ರಾಂಚಿ:ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್​ ಆಗಿತ್ತು. ಏಲಿಯೆನ್​ ಒಂದು ನಡುರಸ್ತೆಯಲ್ಲಿ ನಡೆದು ಹೋಗುತ್ತಿರುವ ವಿಡಿಯೋ ಅದು ಎನ್ನಲಾಗಿತ್ತು. ಸಾವಿರಾರು ಜನರು ಆ ವಿಡಿಯೋವನ್ನು “ಸ್ಕೇರಿ” ಎಂದು ಶೇರ್​ ಮಾಡಿಕೊಂಡಿದ್ದರು. ಆದರೆ ನಿಜಕ್ಕೂ ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ಏನು ಎನ್ನುವುದರ ಅಸಲಿ ಸ್ಟೋರಿ ಇಲ್ಲಿದೆ.
ಏಲಿಯೆನ್​ ನಡೆದಿದ್ದು ಎಂದು ಹೇಳಲಾದ ವಿಡಿಯೋವನ್ನು ಜಾರ್ಖಂಡ್‌ನ ಹಜಾರಿಬಾಗ್​ನಲ್ಲಿ ಬೈಕ್​ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ಮೊಬೈಲ್​ನಲ್ಲಿ ಶೂಟ್​ ಮಾಡಿದ್ದರು. ನೆಟ್ಟಿಗರು ಅದೆಷ್ಟು ಸೂಕ್ಷ್ಮವಾಗಿ ವಿಡಿಯೋವನ್ನು ಗಮನಿಸಿದ್ದರೆಂದರೆ, 30 ಸೆಕೆಂಡಿನ ವಿಡಿಯೋದ 13ನೇ ಸೆಕೆಂಡಿಗೆ ವಿಡಿಯೋದಲ್ಲಿ ಯುಎಫ್​ಒ (ಗುರುತಿಸಲಾಗದ ಹಾರುವ ವಸ್ತು) ಕೆಂಪು ಬೆಳಕಿನೊಂದಿಗೆ ಹೋಗುವುದೂ ಕಾಣುತ್ತಿದೆ ಎಂದು ಹೇಳಲಾರಂಭಿಸಿದ್ದರು. ಏಲಿಯೆನ್​ ನಮ್ಮ ಭಾರತಕ್ಕೆ ಬಂದುಬಿಟ್ಟಿದೆ, ದಯವಿಟ್ಟು ಇದರ ಬಗ್ಗೆ ತನಿಖೆ ನಡೆಸಿ ಎಂದು ನಾಸಾ ಟ್ವಿಟ್ಟರ್​ ಖಾತೆಯನ್ನೂ ಮೆನ್ಷನ್​ ಮಾಡಲಾರಂಭಿಸಿದ್ದರು. ಕೆಲವು ವಿದೇಶಿ ಮಾಧ್ಯಮಗಳೂ ಈ ಏಲಿಯೆನ್​ ಬಗ್ಗೆ ಸುದ್ದಿ ಮಾಡಿದ್ದವು. ಆದರೆ ಇದೀಗ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಅಲ್ಲಿ ಇದ್ದದ್ದು ಏಲಿಯೆನ್​ ಅಲ್ಲವೇ ಅಲ್ಲ!
ವಿಡಿಯೋ ಮಾಡಿದ್ದ ಪ್ರಯಾಣಿಕರನ್ನು ಪತ್ತೆ ಹಚ್ಚಿರುವ ಮಾಧ್ಯಮವೊಂದು ಅವರನ್ನು ಮಾತನಾಡಿಸಿದೆ. ಅಲ್ಲಿ ನಡೆದಿದ್ದು ಏನು ಎನ್ನುವುದರ ಮಾಹಿತಿ ಪಡೆದಿದೆ. ವಿಡಿಯೋ ಮಾಡಿದವರು ಹೇಳಿರುವ ಪ್ರಕಾರ ಅಲ್ಲಿ ನಡೆದುಕೊಂಡು ಹೋಗುತ್ತಿದ್ದದ್ದು ಏಲಿಯೆನ್​ ಅಲ್ಲ ಬದಲಾಗಿ ಓರ್ವ ಮಹಿಳೆ. ಮಹಿಳೆಯೊಬ್ಬಳು ಬೆತ್ತಲೆಯಾಗಿ ರಸ್ತೆ ಮೇಲೆ ನಡೆದು ಹೋಗುತ್ತಿದ್ದಳಂತೆ. ಸೆರೈಕೆಲಾಕ್ಕೆ ತೆರಳುತ್ತಿದ್ದ ದೀಪಕ್​ ಮತ್ತು ಆತನ ಸ್ನೇಹಿತ ಮಹಿಳೆಯನ್ನು ನೋಡಿಕೊಂಡು ಮುಂದೆ ಸಾಗಿದ್ದಾರೆ. ಅದಾದ ಮೇಲೆ ಮಹಿಳೆಯ ವಿಚಿತ್ರ ವರ್ತನೆ ಕಂಡು ಮತ್ತೆ ವಾಪಾಸು ಬಂದಿದ್ದಾರೆ. ಮಹಿಳೆಯ ಸ್ವಲ್ಪ ಹಿಂದೆ ಬಂದು ಆಕೆ ನಡೆಯುತ್ತಿದ್ದುದ್ದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಆದರೆ ಅದನ್ನು ತಪ್ಪು ತಿಳಿದ ಜನರು ವಿಡಿಯೋದಲ್ಲಿರುವುದು ಏಲಿಯೆನ್​ ಎಂದೇ ಪರಿಗಣಿಸಿ ಹಂಚಿಕೊಳ್ಳಲಾರಂಭಿಸಿದ್ದಾರೆ.
ಅಂದ ಹಾಗೆ ಈ ವೈರಲ್​ ವಿಡಿಯೋವನ್ನು ಹಜಾರಿಬಾಗ್​ನಲ್ಲಿ ಶೂಟ್​ ಮಾಡಿದ್ದಲ್ಲ. ಸೆರೈಕೆಲಾದಲ್ಲಿ ಏಪ್ರಿಲ್​ 27ರಂದು ಶೂಟ್​ ಮಾಡಿರುವುದು. ಕೇವಲ 30 ಸೆಕೆಂಡಿನ ವಿಡಿಯೋ ವೈರಲ್​ ಆಗಿದೆ ಆದರೆ ನಮ್ಮ ಬಳಿ ಅದರ 1.30 ನಿಮಿಷದ ವಿಡಿಯೋ ಇದೆ ಎಂದು ದೀಪಕ್​ ಮತ್ತು ಆತನ ಸ್ನೇಹಿತ ತಿಳಿಸಿದ್ದಾರೆ. (ಏಜೆನ್ಸೀಸ್​)

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಮಾತು ಬಾರದ, ಕಿವಿ ಕೇಳದ ಬಾಲಕಿ ಮೇಲೆ ಅತ್ಯಾಚಾರ! ಇಳಿ ಸಂಜೆಯ ಹೊತ್ತಿಗೆ ನಡೆದೇ ಹೋಯಿತು ಘೋರ ಕೃತ್ಯ

ಮದುವೆಯಾಗಿ ಒಂದೂವರೆ ತಿಂಗಳಲ್ಲಿ ಯೂಟ್ಯೂಬರ್​ ಪತ್ನಿ ಆತ್ಮಹತ್ಯೆ! ಹಿಂಸೆ ಕೊಟ್ಟ ಗಂಡ ಪೊಲೀಸರ ಅತಿಥಿಯಾದ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:fifteen + twenty =
Remember me
