ಸಾಮಾನ್ಯವಾಗಿಯಾವುದೇ ಮದುವೆ ಸಮಾರಂಭದಲ್ಲಿ ಮನರಂಜನೆ ಮತ್ತು ಔತಣಕೂಟಗಳು ಅದ್ಧೂರಿಯಾಗೇ ಇರುತ್ತವೆ. ಆದರೆ, ಬದಲಾಗುತ್ತಿರುವ ಕಾಲದಲ್ಲಿ ಕಾಲಕ್ಕೆ ತಕ್ಕಂತೆ ಮದುವೆಗಳಲ್ಲೂ ಹೊಸ ಸಂಪ್ರದಾಯಗಳು ಶುರುವಾಗಿವೆ. ಮನೆ ಮುಂದೆ ಹಾಕುವ ಚಪ್ಪರದಿಂದ ಹಿಡಿದು ಊಟದ ಐಟಂಗಳವರೆಗೂ ಇತರರಿಗಿಂತ ಸ್ವಲ್ಪ ಭಿನ್ನವಾಗಿರಲು ಪ್ರತಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ. ಮದುವೆ ವೇಳೆ ಊಟಕ್ಕೂ ಮುನ್ನ ತಿಂಡಿ, ತಂಪು ಪಾನೀಯಗಳನ್ನು ನೀಡುವುದನ್ನು ನೋಡುತ್ತೇವೆ. ಆದರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಅದರಲ್ಲೂ ಈ ವಿಡಿಯೋ ನೋಡಿದ ಬಳಿಕ ಪುರುಷರು ಹೊಟ್ಟೆ ಕಿಚ್ಚು ಪಡುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.
ಸದ್ಯ, ಮದುವೆ ಸಮಾರಂಭವೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಾಣಸಿಗುವ ಮಹಿಳೆಯರೂ ಸರತಿ ಸಾಲಿನಲ್ಲಿ ಕುಳಿತು ಊಟ ಮಾಡುತ್ತಿರುವುದು ದೃಶ್ಯ ಸಾಮಾನ್ಯವಾಗಿದೆ. ಆದರೆ, ವಿಶೇಷ ಸಂಗತಿ ಏನೆಂದರೆ, ಊಟಕ್ಕೆ ಕುಳಿತಿರುವ ಮಹಿಳಾ ಅತಿಥಿಗಳಿಗೂ ಆಲ್ಕೋಹಾಲ್​ ಬಡಿಸಲಾಗಿದೆ. ಪ್ಲಾಸ್ಟಿಕ್​ ಬಾಟಲ್​ಗೆ ಮದ್ಯವನ್ನು ಸುರಿಯಲಾಗಿದೆ. ಗಮನಾರ್ಹ ಸಂಗತಿ ಏನೆಂದರೆ, ಅಲ್ಲಿರುವುದು ಎಲ್ಲರೂ ಹೆಂಗಸರೇ ಮತ್ತು ಬಡಿಸುತ್ತಿರುವವರೂ ಹೆಂಗಸರೇ. ಇದೀಗ ಈ ವಿಡಿಯೋ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಆದರೆ, ಈ ಘಟನೆ ಎಲ್ಲಿ ನಡೆದಿದೆ ಎಂಬ ಮಾಹಿತಿ ಇಲ್ಲ. ಹಸ್ನ ಜರೂರಿ ಹೈ ಹೆಸರಿನ ಎಕ್ಸ್​ ಖಾತೆಯಲ್ಲಿ ಫೆ. 20ರಂದು ವಿಡಿಯೋ ಪೋಸ್ಟ್​ ಮಾಡಲಾಗಿದ್ದು, 60 ಸಾವಿರಕ್ಕೂ ಅಧಿಕ ವೀಕ್ಷಣೆ ಗಳಿಸಿದೆ.
Ek riwaj aisa bhipic.twitter.com/WSARswLf3x
— HasnaZarooriHai🇮🇳 (@HasnaZaruriHai)February 20, 2024

ಈ ವಿಡಿಯೋ ನೋಡಿದ ನೆಟಿಜನ್‌ಗಳು ವಿವಿಧ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮಹಿಳೆಯರು ತುಂಬಾ ಖುಷಿ ಪಡುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಹೇಳಿದರೆ, ಈ ವಿಡಿಯೋ ನೋಡಿದ ಮೇಲೆ ಪುರುಷರು ನಿಜಕ್ಕೂ ಅಸೂಯೆ ಪಟ್ಟುಕೊಳ್ಳುತ್ತಾರೆ ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ. ಮಹಿಳೆಯರು ಈಗ ಎಲ್ಲದರಲ್ಲೂ ಪುರುಷರೊಂದಿಗೆ ಸ್ಪರ್ಧೆಗೆ ಇಳಿದಿದ್ದಾರೆ ಎಂದು ನಾನಾ ರೀತಿಯಲ್ಲಿ ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ. ಈ ವಿಡಿಯೋ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಹಂಚಿಕೊಳ್ಳಬಹುದಾಗಿದೆ.(ಏಜೆನ್ಸೀಸ್​)
ಒಳ ಉಡುಪು ಧರಿಸದೆ ಶೂಟಿಂಗ್​ ಮಾಡಿದೆ; ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ನಟಿ

ರಶ್ಮಿಕಾ ನಟನೆಯ ಈ ಸಿನಿಮಾ ನೋಡದಂತೆ ಖುಷ್ಬೂಗೆ ಮಕ್ಕಳಿಂದಲೇ ಎಚ್ಚರಿಕೆ! ಯಾವುದು ಆ ಫಿಲ್ಮ್​?

ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
