ಪಟನಾ:ಉಸಿರಾಡುವ ಮೂಗು ಇಲ್ಲದೇ ಬಾಯಿಯೊಳಗೆ ಎರಡು ಕಣ್ಣಿರುವ ಏಲಿಯನ್​ ರೀತಿಯ ಮೇಕೆ ಮರಿಯೊಂದು ಜನಿಸಿರುವ ಘಟನೆ ಬಿಹಾರದಲ್ಲಿ ನಡೆದಿದ್ದು, ಮರಿಯನ್ನು ದೇವರೆಂದು ನಂಬಿರುವ ಜನರು ಅದಕ್ಕೆ ಪೂಜೆ ನೆರವೇರಿಸುತ್ತಿದ್ದಾರೆ.
ಬಿಹಾರದ ಮುಜಾಫರ್​ಪುರ್​ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಸ್ಥಳೀಯರು ವಿಚಿತ್ರ ಮೇಕೆ ಮರಿಯನ್ನು ನೋಡಲು ಕಿಕ್ಕಿರಿದಿದ್ದು, ಭೂಮಿಗೆ ಬಂದು ದೇವರೆಂದು ಪೂಜೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ತಾಯಿ ಸಿಂಹವು ತನ್ನ ಮರಿಗೆ ಏನು ಹೇಳ್ತಿದೆ ಗೆಸ್​ ಮಾಡಿ: ಇಲ್ಲಿದೆ ನೋಡಿ ಕುತೂಹಲಕಾರಿ ಉತ್ತರ!
ಕಪ್ಪು ಮತ್ತು ಬಿಳಿ ಬಣ್ಣ ಮಿಶ್ರಿತ ಮೇಕೆಯೂ ಎರಡು ಕಣ್ಣುಗಳನ್ನು ಹೊಂದಿವೆ. ಕಣ್ಣುಗಳು ಬಾಯಿಯ ಒಳಗೆ ಹೊಂದಿಕೊಂಡಂತಿವೆ. ಇಂತಹ ಪ್ರಾಣಿಗಳನ್ನು ಪೂಜಿಸುವ ಕಟುಂಬಕ್ಕೆ ಅದೃಷ್ಟ ಮತ್ತು ಏಳಿಗೆ ಬರುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಮೇಕೆ ಮರಿಯನ್ನು ಪೂಜಿಸಲು ನೂಕುನುಗ್ಗಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ವೈರಲ್​ ಆಗಿದೆ.
ನಾನು ಇದುವರೆಗೂ ಇಂತಹ ಪ್ರಾಣಿಯನ್ನೇ ನೋಡಿಲ್ಲ. ಆದರೆ, ದೇವರಿಗೆ ಮಾತ್ರ ಇಂತಹ ಪ್ರಾಣಿಗಳ ಬಗ್ಗೆ ತಿಳಿದಿದೆ. ಇದು ನನಗೆ ಗೊತ್ತಿದೆ ಎಂದು ಮಹಿಳೆಯೊಬ್ಬಳ ಧ್ವನಿ ವೈರಲ್​ ಆಗಿರುವ ವಿಡಿಯೋ ಹಿನ್ನೆಲೆಯಲ್ಲಿ ಕೇಳಬಹುದಾಗಿದೆ.
ಇನ್ನು ಘಟನೆ ಬಗ್ಗೆ ಮಾತನಾಡಿರುವ ಹೆಸರೇಳಲು ಬಯಸದ ಮೇಕೆ ಮರಿಯ ಮಾಲೀಕ, ಮರಿ ಜನನವಾದಾಗಿನಿಂದ ಜನರು ನನ್ನ ಮನೆಯ ಮುಂದೆ ಕಿಕ್ಕಿರಿದು ನಿಲ್ಲುತ್ತಿದ್ದಾರೆ. ಪೂಜೆ ಮಾಡಲು ಬಯಸುತ್ತಿದ್ದಾರೆ. ಆದರೆ, ಮರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನಾವು ನಿರಾಕರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ವೈಜ್ಞಾನಿಕ ಕಾರಣಕ್ಕೆ ಬಂದರೆ ಮೇಕೆ ಮರಿಯು ಸೈಕ್ಲೊಪಿಯಾ ಎಂಬ ವಿರಳಾತಿ ವಿರಳ ಕಾಯಿಲೆಯಿಂದ ಬಳಲುತ್ತಿದೆ. ಮೆದುಳಿನ ಎರಡು ಅರ್ಧಗೋಳಗಳು ಬೇರ್ಪಡೆಯಾಗದಿದ್ದಾಗ ಈ ರೀತಿಯಾಗುತ್ತದೆ.
ಇದನ್ನೂ ಓದಿ:ಏರ್​ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ; ಅಪಾಯದಿಂದ ಪಾರಾದ ಪ್ರಯಾಣಿಕರು
ಈ ಜೀವಿಗಳು ದೀರ್ಘಕಾಲದವರೆಗೆ ಬದುಕುವುದಿಲ್ಲ. 2017ರಲ್ಲಿ ಅಸ್ಸಾಂನಲ್ಲಿ ಒಂದು ಕಣ್ಣಿನ ಮೇಕೆ ಜನಿಸಿತ್ತು. ಇದು ಒಂದು ವಾರಗಳಿಗಿಂತ ಹೆಚ್ಚು ಕಾಲ ಮಾತ್ರ ಬದುಕಿತ್ತು. ಆವಾಗಲೂ ಸಹ ಜನರು ಮೇಕೆಗೆ ಪೂಜೆ ನೆರವೇರಿಸಿದ್ದರು.(ಏಜೆನ್ಸೀಸ್​)
(ವಿಡಿಯೋ ಕೃಪೆ: ಡೈಲಿ ಮೇಲ್​)

VIDEO| ಮಗಳಿಗೆ ತಂದ ಗೊಂಬೆಯ ಜನನಾಂಗದಲ್ಲಿ ಬಟನ್: ಒತ್ತಿದ್ದ ಕೂಡಲೇ ಶಬ್ದ ಕೇಳಿ ಬೆಚ್ಚಿದ ಮಹಿಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + ten =
Remember me
