೇಡಿಕೆಯೂ ಆಗಿದೆ ಎಂಬುದು ಸರ್ಕಾರದ ನಿಲುವಾಗಿದೆ ಎನ್ನಲಾಗುತ್ತಿದೆ.
ನೆರೆಯ ಕರ್ನಾಟಕ ಮತ್ತು ಪುದುಚೇರಿಯಲ್ಲಿ ಈಗಾಗಲೇ ಕಾಗದದ ಪೊಟ್ಟಣಗಳಲ್ಲಿ ಮದ್ಯಮಾರಾಟ ಮಾಡಲಾಗುತ್ತಿದೆ. ಇದರಿಂದ ನಕಲಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಅಧಿಕೃತ ತಂಡವನ್ನು ರಚಿಸಲಾಗಿದೆ ಎಂದು ಅಬಕಾರಿ ಸಚಿವ ಎಸ್ ಮುತ್ತುಸಾಮಿ ತಿಳಿಸಿದ್ದಾರೆ.
ಮರುಬಳಕೆ ಮಾಡಬಹುದಾದ ಮದ್ಯದ ಬಾಟಲಿಗಳ ಅಸಮರ್ಪಕ ಶುಚಿಗೊಳಿಸುವಿಕೆಯಿಂದ ಅನಾಹುತಗಳು ನಡೆಯಬಹುದು. ಆದರೆ ಟೆಟ್ರಾ ಪ್ಯಾಕ್‌ಗಳು ಅಂತಹ ಸಮಸ್ಯೆಗಳನ್ನು ನಿವಾರಿಸುತ್ತವೆ. ಕಲಬೆರಕೆ ಮಾಡಲಾಗುವುದಿಲ್ಲ. ನಿರ್ವಹಿಸಲು ಸುಲಭ ಎಂದು ಅವರು ಹೇಳಿದ್ದಾರೆ.
2001ರಲ್ಲಿ ತಮಿಳುನಾಡಿನಲ್ಲಿ ಮದ್ಯದ ಸಾವು ಹೆಚ್ಚಾದಾಗ 100 ಎಂಎಲ್ ಗೆ 15 ರೂ.ಗೆ ಅಗ್ಗದ ಮದ್ಯ ಮಾರಾಟ ಆರಂಭಿಸಿ, ಕೊನೆಗೆ ನಿಲ್ಲಿಸಲಾಗಿತ್ತು.
ಸ್ನೇಹಿತನ ಮಗಳ ಜೊತೆ ಸ್ಟಾರ್ ನಟ ರೊಮ್ಯಾನ್ಸ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eight =
Remember me
