ಅಲಿಗಢ:ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಥಳಿಸಿ ನಡುರಸ್ತೆಯಲ್ಲೇ ತ್ರಿವಳಿ ತಲಾಖ್ ನೀಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.ಇದನ್ನೂ ಓದಿ:ಕತ್ತರಿಸಿದ ಎಡಗೈಯನ್ನು ಬಲಗೈನಲ್ಲೇ ಹಿಡಿದು ಮಾರುಕಟ್ಟೆಯಲ್ಲಿ ತಿರುಗಾಡಿದ ಯುವಕ..ಸಂತ್ರಸ್ತೆಯನ್ನು ಸಿವಿಲ್ ಲೈನ್ ಪ್ರದೇಶದ ಜಮಾಲ್ಪುರ್ ಗೋಲ್ ಮಾರ್ಕೆಟ್ ನಿವಾಸಿ ಅಫ್ರೀನ್ ಎಂದು ಗುರುತಿಸಲಾಗಿದ್ದು, ಆಕೆಯ ಹತ್ರಾಸ್ ನಿವಾಸಿ ಮುಝಮ್ಮಿಲ್ ಜತೆಗೆ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಆ ವೇಳೆ ಆಕೆಯ ಮನೆಯವರು ವರನ ಕುಟುಂಬಕ್ಕೆ ಸಾಕಷ್ಟು ವರದಕ್ಷಿಣೆ ನೀಡಿದ್ದರೂ ಸಹಿತ ಆತ ವರದಕ್ಷಿಣೆಯಿಂದ ತೃಪ್ತನಾಗಿರಲಿಲ್ಲ. ಆಕೆಗೆ ಆಗಾಗ ಹೊಡೆಯುತ್ತಿದ್ದನು.
ಇತ್ತೀಚೆಗಷ್ಟೇ ತನ್ನ ಪತಿ ಚಿನ್ನದ ಸರ ಮತ್ತು ಬುಲೆಟ್ ಬೈಕ್‌ಗೆ ಬೇಡಿಕೆ ಇಟ್ಟಿದ್ದ. ಆದರೆ, ಈ ಬೇಡಿಕೆಯನ್ನು ತನ್ನ ಹೆತ್ತವರು ಪೂರೈಸಲು ಆಕೆ ಸಾಧ್ಯವಿಲ್ಲ ಎಂದು ತನ್ನ ಪತಿಗೆ ತಿಳಿಸಿದಾಗ ಆತ ಆಕೆಯ ಮೇಲೆ ಕೋಪಗೊಂಡು, ತೀವ್ರವಾಗಿ ಥಳಿಸಿ ನಡುರಸ್ತೆಯಲ್ಲಿ ಮೂರು ಬಾರಿ ವಿಚ್ಛೇದನ ನೀಡಿ ಹೋಗಿದ್ದಾನೆ. ಈ ವೇಳೆ ಆಕೆ ಅವನಿಗೆ ದುಂಬಾಲು ಬಿದ್ದರೂ ಸಹಿತ ಆತ ಆಕೆಯೊಂದಿಗೆ ಬಾಳಲು ಇಷ್ಟವಿಲ್ಲ ಎಂದು ಹೇಳಿದ್ದಾನೆ.
ಇದನ್ನೂ ಓದಿ:ಮಾನವ ಮುಖವನ್ನೇ ಹೋಲುವ ವಿಚಿತ್ರ ಕರುವಿನ ಜನನ..!
ವಿಷಯಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆ ಎಸ್‌ಎಸ್‌ಪಿ ಕಚೇರಿಗೆ ತೆರಳಿ ಅಧಿಕಾರಿಯನ್ನು ಭೇಟಿಯಾಗಿ ಸಹಾಯಕ್ಕಾಗಿ ಮನವಿ ಮಾಡಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಮತ್ತು ಆಕೆಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದು ಅಧಿಕಾರಿ ಸಂತ್ರಸ್ತೆಗೆ ಭರವಸೆ ನೀಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − 5 =
Remember me
