ಮುಂಬೈ:ಬಾಲಿವುಡ್​ ನಟಿ ಆಲಿಯಾ ಭಟ್​​ ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ವಿಚಾರವಾಗಿಯು ಹೆಚ್ಚು ಸುದ್ದಿಯಾಗುತ್ತಲಿರುತ್ತಾರೆ. ಇದೀಗ ಮುಂಬೈನಲ್ಲಿ ದುಬಾರಿ ಬೆಲೆ ಬಾಳುವ ಬಂಗಲೆ ಖರೀದಿ ಮಾಡಿ ಸುದ್ದಿಯಾಗಿದ್ದಾರೆ.
ಮುಂಬೈನ ಬಾಂದ್ರಾ ಪ್ರದೇಶದ ಪಾಲಿ ಹಿಲ್‌ನ ಬೆಲೆಬಾಳುವ ಪ್ರದೇಶದಲ್ಲಿ ತನ್ನ ನಿರ್ಮಾಣ ಸಂಸ್ಥೆಯಾದ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ಮೂಲಕ ಇತ್ತೀಚೆಗೆ ಪ್ರೀಮಿಯಂ ವಸತಿ ಅಪಾರ್ಟ್ಮೆಂಟ್​​​ನ್ನು ನಟಿ ಆಲಿಯಾ ಭಟ್ ಮುಂಬೈನ ಪಾಲಿ ಹಿಲ್‌ನಲ್ಲಿ 37.80 ಕೋಟಿ ರೂಪಾಯಿಗೆ ಪ್ರೀಮಿಯಂ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ತನ್ನ ಸಹೋದರಿ ಶಾಹೀನ್ ಭಟ್‌ಗೆ ಎರಡು ಅಪಾರ್ಟ್‌ಮೆಂಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ನಗರದಲ್ಲಿ ಮತ್ತೆ ಪುಂಡರ ಅಟ್ಟಹಾಸ: ಮಹಿಳೆ ಮೇಲೆ ಹಲ್ಲೆ ಮಾಡಿ ಬೇಕರಿ ತಿನಿಸು ಬಿಸಾಡಿದ ಪುಡಿರೌಡಿಗಳುಬಾಂದ್ರಾ ವೆಸ್ಟ್‌ನಲ್ಲಿ ನಟಿ ಆಲಿಯಾ ಭಟ್ ಅವರು 2,497 ಚದರ ಅಡಿ ವಿಸ್ತೀರ್ಣದ ಹೊಸ ಪ್ರೀಮಿಯಂ ಅಪಾರ್ಟ್‌ಮೆಂಟ್ ಅನ್ನು 37.80 ಕೋಟಿ ರೂ.ಗೆ ಖರೀದಿಸಿದ್ದಾರೆ. ಏಪ್ರಿಲ್ 10 ರಂದು ಒಪ್ಪಂದವನ್ನು ನೋಂದಾಯಿಸಲಾಗಿದೆ ಮತ್ತು ನಟಿ 2.26 ಕೋಟಿ ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದಾರೆ.
ಆಲಿಯಾ ತನ್ನ ಸಹೋದರಿಗೆ ಮುಂಬೈನಲ್ಲಿ ಎರಡು ಅಪಾರ್ಟ್ಮೆಂಟ್ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಹೋದರಿ ಶಾಹೀನ್ ಭಟ್‌ಗೆ 7.68 ಕೋಟಿ ರೂ. ಬೆಲೆ ಬಾಳುವ ಮುಂಬೈನ ಜುಹುದಲ್ಲಿರುವ ಗಿಗಿ ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟು 2,086.75 ಚದರ ಅಡಿಯ ಎರಡು ಫ್ಲಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆಲಿಯಾ ಈಗಾಗಲೇ ಪತಿ ರಣಬೀರ್ ಅಪಾರ್ಟ್‌ಮೆಂಟ್​ನಲ್ಲಿ ಪ್ರಸ್ತುತ ತಮ್ಮ ಮಗಳು ರಾಹಾ ಅವರೊಂದಿಗೆ ವಾಸಿಸುತ್ತಿದ್ದಾರೆ.
ಪ್ರಿಯತಮೆ ಮೇಲೆ ಕುದಿಯುವ ಎಣ್ಣೆ ಸುರಿದ ಗೆಳೆಯ; ಪ್ರಿಯಕರನಿಗಾಗಿ ಹುಡುಕಾಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
